ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಮನೆಯ ಸುಖ, ಶಾಂತಿ, ಸಮೃದ್ಧಿಗೆ ಯಾವ ರೀತಿಯ ನವಿಲಿನ ಮೂರ್ತಿಯನ್ನು ಇಟ್ಟುಕೊಳ್ಳಬೇಕು?

ಮನೆಯ ಸುಖ, ಶಾಂತಿ, ಸಮೃದ್ಧಿಗಾಗಿ ಕೆಲವರು ಅವರವರ ನಂಬಿಕೆಗೆ ಅನುಗುಣವಾದ ಮೂರ್ತಿಯನ್ನು ಇಟ್ಟುಕೊಳ್ಳುತ್ತಾರೆ. ಇದರಲ್ಲಿ ನವಿಲಿನ ಮೂರ್ತಿಯೂ ಸೇರಿದೆ. ಮನೆಯಲ್ಲಿ ನವಿಲಿನ ಮೂರ್ತಿ ಇರಿಸುವ ಪಾಲಿಸಬೇಕಾದ ನಿಯಮಗಳೇನು, ಯಾವ ರೀತಿಯ ನವಿಲಿನ ಮೂರ್ತಿಯನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದು, ಹೇಗೆ ಇಟ್ಟುಕೊಳ್ಳಬೇಕು, ಈ ಬಗ್ಗೆ ವಾಸ್ತು ಶಾಸ್ತ್ರ (Vastu Tips) ಏನು ಹೇಳಿದೆ ಎಂಬುದರ ಕುರಿತು ಇಲ್ಲಿದೆ ಮಾಹಿತಿ.

ಮನೆಯಲ್ಲಿ ಯಾವ ರೀತಿಯ ನವಿಲಿನ ಮೂರ್ತಿ ಇಡಬಹುದು?

ಮನೆಯ ಸುಖ, ಶಾಂತಿ, ಸಮೃದ್ಧಿಗಾಗಿ ನಾವು ಕೆಲವೊಂದು ಪ್ರತಿಮೆಗಳನ್ನು (Vastu for Statue) ಇಟ್ಟುಕೊಳ್ಳುತ್ತೇವೆ. ಅದರಲ್ಲಿ ನವಿಲಿನ ಮೂರ್ತಿಯೂ (Vastu for peacock idol) ಸೇರಿದೆ. ಆದರೆ ಮನೆಯಲ್ಲಿ ಯಾವ ರೀತಿಯ ನವಿಲು ಮೂರ್ತಿಗಳನ್ನು ಇಡಬೇಕು ಎನ್ನುವ ಬಗ್ಗೆ ಹೆಚ್ಚಿನವರಲ್ಲಿ ಗೊಂದಲವಿದೆ. ಕೆಲವೊಂದು ಮೂರ್ತಿಗಳನ್ನು ವಾಸ್ತು ಶಾಸ್ತ್ರದ (Vastu for home) ನಿಯಮಕ್ಕೆ ಅನುಸಾರವಾಗಿ ಇಟ್ಟರೆ ಮಾತ್ರ ಅದರ ನಿಖರವಾದ ಫಲಿತಾಂಶ ಪಡೆಯಲು ಸಾಧ್ಯವಿದೆ. ಒಂದು ವೇಳೆ ಅದನ್ನು ಸರಿಯಾಗಿ ಇರಿಸದೇ ಇದ್ದರೆ ಅದರಿಂದ ನಕಾರಾತ್ಮಕ ಪರಿಣಾಮಗಳು ಉಂಟಾಗಬಹುದು ಎನ್ನುತ್ತಾರೆ ವಾಸ್ತು ತಜ್ಞರು.

ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಇದರ ಪ್ರಕಾರ ಮನೆಯೊಳಗೆ ಎಲ್ಲವನ್ನೂ ಇಡಲು ಒಂದು ನಿರ್ದಿಷ್ಟ ಸ್ಥಳವಿದೆ. ಹೆಚ್ಚಿನವರು ತಮ್ಮ ಮನೆಗಳಲ್ಲಿ ಅನೇಕ ರೀತಿಯ ಪ್ರಾಣಿ, ಪಕ್ಷಿಗಳ ಚಿತ್ರ ಅಥವಾ ಪ್ರತಿಮೆಗಳನ್ನು ಇರಿಸುತ್ತಾರೆ. ಇವುಗಳಲ್ಲಿ ಒಂದು ನವಿಲು. ಭಾರತೀಯ ಸಂಸ್ಕೃತಿಯಲ್ಲಿ ನವಿಲನ್ನು ಅದೃಷ್ಟ, ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.

ನವಿಲು ಶಿವನ ಮಗ, ಯುದ್ಧದ ದೇವರು ಕಾರ್ತಿಕೇಯನ ವಾಹನವಾಗಿದೆ. ಹೀಗಾಗಿ ಈ ಪಕ್ಷಿಯನ್ನು ಜ್ಞಾನ, ಶಕ್ತಿ ಮತ್ತು ರಕ್ಷಣೆಯ ಸೂಚಕವೆಂದು ಪರಿಗಣಿಸಲಾಗುತ್ತದೆ. ಮನೆಗಳಲ್ಲಿ ನವಿಲು ಮೂರ್ತಿಗಳನ್ನು ಇಡುವುದರಿಂದ ಶಾಂತಿ ಮತ್ತು ಸಂತೋಷದ ವಾತಾವರಣ ನಿರ್ಮಾಣವಾಗುತ್ತದೆ. ಅಲ್ಲದೆ ಮನೆಗೆ ನಕಾರಾತ್ಮಕ ಶಕ್ತಿ ಪ್ರವೇಶಿಸುವುದಿಲ್ಲ ಎನ್ನುತ್ತಾರೆ ವಾಸ್ತು ತಜ್ಞರು.

