IND vs ENG 5th Test: ಅಂತಿಮ ಟೆಸ್ಟ್‌ನ ಪಿಚ್ ರಿಪೋರ್ಟ್, ಹವಾಮಾನ ವರದಿ ಹೀಗಿದೆ
1934 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ತಂಡ ಇದೇ ಮೈದಾನದಲ್ಲಿ 7 ವಿಕೆಟ್‌ಗೆ 903 ಗಳಿಸಿತ್ತು. ಇದು ಇಲ್ಲಿನ ಅತ್ಯಧಿಕ ಸ್ಕೋರ್. ಇಲ್ಲಿ ಭಾರತದ ಅತ್ಯುತ್ತಮ ಸ್ಕೋರ್ 664 ಆಗಿದೆ. 2007 ರ ಸರಣಿಯಲ್ಲಿ ದಾಖಲಾಗಿತ್ತು. ದಿ ಓವಲ್‌ನಲ್ಲಿ ಮೊದಲು ಬ್ಯಾಟ್ ಮಾಡುವ ತಂಡಗಳು ಅತ್ಯೀಕ ಬಾರಿ ಗೆಲುವು ಸಾಧಿಸಿದೆ. 40 ಬಾರಿ ಗೆದ್ದಿವೆ. 37 ಪಂದ್ಯಗಳು ಡ್ರಾ ಆಗಿವೆ.


ಲಂಡನ್: ಇನ್ನಿಂಗ್ಸ್ ಸೋಲಿನ ಭೀತಿಗೆ ಒಳಗಾಗಿದ್ದರೂ ಅಪ್ರತಿಮ ಹೋರಾಟ ಪ್ರದರ್ಶಿಸಿದ ಟೀಂ ಇಂಡಿಯಾ, ಇಂಗ್ಲೆಂಡ್ ವಿರುದ್ದದ 4ನೇ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು. ಇದೀಗ ಸರಣಿಯ ಅಂತಿಮ(IND vs ENG 5th Test) ಪಂದ್ಯವನ್ನಾಡಲು ಸಜ್ಜಾಗಿದೆ. ಉಭಯ ತಂಡಗಳ ಈ ಪಂದ್ಯ ಗುರುವಾರ ಆರಂಭಗೊಳ್ಳಲಿದೆ. ಸರಣಿ ಸೋಲಿನ ಭೀತಿಯಿಂದ ಪಾರಾಗಬೇಕಿದ್ದರೆ ಈ ಪಂದ್ಯ ಗೆಲ್ಲಲೇ ಬೇಕು. ಸದ್ಯ ಸರಣಿಯಲ್ಲಿ 4 ಪಂದ್ಯಗಳ ಬಳಿಕ ಇಂಗ್ಲೆಂಡ್ 2-1ರಿಂದ ಮುನ್ನಡೆಯಲ್ಲಿದೆ. ಈ ಪಂದ್ಯದ ಪಿಚ್ ರಿಪೋರ್ಟ್(kennington oval pitch) ಮತ್ತು ಹವಾಮಾನ ವರದಿಯ(oval Weather Forecast) ಮಾಹಿತಿ ಇಲ್ಲಿದೆ
ಪಿಚ್ ರಿಪೋರ್ಟ್
ಇಲ್ಲಿನ ಓವಲ್ ಮೈದಾನದ ಪಿಚ್ ಮೇಲ್ಮೈ ಸಮತಟ್ಟಾಗಿದ್ದು ಮೊದಲ ಮೂರು ದಿನ ವೇಗಿಗಳಿಗೆ ಸಹಕಾರಿಯಾಗುವ ಈ ಪಿಚ್ ಕೊನೆಯ ಎರಡು ದಿನಗಳಲ್ಲಿ ಸ್ಪಿನ್ನರ್‌ಗಳಿಗೆ ನೆರವು ನೀಡುತ್ತದೆ. ಅಉ ಕೂಡ ಪಿಚ್‌ಗಳು ಬಿರುಕು ಬಿಟ್ಟರೆ ಮಾತ್ರ. ಹೊಸ ಚೆಂಡಿನಲ್ಲಿ ಸೀಮ್ ಬೌಲರ್‌ಗಳಿಗೆ ವಿಕೆಟ್ ಬೇಟೆಯಾಡಲು ಉತ್ತಮ ಅವಕಾಶವಿದೆ. ಆದರೂ ಇಲ್ಲಿ ಬ್ಯಾಟರ್‌ಗಳು ದೊಡ್ಡ ಇನಿಂಗ್ಸ್ ಆಡಲು ಸಾಧ್ಯ. ಒಂದು ಬಾರಿ ಬ್ಯಾಟರ್‌ಗಳು ಪಿಚ್‌ಗೆ ಸೆಟ್ ಆದರೆ ಬೌಲರ್‌ಗಳು ದಂಡಿಸಿಕೊಳ್ಳುವುದರಲ್ಲಿ ಅನುಮಾನವೇ ಬೇಡ.
