ಯುಗಾದಿ ವರ್ಷ ಭವಿಷ್ಯ: ಮೇಷ ರಾಶಿಯವರಿಗೆ ಈ ವರ್ಷ ಸಿಹಿಯೋ? ಕಹಿಯೋ?
Ugadi Horoscope: ಹಿಂದೂ ಪಂಚಾಂಗದ ಪ್ರಕಾರ ಯುಗಾದಿಯೇ ಹೊಸ ವರ್ಷ. 2026ರ ಮಾರ್ಚ್ 19ರಂದು ಹೊಸ ವರ್ಷ ಆರಂಭವಾಗಲಿದ್ದು, ಪಂಚಾಂಗದಲ್ಲಿ ಶ್ರೀ ಪರಾಭವ ನಾಮ ಸಂವತ್ಸರದ ಆರಂಭವನ್ನು ಸಂಕೇತಿಸುತ್ತದೆ. ಈ ವರ್ಷವೂ 12 ರಾಶಿಗಳ ಪೈಕಿ ಕೆಲವು ರಾಶಿಗಳಿಗೆ ಅದೃಷ್ಟದ ಶುಭ ಸೂಚನೆಗಳು ಇದೆ. ಅದರಲ್ಲೂ ಮೇಷ ರಾಶಿಯವರಿಗೆ ಈ ವರ್ಷದ ಫಲ ಹೇಗಿರಲಿದೆ? ಅವರ ಜೀವನದಲ್ಲಿ ಏನೆಲ್ಲ ಬದಲಾವಣೆ ಆಗಲಿದೆ ಎಂಬುದನ್ನು ʼವಿಶ್ವವಾಣಿ ಟಿವಿ ಸ್ಪೆಷಲ್ʼ ಯೂಟ್ಯೂಬ್ ಚಾನೆಲ್‌ನಲ್ಲಿ ಜ್ಯೋತಿಷಿ ಶ್ರೀ ದೇವದತ್ತ ಶರ್ಮ ಗುರೂಜಿ ತಿಳಿಸಿದ್ದಾರೆ.
Pushpa Kumari
Mar 18, 2026 5:12 PM
ಬೆಂಗಳೂರು, ಮಾ. 18: ಮೇಷ ರಾಶಿಯಲ್ಲಿ ಗ್ರಹಗತಿಗಳ ಬದಲಾವಣೆ ಆಗಲಿದ್ದು, ಶನಿ ಹಾಗೂ ಗುರು ಸಂಚಾರದಲ್ಲಿ ಹೆಚ್ಚಿನ ಪರಿಣಾಮ ಬೀರಲಿದೆ. ಮೇಷ ರಾಶಿಯವರಿಗೆ ಈ ವರ್ಷ ಮಿಶ್ರ ಫಲ ದೊರೆಯಲಿದೆ. ಆರ್ಥಿಕವಾಗಿ ಹೆಚ್ಚಿನ ಲಾಭ ಗಳಿಸದರೂ ಅನಾರೋಗ್ಯ ಸಮಸ್ಯೆ ಕಾಡುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಈ ವರ್ಷ ನೀವು ಸುಖ, ದುಃಖ ಎರಡನ್ನೂ ಸರಿಯಾಗಿ ನಿಭಾಯಿಸುತ್ತೀರಿ. ಆದಾಯದ ಮೂಲಗಳು ಹೆಚ್ಚಿದ್ದರೂ ಖರ್ಚು ಜಾಸ್ತಿಯಾಗಬಹುದು. ಅಕ್ಟೋಬರ್ ನಂತರದಲ್ಲಿ ಗುರು ಬಲ ಬರಲಿದ್ದು ವೃತ್ತಿ, ಆರ್ಥಿಕತೆ, ಭೂಮಿ ಖರೀದಿ, ಮನೆ ಖರೀದಿ ಹೀಗೆ ಕುಟುಂಬದಲ್ಲಿ ಶುಭ ಫಲಗಳು ಕಂಡು ಬರಲಿವೆ. ಮೇಷ ರಾಶಿಯವರು ವಿದೇಶಕ್ಕೆ ಪ್ರಯಾಣಿಸುವ ಉತ್ತಮ ಅವಕಾಶವನ್ನು ಹೊಂದಿರುತ್ತಾರೆ. ಯಾವುದೇ ಸಮಸ್ಯೆ ನಿವಾರಣೆಗೆ ಸುಬ್ರಹ್ಮಣ್ಯನ ಆರಾಧನೆ ಮಾಡುವುದು ಒಳಿತು ಎಂದು ಜ್ಯೋತಿಷಿ ಶ್ರೀ ದೇವದತ್ತ ಶರ್ಮ ಗುರೂಜಿ ತಿಳಿಸಿದ್ದಾರೆ.