ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

WTC Final 2025: ಐಪಿಎಲ್‌ ಮುಗಿಯಿತು ಇನ್ನು ಟೆಸ್ಟ್‌ ಕ್ರಿಕೆಟ್‌ ಕಾವು

ವಿಶ್ವ ಟೆಸ್ಟ್‌ ಫೈನಲ್‌ ಪಂದ್ಯ ಜೂ.11 ರಿಂದ 15ರ ತನಕ ನಡೆಯಲಿದೆ. ಭಾರತ ಮತ್ತು ಇಂಗ್ಲೆಂಡ್‌ ಸರಣಿ ಜೂ.20 ರಿಂದ ಆರಂಭಾಗಿ ಆಗಸ್ಟ್‌ ಮೊದಲ ವಾರದ ತನಕ ನಡೆಯಲಿದೆ. ಈಗಾಗಲೇ ಟೆಸ್ಟ್‌ ಸರಣಿಯ ಭಾಗವಾಗಿ ಭಾರತ ತಂಡದ ಹಲವು ಆಟಗಾರರು ಇಂಗ್ಲೆಂಡ್‌ಗೆ ತಲುಪಿದ್ದು ಅಭ್ಯಾಸ ಪಂದ್ಯದಲ್ಲಿ ಪಾಲ್ಗೊಂಡಿದ್ದಾರೆ.

ಐಪಿಎಲ್‌ ಮುಗಿಯಿತು ಇನ್ನು ಟೆಸ್ಟ್‌ ಕ್ರಿಕೆಟ್‌ ಕಾವು

Profile Abhilash BC Jun 5, 2025 9:58 AM

ಲಂಡನ್‌: ಐಪಿಎಲ್‌ ಟಿ20 ಚುಟುಕು ಸಮರ ಮುಕ್ತಾಯಗೊಂಡಿದೆ. ಇನ್ನು ಕ್ರಿಕೆಟ್‌ ಜನಕರ ನಾಡು ಇಂಗ್ಲೆಂಡ್‌ನಲ್ಲಿ ದೀರ್ಘ ಸ್ವರೂಪದ ಟೆಸ್ಟ್‌ ಸರಣಿಯ ಕಾವು ಏರ ತೊಡಗಿದೆ. ಕೂಲ್‌ ಕೂಲ್‌ ವಾತಾವರಣದಲ್ಲಿ ಆಟಗಾರರು ಬಿಳಿ ಪೋಷಾಕು ಧರಿಸಿ 5 ದಿನಗಳ ಹೋರಾಟ ನಡೆಸಲು ಸಜ್ಜಾಗಿದ್ದಾರೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ(Australia vs South Africa) ತಂಡಗಳ ನಡುವಿನ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನೊಂದಿಗೆ(wtc final 2025) ಆರಂಭವಾಗುವ ಟೆಸ್ಟ್‌ ಆ ಬಳಿಕ ಪ್ರವಾಸಿ ಭಾರತ ತಂಡ ಆತಿಥೇಯ ಇಂಗ್ಲೆಂಡ್‌(india vs england test) ವಿರುದ್ಧ 5 ಪಂದ್ಯಗಳ ಟೆಸ್ಟ್‌ ಸರಣಿ ಆಡಲಿದೆ.

ವಿಶ್ವ ಟೆಸ್ಟ್‌ ಫೈನಲ್‌ ಪಂದ್ಯ ಜೂ.11 ರಿಂದ 15ರ ತನಕ ನಡೆಯಲಿದೆ. ಭಾರತ ಮತ್ತು ಇಂಗ್ಲೆಂಡ್‌ ಸರಣಿ ಜೂ.20 ರಿಂದ ಆರಂಭಾಗಿ ಆಗಸ್ಟ್‌ ಮೊದಲ ವಾರದ ತನಕ ನಡೆಯಲಿದೆ. ಈಗಾಗಲೇ ಟೆಸ್ಟ್‌ ಸರಣಿಯ ಭಾಗವಾಗಿ ಭಾರತ ತಂಡದ ಹಲವು ಆಟಗಾರರು ಇಂಗ್ಲೆಂಡ್‌ಗೆ ತಲುಪಿದ್ದು ಅಭ್ಯಾಸ ಪಂದ್ಯದಲ್ಲಿ ಪಾಲ್ಗೊಂಡಿದ್ದಾರೆ.

