ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vastu Tips: ಮನೆಯಲ್ಲಿ ಧನ, ಸಮೃದ್ಧಿ ಹಾಗೂ ಸಕಾರಾತ್ಮಕ ಶಕ್ತಿ ಹೆಚ್ಚಾಗಬೇಕಾ..?; ಹಾಗಾದ್ರೆ ಈ ವಾಸ್ತು ನಿಯಮ ಪಾಲಿಸಿ

ಮನೆಯಲ್ಲಿ ಧನ, ಸಮೃದ್ಧಿ ಹಾಗೂ ಸಕಾರಾತ್ಮಕ ಶಕ್ತಿ ಹೆಚ್ಚಲು ಮುಖ್ಯ ದ್ವಾರದ ವಾಸ್ತು ಅತ್ಯಂತ ಮಹತ್ವದ್ದು ಎಂದು ನಂಬಲಾಗಿದೆ. ಮುಖ್ಯ ಬಾಗಿಲಿನ ಮೇಲೆ ಗಣೇಶನ ಚಿತ್ರ ಇಡುವುದು, ಎಡಬದಿಯಲ್ಲಿ ಶಮಿ ಗಿಡ ನೆಡುವುದು, ಕೆಂಪು ಸಿಂಧೂರದಿಂದ ಸ್ವಸ್ತಿಕ ಚಿಹ್ನೆ ಹಾಕುವುದು ಹಾಗೂ ತಾಮ್ರದ ಸೂರ್ಯ ದೇವರ ಪ್ರತಿಮೆ ಅಳವಡಿಸುವುದು ಶುಭಕರ ಕ್ರಮಗಳೆಂದು ಹೇಳಲಾಗುತ್ತದೆ

ಧನ–ಸಮೃದ್ಧಿಗೆ ಮುಖ್ಯ ದ್ವಾರ ವಾಸ್ತು ಟಿಪ್ಸ್

ಮುಖ್ಯ ದ್ವಾರ -

Profile
Sushmitha Jain Feb 18, 2026 8:03 AM

ಬೆಂಗಳೂರು: ಮನೆಯ ಪ್ರತಿಯೊಂದು ದಿಕ್ಕು ವಾಸ್ತುಶಾಸ್ತ್ರದಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ. ವಿಶೇಷವಾಗಿ ಮನೆಯ ಮುಖ್ಯ ಪ್ರವೇಶ (Vastu Tips for Main Door) ದ್ವಾರವು ವ್ಯಕ್ತಿಯ ಖ್ಯಾತಿ, ಪ್ರಗತಿ ಮತ್ತು ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ. ಧನಾತ್ಮಕ ಮತ್ತು ಋಣಾತ್ಮಕ ಶಕ್ತಿಗಳು ಮನೆಯೊಳಗೆ ಪ್ರವೇಶಿಸುವ ಪ್ರಮುಖ ಸ್ಥಳವೇ ಈ ದ್ವಾರ. ಆದ್ದರಿಂದ ಮುಖ್ಯ ಬಾಗಿಲು ವಾಸ್ತು ದೋಷಗಳಿಂದ ಮುಕ್ತವಾಗಿರುವುದು ಅಗತ್ಯ. ಕೆಲವೊಮ್ಮೆ ಹೆಚ್ಚು ಆದಾಯ ಇದ್ದರೂ ಹಣ ಉಳಿಯದಿರುವುದು ವಾಸ್ತು ಸಂಬಂಧಿತ ಅಸಮತೋಲನದಿಂದಾಗಿಯೂ ಸಂಭವಿಸಬಹುದು.

ಈ ಹಿನ್ನೆಲೆಯಲ್ಲಿಯೇ ವಾಸ್ತು ಶಾಸ್ತ್ರದಲ್ಲಿ ಮುಖ್ಯ ದ್ವಾರಕ್ಕೆ ಸಂಬಂಧಿಸಿದ ಕೆಲವು ಸರಳ ಪರಿಹಾರ ಕ್ರಮಗಳನ್ನು ಸೂಚಿಸಿದ್ದು, ಅವುಗಳನ್ನು ಪಾಲಿಸಿದ್ದರೆ ಕುಟುಂಬದಲ್ಲಿ ಸಂತೋಷ ಹಾಗೂ ಸಮೃದ್ಧಿ ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ.

ಹಾಗಾದ್ರೆ ಆರ್ಥಿಕ ಸ್ಥಿತಿ ಸುಧಾರಿಸಿ ಆದಾಯ ಹೆಚ್ಚಿಸುವ ಆ ವಾಸ್ತು ಸಲಹೆಗಳು(Vastu Tips) ಯಾವುವು ನೋಡೋಣ ಬನ್ನಿ

ಗಣೇಶ ಫೋಟೋ

ವಿಘ್ನವಿನಾಶಕನಾಗಿ ಪ್ರಸಿದ್ಧರಾದ ಶ್ರೀ ಗಣೇಶನು ಎಲ್ಲಾ ಅಡೆತಡೆಗಳನ್ನು ನಿವಾರಿಸುವ ದೇವರು. ಯಾವುದೇ ಶುಭ ಕಾರ್ಯಕ್ಕೂ ಮೊದಲು ಗಣೇಶ ಪೂಜೆ ಮಾಡುವ ಪರಂಪರೆ ಇದೆ. ಮನೆಯಲ್ಲಿನ ವಾಸ್ತು ದೋಷಗಳನ್ನು ನಿವಾರಿಸಲು ಮುಖ್ಯ ದ್ವಾರದ ಮೇಲೆ ಗಣೇಶನ ಚಿತ್ರ ಅಥವಾ ಪ್ರತಿಮೆಯನ್ನು ಅಳವಡಿಸುವುದು ಶುಭಕರ ಎಂದು ಪರಿಗಣಿಸಲಾಗುತ್ತದೆ. ಇದರಿಂದ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ ಮತ್ತು ಮನೆಮಂದಿಗೆ ಯಶಸ್ಸಿನ ಅವಕಾಶಗಳು ಹೆಚ್ಚುತ್ತವೆ.