1934 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ತಂಡ ಇದೇ ಮೈದಾನದಲ್ಲಿ 7 ವಿಕೆಟ್‌ಗೆ 903 ಗಳಿಸಿತ್ತು. ಇದು ಇಲ್ಲಿನ ಅತ್ಯಧಿಕ ಸ್ಕೋರ್. ಇಲ್ಲಿ ಭಾರತದ ಅತ್ಯುತ್ತಮ ಸ್ಕೋರ್ 664 ಆಗಿದೆ. 2007 ರ ಸರಣಿಯಲ್ಲಿ ದಾಖಲಾಗಿತ್ತು. ದಿ ಓವಲ್‌ನಲ್ಲಿ ಮೊದಲು ಬ್ಯಾಟ್ ಮಾಡುವ ತಂಡಗಳು ಅತ್ಯೀಕ ಬಾರಿ ಗೆಲುವು ಸಾಧಿಸಿದೆ. 40 ಬಾರಿ ಗೆದ್ದಿವೆ. 37 ಪಂದ್ಯಗಳು ಡ್ರಾ ಆಗಿವೆ.
ಸಕ್ರಿಯ ಬ್ಯಾಟ್ಸ್‌ಮನ್‌ಗಳಲ್ಲಿ, ಜೋ ರೂಟ್ ಇಲ್ಲಿ 41.73 ಸರಾಸರಿಯಲ್ಲಿ 793 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ 2 ಶತಕ ಮತ್ತು 4 ಅರ್ಧಶತಕಗಳಿವೆ. ಓಲಿ ಪೋಪ್ ಇಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ, ಮೂರು ಟೆಸ್ಟ್‌ಗಳಿಂದ 64.40 ಸರಾಸರಿಯಲ್ಲಿ 322 ರನ್‌ಗಳನ್ನು ಗಳಿಸಿದ್ದಾರೆ, ಒಂದು ಶತಕ ಮತ್ತು 2 ಅರ್ಧಶತಕಗಳನ್ನು ಬಾರಿಸಿದ್ದಾರೆ.
ಇದನ್ನೂ ಓದಿ IND vs ENG: ಓವಲ್‌ನಲ್ಲಿ ಭಾರತದ ಟೆಸ್ಟ್ ಸಾಧನೆ ಹೇಗಿದೆ?
ಹವಾಮಾನ ವರದಿ
ಹವಾಮಾನ ಮುನ್ಸೂಚನೆಯ ಪ್ರಕಾರ, ಪಂದ್ಯ ಮೊದಲ ದಿನ ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ ಮತ್ತು ಮಧ್ಯಾಹ್ನ ಸಣ್ಣ ಮಳೆಯಾಗು ಸಾಧ್ಯತೆ ಇದೆ. 2ನೇ ದಿನ ಹೆಚ್ಚು ಬಿಸಿಲು ಬೀಳಲಿದ್ದು, ಇಡೀ ದಿನದ ಆಟ ನಿರೀಕ್ಷಿಸಲಾಗಿದೆ. 3ನೇ ದಿನವೂ ಬಿಸಿಲು ಇರಲಿದೆ. ಆದರೆ 4ನೇ ದಿನ ಮಳೆಯಾಗುವ ಸಾಧ್ಯತೆಯಿದೆ.