ಅಭ್ಯಾಸ ಆರಂಭಿಸಿದ ಆಸೀಸ್‌-ಹರಿಣ ಪಡೆ

ಚೊಚ್ಚಲ ವಿಶ್ವಕಪ್‌ ಟ್ರೋಫಿಯೊಂದನ್ನು ಗೆಲ್ಲುವ ಪಣ ತೊಟ್ಟಿರುವ ದಕ್ಷಿಣ ಆಫ್ರಿಕಾ ಮತ್ತು ಸತತ ಎರಡನೇ ಟ್ರೋಫಿ ಗೆಲ್ಲುವ ಹುಮ್ಮಸ್ಸಿನಲ್ಲಿರುವ ಆಸ್ಟ್ರೇಲಿಯಾ ಈಗಾಗಲೇ ಟೆಸ್ಟ್‌ ವಿಶ್ವಕಪ್‌ಗೆ ಅಭ್ಯಾಸ ಆರಂಭಿಸಿದೆ. ಆಸ್ಟ್ರೇಲಿಯಾ ನಾಯಕ ಪ್ಯಾಟ್‌ ಕಮಿನ್ಸ್‌, ಸ್ಟೀವನ್‌ ಸ್ಮಿತ್‌ ಸೇರಿ ಬುತೇಕ ಆಟಗಾರರು ಲಾರ್ಡ್ಸ್‌ ಮೈದಾನಲ್ಲಿ ಅಭ್ಯಾಸ ಶುರು ಮಾಡಿದ್ದಾರೆ. ಆರ್‌ಸಿಬಿ ಪರ ಫೈನಲ್‌ ಆಡಿದ್ದ ಜೋಶ್‌ ಹ್ಯಾಜಲ್‌ವುಡ್‌ ಇನ್ನಷ್ಟೇ ತಂಡ ಸೇರಬೇಕಿದೆ.

ಅತ್ತ ದಕ್ಷಿಣ ಆಫ್ರಿಕಾ ಫೈನಲ್‌ಗೂ ಮುನ್ನ ಜಿಂಬಾಬ್ವೆ ವಿರುದ್ಧ 4 ದಿನಗಳ ಅಭ್ಯಾಸ ಪಂದ್ಯ ಆಡುತ್ತಿದೆ. ಈ ಮೂಲಕ ಆಸೀಸ್‌ ಪಡೆಯನ್ನು ಸೋಲಿಸಲು ತಂಡವನ್ನು ಸಜ್ಜುಗೊಳಿಸುತ್ತಿದೆ. ವಿಶ್ವ ಕ್ರಿಕೆಟ್‌ನಲ್ಲಿ ಚೋಕರ್ಸ್‌ ಹಣೆಪಟ್ಟಿ ಕಟ್ಟಿಕೊಂಡಿರುವ ಹರಿಣ ಪಡೆಗೆ ಇದೀಗ ಈ ಅವಮಾನವನ್ನು ತೊಡೆದು ಹಾಕಲು ಉತ್ತಮ ಅವಕಾಶವೊಂದು ಲಭಿಸಿದೆ. ಗೆದ್ದರೆ ಚೊಚ್ಚಲ ವಿಶ್ವಕಪ್‌ ಟ್ರೋಫಿಯೊಂದನ್ನು ಗೆದ್ದ ಸಾಧನೆ ಮಾಡಲಿದೆ.

ಇದನ್ನೂ ಓದಿ IND vs ENG Test Series: ಟೆಸ್ಟ್‌ ಸರಣಿಗೆ ಅಯ್ಯರ್ ಆಯ್ಕೆ ಮಾಡದ ಪ್ರಶ್ನೆಗೆ ಕೋಚ್‌ ಗಂಭೀರ್ ತೀಕ್ಷ್ಣ ಪ್ರತಿಕ್ರಿಯೆ