ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮೊಹಮ್ಮದ್ ಸಿರಾಜ್ ಎಲ್ಲಿದ್ದರು?; ವೆಲ್ಲಿಂಗ್ಟನ್ ಟೆಸ್ಟ್‌ ಭಾರತದ ಆಯ್ಕೆ ನಿರ್ಧಾರವನ್ನು ಟೀಕಿಸಿದ ರವಿಶಾಸ್ತ್ರಿ

Ravi Shastriಸುನಿಲ್ ಗವಾಸ್ಕರ್ ಈ ನಿರ್ಧಾರವನ್ನು ಗೊಂದಲಕಾರಿ ಎಂದು ಕರೆದಿದ್ದರು, ಇದೀಗ ರವಿ ಶಾಸ್ತ್ರಿ ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 'ಎಕ್ಸ್' (X) ವೇದಿಕೆಯಲ್ಲಿ ಮಾತನಾಡಿದ ಭಾರತ ತಂಡದ ಮಾಜಿ ಕೋಚ್, ಸಿರಾಜ್ ಅವರನ್ನು ಆಡುವ ಬಳಗದಿಂದ ಹೊರಗಿಟ್ಟ ನಿರ್ಧಾರದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.

ವೆಲ್ಲಿಂಗ್ಟನ್ ಟೆಸ್ಟ್‌ ಭಾರತದ ಆಯ್ಕೆ ನಿರ್ಧಾರ ಟೀಕಿಸಿದ ರವಿಶಾಸ್ತ್ರಿ

Ravi Shastri -

Abhilash BC
Abhilash BC Nov 19, 2026 5:02 PM

ಮುಂಬಯಿ, ನ.19: ವೆಲ್ಲಿಂಗ್ಟನ್ ಟೆಸ್ಟ್ ಪಂದ್ಯದ ತಂಡದಿಂದ ಮೊಹಮ್ಮದ್ ಸಿರಾಜ್ ಅವರನ್ನು ಕೈಬಿಟ್ಟಿರುವುದು, ಮೊದಲ ದಿನದ ಆಟ ಮುಗಿದ ನಂತರದ ಪ್ರಮುಖ ಚರ್ಚಾ ವಿಷಯಗಳಲ್ಲಿ ಒಂದಾಗಿದೆ. ಭಾರತ ತಂಡವು ನಾಲ್ವರು ವೇಗದ ಬೌಲರ್‌ಗಳನ್ನು ಕಣಕ್ಕಿಳಿಸಿತು, ಆದರೆ ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆವೃತ್ತಿಯಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿರುವ ಸಿರಾಜ್‌ಗೆ, ತಂಡದಲ್ಲಿ ಸ್ಥಾನ ಸಿಗಲಿಲ್ಲ. ಇದು ಹಲವು ಮಾಜಿ ಆಟಗಾರರ ಟೀಕೆಗೆ ಗುರಿಯಾಯಿತು.

ಸುನಿಲ್ ಗವಾಸ್ಕರ್ ಈ ನಿರ್ಧಾರವನ್ನು ಗೊಂದಲಕಾರಿ ಎಂದು ಕರೆದಿದ್ದರು, ಇದೀಗ ರವಿ ಶಾಸ್ತ್ರಿ ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 'ಎಕ್ಸ್' (X) ವೇದಿಕೆಯಲ್ಲಿ ಮಾತನಾಡಿದ ಭಾರತ ತಂಡದ ಮಾಜಿ ಕೋಚ್, ಸಿರಾಜ್ ಅವರನ್ನು ಆಡುವ ಬಳಗದಿಂದ ಹೊರಗಿಟ್ಟ ನಿರ್ಧಾರದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.

ವೇಗ, ಕೌಶಲ್ಯ ಮತ್ತು ಪಿಚ್ ಸೀಮ್ ಮೂವ್‌ಮೆಂಟ್ ಆಯ್ಕೆಗೆ ಮಾನದಂಡಗಳಾಗಿದ್ದರೆ, ಆಗ ಸಿರಾಜ್ ಅವರನ್ನು ಏಕೆ ಪರಿಗಣಿಸಲಿಲ್ಲ ಎಂದು ಶಾಸ್ತ್ರಿ ಪ್ರಶ್ನಿಸಿದರು. ಆಸ್ಟ್ರೇಲಿಯಾದಲ್ಲಿ ಸಿರಾಜ್‌ಗೆ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಅವಕಾಶ ನೀಡಿದ್ದ ಭಾರತ ತಂಡದ ಮಾಜಿ ಕೋಚ್, ವೆಲ್ಲಿಂಗ್ಟನ್‌ನಲ್ಲಿ ಪಂದ್ಯದ ಗತಿಯನ್ನೇ ಬದಲಿಸುವ ಸಾಮರ್ಥ್ಯ ಈ ವೇಗದ ಬೌಲರ್‌ಗೆ ಇದೆ ಎಂದು ಹೇಳಿದರು.

