ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Yash Dayal: ಬಂಧನಕ್ಕೆ ತಡೆ ನೀಡುವಂತೆ ಅಲಹಾಬಾದ್ ಹೈಕೋರ್ಟ್‌ಗೆ ಯಶ್‌ ದಯಾಳ್ ಅರ್ಜಿ

ಮಹಿಳೆಯ ಹೇಳಿಕೆ ನಿಜವಾಗಿದ್ದರೂ, ಅದು ಅವಳನ್ನು ಮದುವೆಯಾಗುವುದಾಗಿ ನೀಡಿದ ಭರವಸೆಯನ್ನು ಈಡೇರಿಸುವಲ್ಲಿ ವಿಫಲವಾಗಿದೆಯೇ ಹೊರತು ಸುಳ್ಳು ಭರವಸೆಯಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ವರದಿಯ ಪ್ರಕಾರ, ಮದುವೆಯ ನೆಪದಲ್ಲಿ ದಯಾಳ್ ಮಹಿಳೆಯೊಂದಿಗೆ ಸ್ನೇಹ ಅಥವಾ ಸಂಬಂಧವನ್ನು ಬೆಳೆಸಿಕೊಂಡಿಲ್ಲ ಎಂದು ಅರ್ಜಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ಬಂಧನಕ್ಕೆ ತಡೆ ನೀಡುವಂತೆ ಹೈಕೋರ್ಟ್‌ಗೆ ಯಶ್‌ ದಯಾಳ್ ಅರ್ಜಿ

Profile Abhilash BC Jul 11, 2025 9:13 AM

ಲಕ್ನೋ: ಮದುವೆಯಾಗುವುದಾಗಿ ನಂಬಿಸಿ ಮಹಿಳೆಯೊಬ್ಬರನ್ನು 'ಮಾನಸಿಕ ಮತ್ತು ದೈಹಿಕವಾಗಿ' ಶೋಷಿಸಿದ ಆರೋಪದ ಮೇಲೆ ಗಾಜಿಯಾಬಾದ್(Ghaziabad) ಪೊಲೀಸರು ತಮ್ಮ ವಿರುದ್ಧ ಪ್ರಕರಣ ದಾಖಲಿಸಿದ ಕೆಲವು ದಿನಗಳ ನಂತರ, ಯಶ್ ದಯಾಳ್(Yash Dayal) ಬಂಧನಕ್ಕೆ ತಡೆ ನೀಡುವಂತೆ ಅಲಹಾಬಾದ್ ಹೈಕೋರ್ಟ್‌ಗೆ(Allahabad High Court) ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.

ಜೂನ್ 21 ರಂದು ಮುಖ್ಯಮಂತ್ರಿಯವರ ಆನ್‌ಲೈನ್ ದೂರು ಪೋರ್ಟಲ್ (ಐಜಿಆರ್‌ಎಸ್) ಮೂಲಕ ಮಹಿಳೆ ದೂರು ದಾಖಲಿಸಿದ ನಂತರ, ಪೊಲೀಸರು ದಯಾಳ್ ವಿರುದ್ಧ ಬಿಎನ್‌ಎಸ್ ಸೆಕ್ಷನ್ 69 (ಮದುವೆಯಾಗುವ ಸುಳ್ಳು ಭರವಸೆ ಸೇರಿದಂತೆ ಮೋಸದ ವಿಧಾನಗಳಿಂದ ಲೈಂಗಿಕ ಸಂಭೋಗ) ಅಡಿಯಲ್ಲಿ ಭಾನುವಾರ ಪ್ರಕರಣ ದಾಖಲಿಸಿದ್ದರು. ಇದೀಗ ಹೈಕೋರ್ಟ್‌ನಲ್ಲಿ ಸಲ್ಲಿಸಲಾದ ತಮ್ಮ ರಿಟ್ ಅರ್ಜಿಯಲ್ಲಿ, ಮದುವೆಯ ನೆಪದಲ್ಲಿ ಮಹಿಳೆಯೊಂದಿಗೆ ಯಾವುದೇ ದೈಹಿಕ ಸಂಬಂಧವನ್ನು ಹೊಂದಿಲ್ಲ ಎಂದು ದಯಾಳ್ ತಿಳಿಸಿದ್ದಾರೆ.

ಮಹಿಳೆಯ ಹೇಳಿಕೆ ನಿಜವಾಗಿದ್ದರೂ, ಅದು ಅವಳನ್ನು ಮದುವೆಯಾಗುವುದಾಗಿ ನೀಡಿದ ಭರವಸೆಯನ್ನು ಈಡೇರಿಸುವಲ್ಲಿ ವಿಫಲವಾಗಿದೆಯೇ ಹೊರತು ಸುಳ್ಳು ಭರವಸೆಯಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ವರದಿಯ ಪ್ರಕಾರ, ಮದುವೆಯ ನೆಪದಲ್ಲಿ ದಯಾಳ್ ಮಹಿಳೆಯೊಂದಿಗೆ ಸ್ನೇಹ ಅಥವಾ ಸಂಬಂಧವನ್ನು ಬೆಳೆಸಿಕೊಂಡಿಲ್ಲ ಎಂದು ಅರ್ಜಿಯಲ್ಲಿ ಸ್ಪಷ್ಟಪಡಿಸಲಾಗಿದೆ.

27 ವರ್ಷದ ಯಶ್ ದಯಾಳ್ ತನ್ನ ವಿರುದ್ಧ ಆರೋಪ ಮಾಡಿರುವ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸುವಂತೆ ಖುಲ್ದಾಬಾದ್ ಪೊಲೀಸ್ ಠಾಣೆಗೆ ಮನವಿ ಮಾಡಿದ್ದಾರೆ. ದೂರಿನಲ್ಲಿ, ಮಹಿಳೆ ಐಫೋನ್ ಮತ್ತು ಲ್ಯಾಪ್‌ಟಾಪ್ ಕದ್ದಿದ್ದಾರೆ ಎಂದು ದಯಾಳ್ ಆರೋಪಿಸಿದ್ದಾರೆ.

ಇದನ್ನೂ ಓದಿ ಆರ್‌ಸಿಬಿ ವೇಗಿ ಯಶ್‌ ದಯಾಳ್‌ ವಿರುದ್ಧ ಎಫ್‌ಐಆರ್‌ ದಾಖಲು! ಕಾರಣವೇನು ಗೊತ್ತೆ?

2021 ರಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ಆ ಮಹಿಳೆಯ ಪರಿಚಯವಾಯಿತು ನಂತರ ಅವರು ಪರಸ್ಪರ ಸಂವಹನ ನಡೆಸಲು ಪ್ರಾರಂಭಿಸಿದರು. ಇದಾಗಿ ಶಾಪಿಂಗ್‌ಗಾಗಿ ಅವಳು ಪದೇ ಪದೇ ತನ್ನಿಂದ ಹಣವನ್ನು ಸಾಲವಾಗಿ ಪಡೆದಿದ್ದಳು. ಇದಕ್ಕೆ ತನ್ನ ಬಳಿ ಪುರಾವೆಗಳಿವೆ ಎಂದು ದಯಾಳ್ ಆರೋಪಿಸಿದ್ದಾರೆ. ಈ ಮಹಿಳೆ ತನ್ನ ವಿರುದ್ಧ ಗಾಜಿಯಾಬಾದ್ ಪೊಲೀಸರಿಗೆ ದೂರು ನೀಡಿದ್ದಾಳೆಂದು ತಿಳಿದಾಗ, ಆಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾಗಿ ದಯಾಳ್ ಹೇಳಿದ್ದಾರೆ.