Vastu Tips: ಮನೆಯ ಸಮೃದ್ಧಿಗೆ ಬೆಸ್ಟ್ ಈ ದಿಕ್ಕು; ಆದ್ರೆ ಅಲ್ಲಿ ಮಲಗುವ ಕೋಣೆ ಬಂದರೆ ಅಪಾಯ ಕಟ್ಟಿಟ್ಟ ಬುತ್ತಿ

ಶಮಿ ಗಿಡ

ವಾಸ್ತು ಶಾಸ್ತ್ರದಲ್ಲಿ ಶಮಿ ಗಿಡವನ್ನು ಶನಿ ದೇವರೊಂದಿಗೆ ಸಂಬಂಧಿಸಲಾಗಿದೆ. ಪವಿತ್ರವೆಂದು ಪರಿಗಣಿಸಲ್ಪಡುವ ಈ ಗಿಡವನ್ನು ಮನೆಯ ಮುಖ್ಯ ದ್ವಾರದ ಎಡಭಾಗದಲ್ಲಿ ನೆಟ್ಟರೆ ಶುಭ ಫಲ ದೊರೆಯುತ್ತದೆ ಎಂದು ನಂಬಿಕೆ ಇದೆ. ಇದರಿಂದ ಲಕ್ಷ್ಮೀ ದೇವಿಯ ಅನುಗ್ರಹ ಲಭಿಸಿ ಆರ್ಥಿಕ ಸ್ಥಿರತೆ ಸಾಧಿಸಲಾಗುತ್ತದೆ ಎಂಬ ಮಾತು ಇದೆ. ಶಮಿ ಗಿಡವು ಮನೆಯಲ್ಲಿ ಸಕಾರಾತ್ಮಕ ವಾತಾವರಣವನ್ನು ನಿರ್ಮಿಸಲು ಸಹಕಾರಿಯಾಗುತ್ತದೆ ಎಂದು ಹೇಳಲಾಗುತ್ತದೆ.

ಸ್ವಸ್ತಿಕ ಚಿಹ್ನೆ

ಸನಾತನ ಧರ್ಮದಲ್ಲಿ ಸ್ವಸ್ತಿಕ ಚಿಹ್ನೆ ಅತ್ಯಂತ ಮಂಗಳಕರ ಸಂಕೇತ. ಶುಭ ಕಾರ್ಯಗಳಲ್ಲಿ ಈ ಚಿಹ್ನೆಯನ್ನು ಬಳಕೆ ಮಾಡುವ ಪರಂಪರೆ ಇದೆ. ವಾಸ್ತು ಪ್ರಕಾರ ಮುಖ್ಯ ಬಾಗಿಲಿನ ಎರಡೂ ಬದಿಗಳಲ್ಲಿ ಕೆಂಪು ಅಥವಾ ಸಿಂಧೂರ ಬಣ್ಣದ ಸ್ವಸ್ತಿಕ ಚಿಹ್ನೆ ಬರೆಯುವುದರಿಂದ ಮನೆಗೆ ಧನಾತ್ಮಕ ಶಕ್ತಿ ಆಕರ್ಷಿತವಾಗುತ್ತದೆ. ಸ್ವಸ್ತಿಕದ ಗಾತ್ರ ಸಮಚಿತ್ತವಾಗಿದ್ದು ಸುಮಾರು ಒಂಬತ್ತು ಬೆರಳುಗಳಷ್ಟು ಉದ್ದ ಮತ್ತು ಅಗಲ ಇರಬೇಕು ಎಂದು ಹೇಳಲಾಗಿದೆ. ವಿಶೇಷವಾಗಿ ಸಿಂಧೂರದಿಂದ ಸ್ವಸ್ತಿಕ ಬರೆಯುವುದು ಹೆಚ್ಚು ಶುಭಕರವೆಂದು ಪರಿಗಣಿಸಲಾಗಿದೆ.

ಸೂರ್ಯ ದೇವರ ಪ್ರತಿಮೆ

ಮನೆಯ ಮುಖ್ಯ ದ್ವಾರದ ಮೇಲ್ಭಾಗದಲ್ಲಿ ತಾಮ್ರದಿಂದ ನಿರ್ಮಿತ ಸೂರ್ಯ ದೇವರ ಪ್ರತಿಮೆಯನ್ನು ಅಳವಡಿಸುವುದೂ ಒಳ್ಳೆಯದು ಎಂದು ಹೇಳಲಾಗಿದೆ. ಮನೆಗೆ ಪ್ರವೇಶಿಸುವಾಗ ಮತ್ತು ಹೊರಡುವಾಗ ಸೂರ್ಯ ದೇವರನ್ನು ಸ್ಮರಿಸುವುದು ಗ್ರಹದೋಷ ನಿವಾರಣೆಗೆ ಸಹಾಯಕವೆಂದು ನಂಬಿಕೆ ಇದೆ. ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಿ ಕುಟುಂಬದ ಸದಸ್ಯರಿಗೆ ಶಾಂತಿ ಮತ್ತು ಸಮೃದ್ಧಿ ಲಭಿಸುತ್ತದೆ ಎಂದು ಪರಂಪರೆಯ ನಂಬಿಕೆ ಹೇಳುತ್ತದೆ.