"ಭಾರತವು ಬಲವಾಗಿ ಪುಟಿದೇಳುತ್ತದೆ ಎಂದು ಆಶಿಸುತ್ತೇನೆ. ಆದರೆ ವೇಗ, ಕೌಶಲ್ಯ ಮತ್ತು ಚೆಂಡು ಸ್ವಿಮ್ ಆಗುವ ಸಾಮರ್ಥ್ಯವನ್ನು ಮಾನದಂಡಗಳನ್ನಾಗಿ ಪರಿಗಣಿಸುವುದಾದರೆ, ಮತ್ತು ಗಂಟೆಗೆ 140 ಕಿ.ಮೀ. ವೇಗವನ್ನು ಕಂಡುಕೊಳ್ಳುವುದು ಕಷ್ಟವಾಗಿದ್ದಾಗ, ಒಂದು ಪ್ರಶ್ನೆ ಏಳುತ್ತದೆ. ಮೊಹಮ್ಮದ್ ಸಿರಾಜ್ ಎಲ್ಲಿದ್ದರು? ಅನುಭವ, ಆಕ್ರಮಣಕಾರಿ ಮನೋಭಾವ ಮತ್ತು ಚೆಂಡಿನ ಮೂಲಕ ಪಂದ್ಯದ ಗತಿಯನ್ನೇ ಬದಲಾಯಿಸುವ ಸಾಮರ್ಥ್ಯ, ಇವುಗಳಿಗೆ ಖಂಡಿತವಾಗಿಯೂ ಮಹತ್ವವಿದೆಯಲ್ಲವೇ!" ಎಂದು ಶಾಸ್ತ್ರಿ 'ಎಕ್ಸ್' (X) ನಲ್ಲಿ ಪ್ರಶ್ನೆ ಮಾಡಿದ್ದಾರೆ.

ಭಾರತ ತಂಡಕ್ಕೆ ಶೇಕಡಾ 35ರಷ್ಟು ದಂಡ ವಿಧಿಸಿದ ಐಸಿಸಿ

ಸಿರಾಜ್ ಅವರ ಅನುಪಸ್ಥಿತಿಯಲ್ಲಿ, ಬೌಲಿಂಗ್ ವಿಭಾಗದಲ್ಲಿ ಸಿಕ್ಕ ಅದ್ಭುತ ಆರಂಭವನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಭಾರತ ವಿಫಲವಾಯಿತು. ಜಸ್ಪ್ರೀತ್ ಬೂಮ್ರಾ ನ್ಯೂಜಿಲೆಂಡ್‌ನ ಅಗ್ರ ಕ್ರಮಾಂಕದ ಬ್ಯಾಟರ್‌ಗಳನ್ನು ಕಂಗೆಡಿಸಿದರಾದರೂ, ಉಳಿದ ವೇಗದ ಬೌಲರ್‌ಗಳಿಂದ ಅವರಿಗೆ ಸೂಕ್ತ ಬೆಂಬಲ ಸಿಗಲಿಲ್ಲ. ಇದರಿಂದಾಗಿ ಹೆನ್ರಿ ನಿಕೋಲ್ಸ್ ಮತ್ತು ಗ್ಲೆನ್ ಫಿಲಿಪ್ಸ್ ತಂಡವನ್ನು ಸಂಕಷ್ಟದಿಂದ ಪಾರುಮಾಡಿ, ಭಾರತದ ಕೈಯಲ್ಲಿದ್ದ ಮೇಲುಗೈಯನ್ನು ತಮ್ಮತ್ತ ಸೆಳೆದುಕೊಂಡರು. ದಿನದ ಅಂತ್ಯಕ್ಕೆ ನ್ಯೂಜಿಲೆಂಡ್ ಐದು ವಿಕೆಟ್ ನಷ್ಟಕ್ಕೆ 243 ರನ್ ಗಳಿಸಿದೆ.