ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಇದು ವಯಸ್ಸಾಗದಂತೆ ತಡೆಯುವ ಮ್ಯಾಜಿಕ್‌ ತೈಲ; ಮನೆಯಲ್ಲೇ ಇದನ್ನು ತಯಾರಿಸುವುದು ಹೇಗೆ?

ಇತ್ತೀಚಿನ ದಿನಗಳಲ್ಲಿ ಚರ್ಮದ ತೊಂದರೆಗಳು ಸಾಕಷ್ಟು ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಕಾರಣ ಹಲವಾರು ಇದ್ದರೂ ಪರಿಹಾರವೂ ಇದೆ. ನಾಲ್ಪಮರಡಿ ತೈಲ ಸಾಕಷ್ಟು ಜನಪ್ರಿಯತೆಗಳಿಸುತ್ತಿದೆ. ಇದನ್ನು ಮನೆಯಲ್ಲೇ ಕೆಲವೇ ಕೆಲವು ವಸ್ತುಗಳನ್ನು ಬಳಸಿ ಅತ್ಯಂತ ಸುಲಭವಾಗಿ ತಯಾರಿಸಿಕೊಳ್ಳಬಹುದು. ಅದು ಹೇಗೆ ? ಇಲ್ಲಿದೆ ಸಂಪೂರ್ಣ ಮಾಹಿತಿ.

ಬೆಂಗಳೂರು: ಚರ್ಮದ ನಾನಾ ರೀತಿಯ ಸಮಸ್ಯೆಗಳಿಗೆ ಅದರಲ್ಲೂ ಮುಖ್ಯವಾಗಿ ಮುಖ ಸುಕ್ಕುಗಟ್ಟುವಿಕೆ, ಒಣ ಚರ್ಮ, ಮೊಡವೆ ಕಲೆಗಳು, ಕಣ್ಣಿನ ಸುತ್ತ ಕಪ್ಪು ಕಲೆಗಳಿಗೆ ಪರಿಹಾರ ನೀಡುವ ನಾಲ್ಪಮರಡಿ ತೈಲವನ್ನು ಮನೆಯಲ್ಲೇ ತಯಾರಿಸಿಕೊಳ್ಳಬಹುದು ಎನ್ನುತ್ತಾರೆ ಆಯುರ್ವೇದ ಸೌಂದರ್ಯ ತಜ್ಞರಾದ ದೀಪಾ ನಾಗೇಶ್. ವಿಶ್ವವಾಣಿ ಹೆಲ್ತ್ (Vishwavani Health) ಯೂಟ್ಯೂಬ್ ಚಾನೆಲ್ (Youtube channel) ನಲ್ಲಿ ಈ ಕುರಿತು ಮಾಹಿತಿ ನೀಡಿರುವ ಅವರು ಇದನ್ನು ತಯಾರಿಸುವುದು, ಬಳಸುವ ವಿಧಾನಗಳ ಕುರಿತು ನೀಡಿರುವ ಮಾಹಿತಿ ಇಲ್ಲಿದೆ. ತೈಲ ತಯಾರಿಸಲು ಮುಖ್ಯವಾಗಿ ಬೇಕಾಗಿರುವ ವಸ್ತುಗಳು ತೆಂಗಿನ ಎಣ್ಣೆ ಅಥವಾ ಎಳ್ಳೆಣ್ಣೆ, ಕ್ಯಾರೆಟ್, ಬಿಟ್ರೋಟ್ ಮತ್ತು ಹಸಿ ಅರಶಿನ ತುರಿಯೊಂದಿಗೆ ಮಂಜಿಷ್ಟ, ಲಾವಂಚ ಸೇರಿಸಿ ಹದವಾದ ಉರಿಯಲ್ಲಿ ಎಣ್ಣೆ ಬಿಸಿ ಮಾಡಬೇಕು. ಇದಕ್ಕೆ ಚಂದನದ ಚೆಕ್ಕೆ, ನಾಲ್ಕದು ದಳ ಕೇಸರಿ ಹಾಕಿದರೆ ಚಿನ್ನದ ಬಣ್ಣದ ಎಣ್ಣೆ ಸಿದ್ದವಾಗುತ್ತದೆ. ಇದನ್ನು ಮುಖಕ್ಕೆ ಹಚ್ಚಲು ಎಣ್ಣೆಯಾಗಿ, ಮಕ್ಕಳಿಗೆ ಮಸಾಜ್ ಮಾಡಲು ಕೂಡ ಬಳಸಬಹುದು. ಇದು ಒಣ ಚರ್ಮ, ಚರ್ಮ ಒಡೆಯುವುದು, ಸುಕ್ಕು ಗಟ್ಟಿರುವುದನ್ನು ಸರಿ ಮಾಡುತ್ತದೆ. ಇದನ್ನು ರಾತ್ರಿ ಹಚ್ಚಿ ಬೆಳಗ್ಗೆ ಕಡಲೆ ಹಿಟ್ಟು ಅಥವಾ ಆಯುರ್ವೇದಿಕ್ ಬಾಡಿ ಬಾಡಿ ವಾಷ್ ನಿಂದ ತೊಯಬೇಕು. ಇದು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತಿದೆ. ಚರ್ಮವನ್ನು ಮೃದುಗೊಳಿಸುತ್ತದೆ. ಈ ಎಣ್ಣೆಯಿಂದ ಲಿಪ್ ಬಾಮ್, ಫೇಸ್ ಪ್ಯಾಕ್ ಕೂಡ ಮಾಡಬಹುದು ಎನ್ನುತ್ತಾರೆ ಅವರು.