ಐಪಿಎಲ್ ಕೋಚಿಂಗ್ ನಡೆಸಲು ಮುಂದಾದ ಯುವರಾಜ್ ಸಿಂಗ್; ಯಾವ ತಂಡ?
Yuvraj Singh: ಯುವರಾಜ್ ಸಿಂಗ್ 132 ಐಪಿಎಲ್ ಪಂದ್ಯವನ್ನಾಡಿ 2750 ರನ್ ಬಾರಿಸಿದ್ದಾರೆ. 83 ರನ್ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. 36 ವಿಕೆಟ್ ಕೂಡ ಕಬಳಿಸಿದ ಸಾಧನೆ ಇವರದ್ದಾಗಿದೆ. ಭಾರತ ತಂಡ 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಯುವರಾಜ್ ಅವರ ಆಲ್ರೌಂಡರ್ ಪ್ರದರ್ಶನ ಪ್ರಮುಖ ಪಾತ್ರವಹಿಸಿತ್ತು.
Yuvraj Singh -
ನವದೆಹಲಿ, ಜೂ.19: ಭಾರತದ ಕ್ರಿಕೆಟ್ ದಂತಕಥೆಗಳಲ್ಲಿ ಒಬ್ಬರಾಗಿರುವ ಯುವರಾಜ್ ಸಿಂಗ್(Yuvraj Singh) ತಮ್ಮ ವೃತ್ತಿಪರ ಕೋಚಿಂಗ್ ವೃತ್ತಿಜೀವನವನ್ನು ಆರಂಭಿಸಲು ಮುಂದಾಗಿದ್ದು, 2027ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2027) ಋತುವಿಗೆ ಮುಂಚಿತವಾಗಿ ಡೆಲ್ಲಿ ಕ್ಯಾಪಿಟಲ್ಸ್(Delhi Capitals) ಫ್ರಾಂಚೈಸಿಯನ್ನು ಸೇರಲಿದ್ದಾರೆ ಎನ್ನಲಾಗಿದೆ.
ವರದಿಗಳ ಪ್ರಕಾರ, ಯುವರಾಜ್ ಸಿಂಗ್ ತಮ್ಮ ಮೊದಲ ಅಂತರರಾಷ್ಟ್ರೀಯ ನಾಯಕ ಸೌರವ್ ಗಂಗೂಲಿ ಕ್ರಿಕೆಟ್ ನಿರ್ದೇಶಕರಾಗಿರುವ ಡೆಲ್ಲಿ ಫ್ರಾಂಚೈಸಿಯ ಮೂಲಕವೇ ತಮ್ಮ ಕೋಚಿಂಗ್ ವೃತ್ತಿಜೀವನವನ್ನು ಪ್ರಾರಂಭಿಸಿಲಿದ್ದಾರೆ ಎನ್ನಲಾಗಿದೆ. 2019 ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನೀವೃತ್ತಿ ಹೊಂದಿರುವ ಯುವರಾಜ್ ಸಿಂಗ್, 2015 ರಲ್ಲಿ ಐಪಿಎಲ್ ಋತುವಿನಲ್ಲಿ ದೆಹಲಿ ಫ್ರಾಂಚೈಸಿಯೊಂದಿಗೆ ಆಟಗಾರನಾಗಿ ಸಂಬಂಧ ಹೊಂದಿದ್ದರು. 2015ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅವರನ್ನು ಹರಾಜಿನಲ್ಲಿ 16 ಕೋಟಿ ರೂ. ನೀಡಿ ಖರೀದಿಸಿತ್ತು. ಇದೀಗ ತಾವು ಆಡಿದ್ದ ತಂಡಕ್ಕೇ ಕೋಚ್ ಆಗಲು ಯುವಿ ಸಿದ್ಧವಾದಂತಿದೆ. ಮೂಲಗಳ ಪ್ರಕಾರ ಯುವರಾಜ್ ಜತೆ ಫ್ರಾಂಚೈಸಿ ಈಗಾಗಲೇ ಮಾತುಕತೆ ನಡೆಸಿದ್ದು ಕೋಚಿಂಗ್ ನಡೆಸಲು ಯುವಿ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ, ಅಧಿಕೃತ ಮಾಹಿತಿ ಇನ್ನಷ್ಟೇ ಬರಬೇಕಿದೆ.
