ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಸಮಸ್ಯೆಗಳಿಗೆ ಅಹ್ವಾನ ಕೊಡುವ ಮೂರು ಮೂಲೆಯ ಮನೆ

ಮೂರು ಮೂಲೆಯ ಜಾಗದ ಮನೆ ಖರೀದಿ ಮಾಡಬಾರದು ಎನ್ನುತ್ತಾರೆ ವಾಸ್ತು ತಜ್ಞರು. ಇದು ಯಾಕೆ ಎನ್ನುವುದು ಹೆಚ್ಚಿನವರು ತಿಳಿದಿರಲಿಕ್ಕಿಲ್ಲ. ವಾಸ್ತು ಶಾಸ್ತ್ರಗಳ ಪ್ರಕಾರ ಮೂರು ಮೂಲೆಯ ಮನೆ, ಜಾಗಗಳು ನಾನಾ ರೀತಿಯ ಸಮಸ್ಯೆಗಳಿಗೆ ಅಹ್ವಾನ ನೀಡುತ್ತದೆ. ಹೀಗಾಗಿ ಮೂರು ಮೂಲೆಯ ಮನೆ, ಜಾಗ ಖರೀದಿ ಮಾಡಿದರೆ ಜೀವನದಲ್ಲಿ ತೊಂದರೆಗಳು ಹೆಚ್ಚಾಗುತ್ತದೆ ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರು.

ಮೂರು ಮೂಲೆಯ ಮನೆ ಬೇಡವೇ ಬೇಡ

ಬಾಡಿಗೆಗೆ (Home for rent) ಇರಲಿ ಅಥವಾ ಸ್ವಂತಕ್ಕಾಗಿ ಆಗಿರಲಿ ಮೂರು ಮೂಲೆಯ ಮನೆಯನ್ನು (Vastu for home) ಖರೀದಿ ಮಾಡಬೇಡಿ ಎನ್ನುತ್ತಾರೆ ವಾಸ್ತು ತಜ್ಞರು. ಯಾಕೆಂದರೆ ಇದರಿಂದ ಮನೆಯಲ್ಲಿ (Vastu tips) ನಾನಾ ರೀತಿಯ ಸಮಸ್ಯೆಗಳು ಉಂಟಾಗಬಹುದು. ಸ್ವಂತ ಮನೆ ಹೊಂದುವುದು ಎಲ್ಲರಿಗೂ ಸುಲಭದ ಮಾತಲ್ಲ. ಜೀವನ ಪೂರ್ತಿ ದುಡಿದ ಹಣ ಜಾಗ ಖರೀದಿ, ಮನೆ ನಿರ್ಮಾಣ ಅಥವಾ ಖರೀದಿಯಲ್ಲಿ ನಷ್ಟವಾಗಿ ಹೋಗುತ್ತದೆ. ಆದರೂ ಒಂದು ನೆಮ್ಮದಿ ಏನೆಂದರೆ ಪುಟ್ಟದಾದರೂ ಸರಿ ನಮ್ಮದು ಎನ್ನುವ ಮನೆ ಇದೆಯಲ್ವಾ ಎನ್ನುವುದು. ಸ್ವಂತ ಮನೆ ಹೊಂದುವುದು ಎಲ್ಲರಿಗೂ ಸಂತೋಷದ ವಿಷಯ. ಆದರೆ ಮನೆ ಖರೀದಿಸುವಾಗ ವಾಸ್ತು ನಿಯಮಗಳನ್ನು ಪಾಲಿಸಬೇಕು. ಹಾಗಿದ್ದಾಗ ಮಾತ್ರ ಮನೆ ನೆಮ್ಮದಿಯ ತಾಣವಾಗುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ ಮನೆ ಖರೀದಿ ಮಾಡುವಾಗ ಅಥವಾ ನಿರ್ಮಿಸುವಾಗ ವಾಸ್ತು ನಿಯಮಗಳನ್ನು ಪಾಲಿಸಲೇಬೇಕು. ಇದರಿಂದ ಸಾಕಷ್ಟು ಸಮಸ್ಯೆಗಳು ದೂರವಾಗುತ್ತದೆ. ಮುಂಬರುವ ಅನೇಕ ಸಮಸ್ಯೆಗಳಿಂದ ಪಾರಾಗಬಹುದು.

