ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vastu Tips: ವಾಸ್ತು ಪ್ರಕಾರ ಸರಿಯಾದ ದಿಕ್ಕಿನಲ್ಲಿ ಸ್ನೇಕ್ ಪ್ಲಾಂಟ್ ಇಟ್ಟರೆ ಅದೃಷ್ಟ, ಸಮೃದ್ಧಿ ಖಚಿತ!

ಸ್ನೇಕ್ ಪ್ಲಾಂಟ್ ಮನೆಯಲ್ಲಿ ಇಡುವುದರಿಂದ ಒಳಾಂಗಣ ಗಾಳಿ ಶುದ್ಧವಾಗುತ್ತದೆ ಮತ್ತು ಆರೋಗ್ಯಕರ ವಾತಾವರಣ ನಿರ್ಮಾಣವಾಗುತ್ತದೆ. ವಾಸ್ತು ಪ್ರಕಾರ ಇದನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟರೆ ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡಿ, ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಏಕಾಗ್ರತೆ ಹೆಚ್ಚಿಸಲು, ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಮತ್ತು ಆರ್ಥಿಕ ಸ್ಥಿತಿಯಲ್ಲೂ ಉತ್ತಮ ಬದಲಾವಣೆ ತರಲು ಸಹಕಾರಿ ಎಂದು ನಂಬಲಾಗಿದೆ.

ಸ್ನೇಕ್ ಪ್ಲಾಂಟ್: ಅದೃಷ್ಟ ತರೋ ಸಸ್ಯ

ಸಂಗ್ರಹ ಚಿತ್ರ -

Profile
Sushmitha Jain Mar 22, 2026 8:17 AM

ಬೆಂಗಳೂರು: ವಾಸ್ತು ಶಾಸ್ತ್ರ (Vastu Shastra) ದ ಪ್ರಕಾರ, ಮನೆಯಲ್ಲಿರುವ ಕೆಲವು ಸಸ್ಯಗಳು ಪರಿಸರವನ್ನು ಶುದ್ಧವಾಗಿಡುವುದರ ಜೊತೆಗೆ, ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತವೆ. ಇವು ವ್ಯಕ್ತಿಯ ವೃತ್ತಿಜೀವನಕ್ಕೂ ಶುಭಫಲ ನೀಡುತ್ತವೆ ಎಂಬ ನಂಬಿಕೆ ಇದೆ. ಇಂತಹ ಪ್ರಯೋಜನಕಾರಿ ಸಸ್ಯಗಳಲ್ಲಿ ಸ್ನೇಕ್ ಪ್ಲಾಂಟ್ (Snake Plant) ಕೂಡ ಒಂದು ಪ್ರಮುಖವಾದುದು. ಈ ಸಸ್ಯವು ಮನೆಯಲ್ಲಿ ಉಂಟಾಗುವ ಹಲವು ಸಮಸ್ಯೆಗಳನ್ನು ಕಡಿಮೆ ಮಾಡುವುದರೊಂದಿಗೆ, ಆರ್ಥಿಕವಾಗಿ ಸಹ ಲಾಭ ತರಲು ಸಹಾಯಕವಾಗುತ್ತದೆ. ಆದ್ದರಿಂದ ವಾಸ್ತು ಪ್ರಕಾರ(Vastu Tips) ಸ್ನೇಕ್ ಪ್ಲಾಂಟ್ ಅನ್ನು ಯಾವ ದಿಕ್ಕಿನಲ್ಲಿ ನೆಡಬೇಕು ಎಂಬುದನ್ನು ಈಗ ತಿಳಿದುಕೊಳ್ಳೋಣ.

ಸ್ನೇಕ್ ಪ್ಲಾಂಟ್ ಇಡುವಾಗ ಗಮನಿಸಬೇಕಾದ ವಿಷಯಗಳು:

