ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

WCL 2025: ಪಾಕ್‌ ವಿರುದ್ಧದ ಸೆಮಿಫೈನಲ್‌ ಪಂದ್ಯ ಬಹಿಷ್ಕರಿಸಲು ಮುಂದಾದ ಭಾರತ ತಂಡ

ಪ್ರಯೋಜಕತ್ವದದಿಂದ ಹಿಂದೆ ಸರಿದ ವಿಚಾರವನ್ನು ಕಂಪನಿಯ ಸಂಸ್ಥಾಪಕ ನಿಶಾಂತ್ ಪಿಟ್ಟಿ ಎಕ್ಸ್‌ನಲ್ಲಿ ಪ್ರಕಟಿಸಿದ್ದು, ಪಂದ್ಯಾವಳಿಯ ಸೆಮಿಫೈನಲ್ ತಲುಪಿದ್ದಕ್ಕಾಗಿ ಇಂಡಿಯಾ ಚಾಂಪಿಯನ್ಸ್ ತಂಡಕ್ಕೆ ಶ್ಲಾಘಿಸುತ್ತಿದ್ದರೂ, ಪಾಕಿಸ್ತಾನ ಭಾಗವಹಿಸುವ ಪಂದ್ಯಗಳೊಂದಿಗೆ ಸಂಬಂಧ ಹೊಂದಲು ನಾವು ಬಯಸುವುದಿಲ್ಲ ಎಂದು ಹೇಳಿದ್ದಾರೆ.

ಭಾರತ-ಪಾಕ್‌ ಲೆಜೆಂಡ್ಸ್‌  ಕ್ರಿಕೆಟ್‌ ಲೀಗ್‌ ಸೆಮಿ ಪಂದ್ಯ ಅನುಮಾನ

Profile Abhilash BC Jul 30, 2025 5:12 PM

ಲಂಡನ್‌: ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಿನ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್(WCL 2025) ಸೆಮಿಫೈನಲ್‌ ಪಂದ್ಯ ರದ್ದಾಗುವ ಸಾಧ್ಯತೆಯಿದೆ. ಪಹಲ್ಗಾಮ್‌ ದಾಳಿ ಹಾಗೂ ಇತ್ತೀಚಿಗೆ ಉಭಯ ದೇಶಗಳ ನಡು ಬಿಕ್ಕಟ್ಟು ಉಂಟಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಭಾರತೀಯ ಆಟಗಾರರು ಪಂದ್ಯವನ್ನು ಬಹಿಷ್ಕರಿಸಲು ನಿರ್ಧರಿಸಿದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಈ ಹಿಂದೆ ಲೀಗ್‌ ಪಂದ್ಯವನ್ನೂ ಕೂಡ ಭಾರತೀಯ ಆಟಗಾರರು ಬಹಿಷ್ಕರಿಸಿದ್ದರು.

"ಈ ಹಿಂದೆ ಪಾಕಿಸ್ತಾನ ವಿರುದ್ಧದ ಗ್ರೂಪ್ ಹಂತದ ಪಂದ್ಯದಲ್ಲಿ ತೆಗೆದುಕೊಂಡ ನಿಲುವಿನಂತೆಯೇ, ಭಾರತ ತಂಡವು ಸೆಮಿಫೈನಲ್‌ ಪಂದ್ಯದಲ್ಲೂ ಇದೇ ರೀತಿಯ ನಿಲುವನ್ನು ತೆಗೆದುಕೊಳ್ಳಲು ಸಜ್ಜಾಗಿದೆ" ಎಂದು ತಂಡಗಳ ಮೂಲಗಳು ತಿಳಿಸಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ. ಆಪರೇಷನ್ ಸಿಂದೂರ ನಂತರ ಭಾರತದ ಹಲವಾರು ಮಾಜಿ ಕ್ರಿಕೆಟಿಗರು ಪಾಕಿಸ್ತಾನದ ಜತೆ ಯಾವುದೇ ಸಂಬಂಧ ನಡೆಸದಂತೆ ಕರೆ ನೀಡಿದ್ದರು.

ಜುಲೈ 31 ರಂದು ಎಡ್ಜ್‌ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಪಂದ್ಯಾವಳಿಯ ಸೆಮಿಫೈನಲ್‌ನಲ್ಲಿ ಭಾರತ ತಂಡವು ಪಾಕಿಸ್ತಾನವನ್ನು ಎದುರಿಸಬೇಕಿತ್ತು. ಆದಾಗ್ಯೂ, ಪಂದ್ಯದ ಮುನ್ನಾದಿನ, ಭಾರತೀಯ ತಂಡದ ಪ್ರಾಯೋಜಕರಲ್ಲಿ ಒಬ್ಬರಾದ ಈಸ್‌ಮೈಟ್ರಿಪ್, ಭಯೋತ್ಪಾದನೆ ಮತ್ತು ಕ್ರಿಕೆಟ್ ಒಟ್ಟಿಗೆ ಹೋಗಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಸೆಮಿಫೈನಲ್ ಪಂದ್ಯದ ಪ್ರಯೋಜಕತ್ವದಿಂದ ಹಿಂದೆ ಸರಿದಿತ್ತು.

ಪ್ರಯೋಜಕತ್ವದದಿಂದ ಹಿಂದೆ ಸರಿದ ವಿಚಾರವನ್ನು ಕಂಪನಿಯ ಸಂಸ್ಥಾಪಕ ನಿಶಾಂತ್ ಪಿಟ್ಟಿ ಎಕ್ಸ್‌ನಲ್ಲಿ ಪ್ರಕಟಿಸಿದ್ದು, ಪಂದ್ಯಾವಳಿಯ ಸೆಮಿಫೈನಲ್ ತಲುಪಿದ್ದಕ್ಕಾಗಿ ಇಂಡಿಯಾ ಚಾಂಪಿಯನ್ಸ್ ತಂಡಕ್ಕೆ ಶ್ಲಾಘಿಸುತ್ತಿದ್ದರೂ, ಪಾಕಿಸ್ತಾನ ಭಾಗವಹಿಸುವ ಪಂದ್ಯಗಳೊಂದಿಗೆ ಸಂಬಂಧ ಹೊಂದಲು ನಾವು ಬಯಸುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ IND vs ENG 5th Test: ಅಂತಿಮ ಟೆಸ್ಟ್‌ನ ಪಿಚ್‌ ರಿಪೋರ್ಟ್‌, ಹವಾಮಾನ ವರದಿ ಹೀಗಿದೆ