ವಾಸ್ತು ಪ್ರಕಾರ ಮನೆಯೊಳಗೆ ಯಾವುದೇ ವಸ್ತು ಇಡಲು ಸ್ಥಳ ಮತ್ತು ದಿಕ್ಕನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ಇದಕ್ಕೆ ವಿರುದ್ಧವಾಗಿ ಇಟ್ಟರೆ ಅದರಿಂದ ಶುಭ ಫಲಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಮನೆಯಲ್ಲಿ ನವಿಲಿನ ಪ್ರತಿಮೆಯನ್ನು ಇಡುವ ಬಗ್ಗೆ ಯೋಚಿಸುತ್ತಿದ್ದರೆ ಅದಕ್ಕೆ ಸೂಕ್ತ ನಿಯಮಗಳ ಬಗ್ಗೆ ಜ್ಯೋತಿಷಿ ಅರವಿಂದ್ ತ್ರಿಪಾಠಿ ಹೇಳುವುದು ಹೀಗೆ..

idol1

ಯಾವ ಪ್ರತಿಮೆ ಒಳ್ಳೆಯದು ?

ವಾಸ್ತು ಶಾಸ್ತ್ರದ ಪ್ರಕಾರ ಮನೆಯೊಳಗೆ ಬೆಳ್ಳಿಯ ನವಿಲಿನ ವಿಗ್ರಹವನ್ನು ಇಡುವುದು ತುಂಬಾ ಶುಭ. ಇದು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹರಡುತ್ತದೆ. ಅಲ್ಲದೆ ಮನೆಯ ಸದಸ್ಯರ ನಡುವೆ ಪರಸ್ಪರ ಪ್ರೀತಿಯನ್ನು ಬೆಳೆಸುತ್ತದೆ.

ಇದನ್ನೂ ಓದಿ: Vastu Tips: ನೆಮ್ಮದಿಯ ನಿದ್ರೆಗಾಗಿ ಈ ವಸ್ತುಗಳು ದೂರವಿರಲಿ

ಬೆಳ್ಳಿಯ ನವಿಲಿನ ಪ್ರತಿಮೆಯು ಮನೆಯ ಅನೇಕ ವಾಸ್ತು ದೋಷಗಳನ್ನು ನಿವಾರಿಸುತ್ತದೆ. ಇದರಿಂದ ಮನೆಗೆ ಸಂತೋಷ ಮತ್ತು ಸಮೃದ್ಧಿ ಬರುತ್ತದೆ. ಮನೆಯ ಆರ್ಥಿಕ ಬಿಕ್ಕಟ್ಟಿನ್ನು ಇದು ಪರಿಹರಿಸುತ್ತದೆ. ಮದುವೆಯಲ್ಲಿ ಅಡೆತಡೆಗಳಿದ್ದರೆ ಅದನ್ನು ನಿವಾರಿಸುತ್ತದೆ. ದಂಪತಿಯ ಮಲಗುವ ಕೋಣೆಯಲ್ಲಿ ಒಂದು ಜೋಡಿ ನವಿಲಿನ ವಿಗ್ರಹ ಇಡುವುದರಿಂದ ಅದು ಸಂತೋಷದ ದಾಂಪತ್ಯ ಜೀವನಕ್ಕೆ ಕಾರಣವಾಗುತ್ತದೆ. ಬೆಳ್ಳಿಯ ವಿಗ್ರಹವನ್ನು ಇಡಲು ಸಾಧ್ಯವಾಗದಿದ್ದರೆ ಅಲ್ಯೂಮಿನಿಯಂ ಲೋಹದಿಂದ ಮಾಡಿದ ನವಿಲನ್ನು ಸಹ ಇಡಬಹುದು ಎನ್ನುತ್ತಾರೆ ವಾಸ್ತು ತಜ್ಞರು.

ಯಾವ ದಿಕ್ಕಿನಲ್ಲಿ ಇಡಬೇಕು?

ನವಿಲಿನ ವಿಗ್ರಹವನ್ನು ಯಾವಾಗಲೂ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಇದರ ಹೊರತಾಗಿ ಆಗ್ನೇಯ ದಿಕ್ಕಿನಲ್ಲಿಯೂ ಇಡಬಹುದು. ಅಲ್ಲದೇ ನವಿಲಿನ ವಿಗ್ರಹವನ್ನು ಖರೀದಿಸುವಾಗ ಅದು ನೃತ್ಯ ಮಾಡುವ ಭಂಗಿಯಲ್ಲಿರಬೇಕು ಎಂಬುದು ನೆನಪಿರಲಿ. ಇದರಿಂದ ಮನೆಯಲ್ಲಿ ಯಾವಾಗಲೂ ಸಂತೋಷದ ವಾತಾವರಣ ನೆಲೆಯಾಗುತ್ತದೆ.