WTC Final 2025: ಜೋಶ್ ಹ್ಯಾಜಲ್‌ವುಡ್ ಫೈನಲ್ ಗೆಲುವಿನ ನಾಗಾಲೋಟಕ್ಕೆ ಬ್ರೇಕ್
Josh Hazlewood: ಹ್ಯಾಜಲ್‌ವುಡ್ 9 ಟೂರ್ನಿಗಳ ಫೈನಲ್‌ನಲ್ಲಿ ಗೆದ್ದಿದ್ದರು. ಅಂಡರ್-19 ವಿಶ್ವಕಪ್, ಏಕದಿನ ವಿಶ್ವಕಪ್, ಟಿ20 ವಿಶ್ವಕಪ್, 2 ಬಾರಿ ಐಪಿಎಲ್, ಆಸ್ಟ್ರೇಲಿಯಾದ ಶೆಫೀಲ್ಡ್ ಶೀಲ್ಡ್, ಬಿಗ್‌ಬ್ಯಾಶ್ ಲೀಗ್‌ನ ಫೈನಲ್‌ಗಳಲ್ಲಿ ಹೇಜಲ್‌ವುಡ್ ಆಡಿದಾಗ ಅವರ ತಂಡ ಸೋತಿರಲಿಲ್ಲ. ಆದರೆ ಮೊದಲ ಬಾರಿಗೆ ಅವರು ಸೋಲಿನ ರುಚಿ ಕಂಡಿದ್ದಾರೆ.


ಲಂಡನ್: ಏಕದಿನ, ಟಿ20, ಟೆಸ್ಟ್, ಅಂಡರ್-19 ವಿಶ್ವಕಪ್ ಸೇರಿ ಫ್ರಾಂಚೈಸಿ ಲೀಗ್ ಫೈನಲ್‌ನಲ್ಲಿ ಸೋಲೇ ಕಾಣದ ಆಸ್ಟ್ರೇಲಿಯಾ ವೇಗದ ಬೌಲರ್ ಜೋಶ್ ಹೇಜಲ್‌ವುಡ್(Josh Hazlewood) ತಮ್ಮ ಕ್ರಿಕೆಟ್ ವೃತ್ತಿಬದುಕಿನಲ್ಲಿ ಮೊದಲ ಸೋಲು ಕಂಡಿದ್ದಾರೆ. ಚಾಂಪಿಯನ್ ಆಟಗಾರ ಎನಿಸಿಕೊಂಡಿದ್ದ ಅವರು ಈ ಬಾರಿ ಸೋಲು ಎದುರಿಸಿದ್ದಾರೆ. ಮೂರನೇ ಆವೃತ್ತಿಯ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ಫೈನಲ್(WTC Final 2025)ನಲ್ಲಿ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 5 ವಿಕೆಟ್ ಅಂತರದ ಸೋಲು ಕಂಡಿತ್ತು. ಈ ಮೂಲಕ ಹೇಜಲ್‌ವುಡ್ ಫೈನಲ್ ಗೆಲುವಿನ ನಾಗಲೋಟಕ್ಕೆ ಬ್ರೇಕ್ ಬಿದ್ದಿದೆ.
ಹ್ಯಾಜಲ್‌ವುಡ್ 9 ಟೂರ್ನಿಗಳ ಫೈನಲ್‌ನಲ್ಲಿ ಗೆದ್ದಿದ್ದರು. ಅಂಡರ್-19 ವಿಶ್ವಕಪ್, ಏಕದಿನ ವಿಶ್ವಕಪ್, ಟಿ20 ವಿಶ್ವಕಪ್, 2 ಬಾರಿ ಐಪಿಎಲ್, ಆಸ್ಟ್ರೇಲಿಯಾದ ಶೆಫೀಲ್ಡ್ ಶೀಲ್ಡ್, ಬಿಗ್‌ಬ್ಯಾಶ್ ಲೀಗ್‌ನ ಫೈನಲ್‌ಗಳಲ್ಲಿ ಹೇಜಲ್‌ವುಡ್ ಆಡಿದಾಗ ಅವರ ತಂಡ ಸೋತಿರಲಿಲ್ಲ. ಆದರೆ ಮೊದಲ ಬಾರಿಗೆ ಅವರು ಸೋಲಿನ ರುಚಿ ಕಂಡಿದ್ದಾರೆ.
After seven straight wins, Josh Hazlewood loses a final for the first time in his senior career! 😮 pic.twitter.com/Uzc545M19w
— Sportstar (@sportstarweb) June 14, 2025
ಶನಿವಾರ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಕೊನೆಗೊಂಡ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ 5 ವಿಕೆಟ್ ಗೆಲುವು ಸಾಧಿಸಿತು. 282 ರನ್‌ಗಳ ದೊಡ್ಡ ಗುರಿ ಪಡೆದಿದ್ದ ಬುವುಮಾ ಪಡೆ ಅಭೂತಪೂರ್ವ ಬ್ಯಾಟಿಂಗ್ ಹೋರಾಟ ಪ್ರದರ್ಶಿಸಿ ಇನ್ನೊಂದು ದಿನ ಬಾಕಿ ಇರುವಂತೆಯೇ ಟ್ರೋಫಿ ಮುಡಿಗೇರಿಸಿಕೊಂಡಿತು.
11 ನೇ ಟ್ರೋಫಿ ಕನಸು ಭಗ್ನ
ಆಸ್ಟ್ರೇಲಿಯಾ ತಂಡ ಇದುವರೆಗೆ ತಾನಾಡಿದ 14 ಐಸಿಸಿ ಟೂರ್ನಿಗಳ ಫೈನಲ್‌ಗಳ ಪೈಕಿ ಕೇವಲ 4ರಲ್ಲಿ ಮಾತ್ರ ಸೋತಿದೆ. ಈ ಹಿಂದಿನ 13 ಫೈನಲ್‌ಗಳಲ್ಲಿ 10 ಬಾರಿ ಟ್ರೋಫಿ ಗೆದ್ದಿತ್ತು. 6 ಬಾರಿ ಏಕದಿನ ವಿಶ್ವಕಪ್, 1 ಟಿ20 ವಿಶ್ವಕಪ್, 2 ಬಾರಿ ಚಾಂಪಿಯನ್ಸ್ ಟ್ರೋಫಿ ಹಾಗೂ 1 ಬಾರಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ತನ್ನದಾಗಿಸಿಕೊಂಡಿತ್ತು. 11ನೇ ಬಾರಿಗೆ ಪ್ರಶಸ್ತಿ ಗೆಲುವಿನ ನಿರೀಕ್ಷೆಯಲ್ಲಿದ್ದ ಆಸೀಸ್ ಪಡೆಗೆ ಈ ಬಾರಿ ದಕ್ಷಿಣ ಆಫ್ರಿಕಾ ಬಲವಾದ ಏಟು ನೀಡಿತು. ಆಸೀಸ್ 1975, 1996ರ ಏಕದಿನ ವಿಶ್ವಕಪ್ ಫೈನಲ್, 2010ರ ಟಿ20 ವಿಶ್ವಕಪ್ ಫೈನಲ್ ಹಾಗೂ ಈ ಬಾರಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಳಲ್ಲಿ ತಂಡ ಸೋತಿದೆ.