ಎರಡು ಐಪಿಎಲ್‌ಗಳ ವಿಜೇತ ಯುವರಾಜ್, ದೆಹಲಿ ತಂಡದೊಂದಿಗೆ ತಮ್ಮ ಪ್ರಯಾಣದ ಮೊದಲು ತನಗಾಗಿ ಬಲವಾದ ಪ್ರಗತಿಯನ್ನು ನಿರ್ಮಿಸಿಕೊಂಡಿದ್ದಾರೆ. ಟೀಮ್ ಇಂಡಿಯಾದ ಸ್ಟಾರ್ ಯುವ ಬ್ಯಾಟರ್ ಅಭಿಷೇಕ್ ಶರ್ಮಾ ಪ್ರಸ್ತುತ ಭಾರತದ ನಾಯಕ ಶುಭಮನ್ ಗಿಲ್ ಅವರಿಗೆ ಮಾರ್ಗದರ್ಶನ ನೀಡಿದ್ದರು. ಐಪಿಎಲ್ 2026 ಕ್ಕೂ ಮೊದಲು, ಅವರು ಲಕ್ನೋ ಸೂಪರ್ ಜೈಂಟ್ಸ್ ನಾಯಕ ರಿಷಭ್ ಪಂತ್‌ಗೂ ಮಾರ್ಗದರ್ಶನ ನೀಡಿದ್ದರು. ಮಾತ್ರವಲ್ಲದೆ ಪ್ರಭ್ಸಿಮ್ರಾನ್ ಸಿಂಗ್, ಅನ್ಮೋಲ್‌ಪ್ರೀತ್ ಸಿಂಗ್ ಮತ್ತು ನಮನ್ ಧೀರ್ ಅವರಂತಹ ಹಲವಾರು ಪಂಜಾಬ್ ಕ್ರಿಕೆಟಿಗರನ್ನು ಬೆಳೆಸಿದ ಕೀರ್ತಿಯೂ ಯುವರಾಜ್ ಅವರದ್ದಾಗಿದೆ.
ಸರಣಿ ಕ್ಲೀನ್ ಸ್ವೀಪ್ ಯೋಜನೆಯಲ್ಲಿ ಭಾರತ; ಆಫ್ಘಾನ್‌ಗೆ ವೈಟ್‌ವಾಶ್ ಭೀತಿ!
ಯುವರಾಜ್ ಸಿಂಗ್ 132 ಐಪಿಎಲ್ ಪಂದ್ಯವನ್ನಾಡಿ 2750 ರನ್ ಬಾರಿಸಿದ್ದಾರೆ. 83 ರನ್ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. 36 ವಿಕೆಟ್ ಕೂಡ ಕಬಳಿಸಿದ ಸಾಧನೆ ಇವರದ್ದಾಗಿದೆ. ಭಾರತ ತಂಡ 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಯುವರಾಜ್ ಅವರ ಆಲ್ರೌಂಡರ್ ಪ್ರದರ್ಶನ ಪ್ರಮುಖ ಪಾತ್ರವಹಿಸಿತ್ತು.
"ಡಗೌಟ್‌ನಲ್ಲಿ ಯುವರಾಜ್ ಸಿಂಗ್ ಇರಬೇಕೆಂದು ಯಾರು ಬಯಸುವುದಿಲ್ಲ?, ಆಶಿಶ್ ನೆಹ್ರಾ, ಜಹೀರ್ ಖಾನ್ ಮತ್ತು ವೀರೇಂದ್ರ ಸೆಹ್ವಾಗ್ ಸೇರಿದಂತೆ ಅವರ ಮಾಜಿ ತಂಡದ ಅನೇಕರು ಐಪಿಎಲ್‌ನಲ್ಲಿ ಕೋಚಿಂಗ್ ಅವಧಿಯನ್ನು ಹೊಂದಿದ್ದರು. ಯುವರಾಜ್ ಸ್ವಲ್ಪ ತಡವಾಗಿ ಬರಬಹುದು, ಆದರೆ ಅವರು ಯುವಕರೊಂದಿಗೆ ಕೆಲಸ ಮಾಡಲು ಮತ್ತು ಪಾತ್ರದ ಬೇಡಿಕೆಗಳನ್ನು ಅರ್ಥಮಾಡಿಕೊಳ್ಳಲು ಸಾಕಷ್ಟು ಸಮಯವನ್ನು ಕಳೆದಿದ್ದಾರೆ" ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಪದೇ ಪದೇ ರಾಹುಲ್ ಬ್ಯಾಟಿಂಗ್ ಕ್ರಮಾಂಕ ಬದಲಾವಣೆ ಬಗ್ಗೆ ಮಾಜಿ ಆಟಗಾರರ ಕಿಡಿ
"ಯುವರಾಜ್ ಆಟಗಾರರಿಗೆ ಕೇವಲ ಮೈದಾನದಲ್ಲಿ ಮಾತ್ರ ತರಬೇತಿ ನೀಡುವುದಿಲ್ಲ, ಫೋನ್ ಕರೆಗಳು ಅಥವಾ ವರ್ಚುವಲ್ ಮೀಟಿಂಗ್ ಮೂಲಕವೂ ಆಟಗಾರರಿಗೆ ಮಾರ್ಗದರ್ಶನ ನೀಡುತ್ತಾರೆ. ಗಂಟೆಗಳ ಕಾಲ ನೆಟ್ ಗಳ ಹಿಂದೆ ನಿಂತು ತಮ್ಮ ಆಟಗಾರರೊಂದಿಗೆ ಕೆಲಸ ಮಾಡುತ್ತಾರೆ. ಇದು ನಿಜವಾಗಿಯೂ ಪ್ರಾಯೋಗಿಕ ವಿಧಾನವಾಗಿದ್ದು, ಇದು ಹಲವಾರು ಕ್ರಿಕೆಟಿಗರಿಗೆ ಪ್ರಯೋಜನವನ್ನು ನೀಡಿದೆ" ಎಂದು ಮೂಲಗಳು ತಿಳಿಸಿವೆ.