ಮನೆ ಖರೀದಿ ಅಥವಾ ನಿರ್ಮಾಣದ ವೇಳೆ ಮೂರು ಮೂಲೆಯ ಮನೆಯನ್ನು ಖರೀದಿಸಲೇ ಬಾರದು ಎನ್ನುತ್ತಾರೆ ವಾಸ್ತು ತಜ್ಞರು. ಮೂರು ಮೂಲೆ ಇರುವ ಮನೆ ವಾಸ್ತು ದೃಷ್ಟಿ ಕೋನದ ಪ್ರಕಾರ ಒಳ್ಳೆಯದಲ್ಲ ಎನ್ನಲಾಗಿದೆ.

ಏನು ಸಮಸ್ಯೆ?

ವಾಸ್ತು ಶಾಸ್ತ್ರದ ಪ್ರಕಾರ ಮೂರು ಮೂಲೆಯ ಮನೆಯನ್ನು ಖರೀದಿಸುವುದರಿಂದ ವ್ಯಕ್ತಿಯ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ. ಯಾಕೆಂದರೆ ಅಂತಹ ಮನೆ ಕೇತುವಿನ ಮನೆ ಎಂದು ಪರಿಗಣಿಸಲಾಗುತ್ತದೆ.

ಜ್ಯೋತಿಷ್ಯದಲ್ಲಿ ಕೇತು ಗ್ರಹವನ್ನು ಅತ್ಯಂತ ಕ್ರೂರ ಗ್ರಹವೆಂದು ಪರಿಗಣಿಸಲಾಗಿದೆ. ಮನೆಯ ಆಕಾರ ವಿ ಅಥವಾ ಎಲ್ ಆಗಿದ್ದರೆ ಅದು ಶುಭವಲ್ಲ. ಅಲ್ಲದೇ ವಿ ಆಕಾರದಲ್ಲಿ ಎರಡು ರಸ್ತೆಗಳು ಮನೆಯ ಕಡೆಗೆ ಬರುತ್ತಿದ್ದರೆ ಅದನ್ನು ಅಶುಭವೆಂದೇ ಪರಿಗಣಿಸಲಾಗುತ್ತದೆ. ಇದರೊಂದಿಗೆ ರಸ್ತೆಯ ಬಲಭಾಗದಲ್ಲಿರುವ ಎಲ್ ಆಕಾರದ ಮನೆಗಳು ಕೂಡ ಒಳ್ಳೆಯದಲ್ಲ.

ಮೂರು ಮೂಲೆಯ ಮನೆಯಲ್ಲಿ ವಾಸಿಸುವುದರಿಂದ ವ್ಯಕ್ತಿಯ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ. ಇದರಿಂದ ವಾಸ್ತು ದೋಷ ಉಂಟಾಗುತ್ತದೆ. ಮನೆಯಲ್ಲಿ ಆರ್ಥಿಕ ನಷ್ಟ, ಕುಟುಂಬದಲ್ಲಿ ಜಗಳ ಕಂಡು ಬರುತ್ತದೆ. ನಕಾರಾತ್ಮಕತೆಯು ಅಂತಹ ಮನೆಗೆ ಬೇಗನೆ ಪ್ರವೇಶಿಸುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.

ಇದನ್ನೂ ಓದಿ: Vastu Tips: ಮನೆಯ ಈ ಭಾಗದಲ್ಲಿ ಎಂದಿಗೂ ಚಪ್ಪಲಿ ಇಡಬೇಡಿ

ಏನು ಪರಿಹಾರ ?

ಮೂರು ಮೂಲೆಯ ಮನೆಯಲ್ಲಿ ವಾಸಿಸುವವರು ಅದರ ಕೆಟ್ಟ ಪರಿಣಾಮಗಳನ್ನು ತಪ್ಪಿಸಲು ಮುಖ್ಯ ದ್ವಾರವನ್ನು ಮನೆಯ ಮಧ್ಯದಲ್ಲಿ ಇಡಬಾರದು. ಬದಲಿಗೆ ಒಂದು ಮೂಲೆಯಲ್ಲಿ ಇರಿಸಬೇಕು. ವಿ ಆಕಾರದ ಮನೆಯಲ್ಲಿ ವಾಸಿಸುವವರು ರಸ್ತೆ ಬದಿಯ ಬಾಗಿಲಿನ ಮೇಲೆ ಸಣ್ಣ ಗಿಡಗಳನ್ನು ನೆಡಬೇಕು. ಮನೆಯಲ್ಲಿ ಎರಡು ಬಾಗಿಲುಗಳಿದ್ದರೆ ಎರಡನ್ನೂ ಒಟ್ಟಿಗೆ ತೆರೆಯಕೂಡದು ಎನ್ನುತ್ತದೆ ವಾಸ್ತು ನಿಯಮಗಳು.