IND vs ENG 2n Test: ಅರ್ಧಶತಕ ಬಾರಿಸಿ ರೋಹಿತ್ ದಾಖಲೆ ಮುರಿದ ಜೈಸ್ವಾಲ್
ಪಂದ್ಯದಲ್ಲಿ 107 ಎಸೆತ ಎದುರಿಸಿದ ಜೈಸ್ವಾಲ್ 87 ರನ್ ಬಾರಿಸಿದರು. ಇವರ ಜತೆಗಾರ ಕೆ.ಎಲ್ ರಾಹುಲ್ ಕೇವಲ 2 ರನ್‌ಗೆ ಆಟ ಮುಗಿಸಿದರು. ಆ ಬಳಿಕ ಬಂದ ಕರುಣ್ ನಾಯರ್ ಕೂಡ ಹೆಚ್ಚು ಹೊತ್ತು ಕ್ರೀಸ್ ಆಕ್ರಮಿಸಿಕೊಳ್ಳುವಲ್ಲಿ ವಿಫಲರಾದರು. ಅವರು 31 ರನ್ ಗಳಿಸಿದರು. ಕಳೆದ ಪಂದ್ಯದ ಎರಡೂ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಪಂತ್ ಕೂಡ ಇಲ್ಲಿ ಕೈಕೊಟ್ಟರು. 25 ರನ್‌ಗೆ ಸೀಮಿತರಾರು.

ಬರ್ಮಿಂಗ್‌ಹ್ಯಾಮ್: ಇಲ್ಲಿನ ಎಡ್ಜ್‌ಬಾಸ್ಟನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್(IND vs ENG 2nd Test) ಪಂದ್ಯದಲ್ಲಿ ಭಾರತ ತಂಡ ಆರಂಭಿಕ ಆಘಾತ ಎದುರಿಸಿದರೂ ಯಶಸ್ವಿ ಜೈಸ್ವಾಲ್(Yashasvi Jaiswal) ಅರ್ಧಶತಕ ಬಾರಿಸುವ ಮೂಲಕ ರೋಹಿತ್ ಶರ್ಮ(Rohit Sharma) ಅವರ ದಾಖಲೆಯೊಂದನ್ನು ಮುರಿದಿದ್ದಾರೆ
59 ಎಸೆತಗಳಲ್ಲಿ ತಮ್ಮ ಟೆಸ್ಟ್ ವೃತ್ತಿಜೀವನದ 11ನೇ ಅರ್ಧಶತಕ ಪೂರ್ತಿಗೊಳಿಸಿದ ಜೈಸ್ವಾಲ್ ಇದೇ ವೇಳೆ ಸೇನಾ ದೇಶಗಳಲ್ಲಿ (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ) ಅತಿ ಹೆಚ್ಚು ಬಾರಿ 50+ ರನ್ ಬಾರಿಸಿದ ಬಾರಿಸಿದ ಭಾರತೀಯ ಆರಂಭಿಕ ಆಟಗಾರರ ಎನಿಸಿದರು. ಇದುವರೆಗೂ ಈ ದಾಖಲೆ ರೋಹಿತ್ ಶರ್ಮ ಹೆಸರಿನಲ್ಲಿತ್ತು. ರೋಹಿತ್ ಆರಂಭಿಕ ಆಟಗಾರನಾಗಿ 4 ಬಾರಿ 50+ ಸ್ಕೋರ್ ದಾಖಲಿಸಿದ್ದರು. ಇದೀಗ ಜೈಸ್ವಾಲ್ 5 ಬಾರಿ 50+ ರನ್ ಬಾರಿಸಿ ದಾಖಲೆ ತಮ್ಮ ಹೆಸರಿಗೆ ಬರೆದಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತೀಯ ಆರಂಭಿಕ ಆಟಗಾರನಾಗಿ ಅತಿ ಹೆಚ್ಚು 50+ ಸ್ಕೋರ್‌ಗಳನ್ನು ಗಳಿಸಿದವರ ಪಟ್ಟಿಯಲ್ಲಿ ಯಶಸ್ವಿ ಜೈಸ್ವಾಲ್ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. 12 ಇನ್ನಿಂಗ್ಸ್‌ಗಳಲ್ಲಿ 7 ಬಾರಿ 50 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ದಾಖಲೆ ದಿಗ್ಗಜ ಸುನೀಲ್ ಗವಾಸ್ಕರ್ ಹೆಸರಿನಲ್ಲಿದೆ. ಅವರು 20 ಬಾರಿ ಈ ಸಾಧನೆ ಮಾಡಿದ್ದರೆ. ರೋಹಿತ್ ಶರ್ಮಾ(8) ಎರಡನೇ ಸ್ಥಾನದಲ್ಲಿದ್ದಾರೆ.