ವೃಶ್ಚಿಕ ರಾಶಿಗೆ ಚಂದ್ರ ಗ್ರಹದಿಂದ ಈ ವರ್ಷ ಯಶಸ್ಸು ಸಿಗುತ್ತದೆಯೇ?
ದ್ವಾದಶ ರಾಶಿಗಳ ಮೇಲೆ ಚಂದ್ರ ಗ್ರಹದ ಪರಿಣಾಮವೇನು? ಅದರಲ್ಲೂ ವೃಶ್ಚಿಕ ರಾಶಿಗೆ ಚಂದ್ರನು ಭಾಗ್ಯದ ಮನೆಯ ಹತ್ತನೆ ಯಜಮಾನ ಆಗಿದ್ದಾನೆ. ಹಾಗಿದ್ರೆ ವೃಶ್ಚಿಕ ರಾಶಿಗೆ ಈ ವರ್ಷ ಯಾವ ರೀತಿಯ ಬದಲಾವಣೆ ಆಗಬಹುದು ಎಂದು ಮಹಾಬಲ ಮೂರ್ತಿ ಕೊಡ್ಲೆಕೆರೆ ತಿಳಿಸಿದ್ದಾರೆ.
Pushpa Kumari
Apr 15, 2026 5:27 PM
ಬೆಂಗಳೂರು,ಎ.15: ವೃಶ್ಚಿಕ ರಾಶಿಗೆ ಚಂದ್ರನು ತ್ರಿಕೋನ ಅಧಿಪತಿಯಾಗಿ ಕೆಲಸ ಮಾಡುತ್ತಾನೆ. ಚಂದ್ರ ಈ ರಾಶಿಗೆ ಭಾಗ್ಯ ಸ್ಥಾನ ನೀಡಿದರೆ ಅಂದುಕೊಳ್ಳದಷ್ಟು ಲಾಭ ನಿಮಗೆ ಸಿಗಬಹುದು. ಇದೇ ಭಾಗ್ಯಾಧಿಪತಿ ಹತ್ತನೆ ಮನೆಯ ಯಜಮಾನ ಸೂರ್ಯನ ಜೊತೆ ಇದ್ದರೆ ಧರ್ಮ ಕರ್ಮಾಧಿಪತಿ ಯೋಗ ಉಂಟಾಗುತ್ತದೆ. ಇದು ಅತ್ಯಂತ ಶುಭ ಮತ್ತು ರಾಜಯೋಗವಾಗಿದ್ದು, ಅಪಾರ ಯಶಸ್ಸು ನೀಡುತ್ತಾನೆ. ಆದರೆ ಚಂದ್ರನು ನೀಚ ಸ್ಥಾನದಲ್ಲಿರುವುದರಿಂದ ಕೆಲವೊಮ್ಮೆ ಸಮಸ್ಯೆ ಉಂಟು ಮಾಡಬಹುದು. ಕೆಲವೊಮ್ಮೆ ಅನಗತ್ಯ ಯೋಚನೆ, ಮಾನಸಿಕ ಕಿರಿಕಿರಿ ಉಂಟಾಗಬಹುದು ಎಂದು ಮಹಾಬಲ ಮೂರ್ತಿ ಕೊಡ್ಲೆಕೆರೆ ತಿಳಿಸಿದ್ದಾರೆ.