ಈ ಸಸ್ಯವನ್ನು ನೆಡುವಾಗ ಅದನ್ನು ತುಂಬಾ ಗಿಡಗಳ ನಡುವೆ ಇಡಬಾರದು. ಬೇರೆ ಸಸ್ಯಗಳಿಂದ ಸಂಪೂರ್ಣವಾಗಿ ಮುಚ್ಚಿದರೆ, ಅದರ ಪರಿಣಾಮ ಕಡಿಮೆಯಾಗಬಹುದು ಮತ್ತು ನಕಾರಾತ್ಮಕ ಶಕ್ತಿ ಹೆಚ್ಚುವ ಸಾಧ್ಯತೆ ಇದೆ. ಆದ್ದರಿಂದ ಇದನ್ನು ಸ್ವಲ್ಪ ತೆರೆಯಾದ ಸ್ಥಳದಲ್ಲಿ ಇಡುವುದು ಉತ್ತಮ. ಹಾಗೆಯೇ ಟೇಬಲ್ ಅಥವಾ ಎತ್ತರದ ಮೇಲ್ಮೈಗಳಿಗಿಂತ ನೆಲದ ಮೇಲೆ ಅಥವಾ ಸರಿಯಾದ ಸ್ಥಾನದಲ್ಲಿ ಇಡುವುದು ಉತ್ತಮ ಎಂದು ಹೇಳಲಾಗುತ್ತದೆ.


ಅಧ್ಯಯನ ಮತ್ತು ಕೆಲಸಕ್ಕೆ ಸಹಾಯಕ:

ಮನೆಯಲ್ಲಿ ಸ್ಟಡಿ ರೂಮ್‌ನಲ್ಲಿ ಸ್ನೇಕ್ ಪ್ಲಾಂಟ್ ಇಟ್ಟರೆ ಏಕಾಗ್ರತೆ ಹೆಚ್ಚುತ್ತದೆ. ಇದು ಓದು ಹಾಗೂ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಕಚೇರಿಯಲ್ಲಿ ಇದನ್ನು ಮೇಜಿನ ಬಳಿ ಅಥವಾ ಕಿಟಕಿಯ ಹತ್ತಿರ ಇಟ್ಟರೆ ಕಾರ್ಯಕ್ಷಮತೆ ಹೆಚ್ಚಲು ಸಹಾಯಕವಾಗುತ್ತದೆ.

Vastu Tips: ಮನೆಯಲ್ಲಿ ಈ ಸಣ್ಣ ಬದಲಾವಣೆಗಳನ್ನು ಮಾಡಿದ್ರೆ ಸಾಕು, ಒತ್ತಡ ಮಾಯ!


ಯಾವ ದಿಕ್ಕಿನಲ್ಲಿ ಇಡಬೇಕು?

ವಾಸ್ತು ಪ್ರಕಾರ ಸ್ನೇಕ್ ಪ್ಲಾಂಟ್ ಅನ್ನು ಮನೆಯ ಒಳಾಂಗಣ ಮತ್ತು ಹೊರಾಂಗಣದಲ್ಲಿ ಎರಡಲ್ಲೂ ಇಡಬಹುದು. ವಿಶೇಷವಾಗಿ ಮಲಗುವ ಕೋಣೆ, ಬಾತ್ರೂಮ್ ಅಥವಾ ಕೋಣೆಯ ಮೂಲೆಗಳಲ್ಲಿ ಇಡುವುದು ಶುಭಕರವೆಂದು ಪರಿಗಣಿಸಲಾಗಿದೆ. ಲಿವಿಂಗ್ ರೂಮಿನಲ್ಲಿ ಇದನ್ನು ಜನರ ಗಮನಕ್ಕೆ ಬರುವಂತೆ ಇಟ್ಟರೆ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ.

ಆರೋಗ್ಯ ಮತ್ತು ವಾತಾವರಣಕ್ಕೆ ಲಾಭ:

ಸ್ನೇಕ್ ಪ್ಲಾಂಟ್ ಗಾಳಿಯನ್ನು ಶುದ್ಧೀಕರಿಸುವಲ್ಲಿ ಬಹಳ ಪರಿಣಾಮಕಾರಿ. ಇದು ರಾತ್ರಿಯಲ್ಲಿಯೂ ಆಮ್ಲಜನಕವನ್ನು ಬಿಡುಗಡೆ ಮಾಡುವ ವಿಶೇಷ ಗುಣ ಹೊಂದಿದೆ. ಹೀಗಾಗಿ ಮಲಗುವ ಕೋಣೆಯಲ್ಲಿ ಇಡುವುದು ಆರೋಗ್ಯಕರ ಗಾಳಿಯ ಹರಿವಿಗೆ ಸಹಕಾರಿ. ಜೊತೆಗೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹ ನೆರವಾಗುತ್ತದೆ.