ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗದಿದ್ದರೆ ಈ ಹುದ್ದೆ ಯಾಕೆ? ಪಂಚಾಯತಿ ಸದಸ್ಯನಿಗೆ ಗ್ರಾಮಸಭೆಯಲ್ಲೇ ಕಪಾಳಮೋಕ್ಷ ಮಾಡಿದ ವೃದ್ಧ!
Viral Video: ಹಿರಿಯ ನಾಗರಿಕರೊಬ್ಬರು ಯಾವುದೇ ಅಭಿವೃದ್ಧಿ ಕಾರ್ಯಗಳು ತನ್ನ ಊರಿನಲ್ಲಿ ನಡೆಯುತ್ತಿಲ್ಲ ಅನ್ನುವ ಕಾರಣಕ್ಕೆ ಪಂಚಾಯತಿ ಸದಸ್ಯನಿಗೆ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ. ಮಹಾರಾಷ್ಟ್ರದ ಲಾತೂರು ತಾಲೂಕಿನ ಏಕುರ್ಗಾ ಗ್ರಾಮದಲ್ಲಿ ನಡೆದ ಗ್ರಾಮಸಭೆಯಲ್ಲಿ 70 ವರ್ಷದ ವೃದ್ಧರೊಬ್ಬರು ಅಸಮಾಧಾನ ವ್ಯಕ್ತಪಡಿಸಿ ಪಂಚಾಯತಿ ಸದಸ್ಯನಿಗೆ ಕಪಾಳ ಮೋಕ್ಷ ಮಾಡಿದ್ದಾರೆ.
ಪಂಚಾಯತ್ ಸದಸ್ಯನಿಗೆ ಕಪಾಳಮೋಕ್ಷ ಮಾಡಿದ 70 ವರ್ಷದ ವೃದ್ಧ -
ಮಹಾರಾಷ್ಟ್ರ,ಸೆ.3: ಯಾವುದೇ ಊರಿನಲ್ಲಿ ಅಭಿವೃದ್ಧಿಯನ್ನು ಬಯಸಿ ಗ್ರಾಮಸ್ಥರು ಪಂಚಾಯತಿ ಸದಸ್ಯನನ್ನು ಆಯ್ಕೆ ಮಾಡುತ್ತಾರೆ. ಆದರೆ ಯಾವುದೇ ಸೌಕರ್ಯಗಳನ್ನು ಒದಗಿಸುತ್ತಿಲ್ಲ ಎಂದಾಗ ಜನಪ್ರತಿನಿಧಿಗಳ ವಿರುದ್ದ ಗ್ರಾಮಸ್ಥರು ಕಿಡಿಕಾರುವುದು ಸಾಮಾನ್ಯವಾಗಿದೆ. ಆದೇ ರೀತಿ ಹಿರಿಯ ನಾಗರಿಕರೊಬ್ಬರು ಯಾವುದೇ ಅಭಿವೃದ್ಧಿ ಕಾರ್ಯಗಳು ತನ್ನ ಊರಿನಲ್ಲಿ ನಡೆಯುತ್ತಿಲ್ಲ ಅನ್ನುವ ಕಾರಣಕ್ಕೆ ಪಂಚಾಯತಿ ಸದಸ್ಯನಿಗೆ ಕಪಾಳಮೋಕ್ಷ ಮಾಡಿದ ಘಟನೆ (Viral News) ನಡೆದಿದೆ. ಮಹಾರಾಷ್ಟ್ರದ ಲಾತೂರು ತಾಲೂಕಿನ ಏಕುರ್ಗಾ ಗ್ರಾಮದಲ್ಲಿ ನಡೆದ ಗ್ರಾಮಸಭೆಯಲ್ಲಿ 70 ವರ್ಷದ ವೃದ್ಧ ರೊಬ್ಬರು ಅಸಮಾಧಾನ ವ್ಯಕ್ತಪಡಿಸಿ ಪಂಚಾಯತಿ ಸದಸ್ಯನಿಗೆ ಕಪಾಳ ಮೋಕ್ಷ ಮಾಡಿದ್ದಾರೆ.
ಲಾತೂರು ತಾಲೂಕಿನ ಏಕುರ್ಗಾ ಗ್ರಾಮದಲ್ಲಿ ಸ್ಥಳೀಯ ಸಮಸ್ಯೆಗಳನ್ನು ಚರ್ಚಿಸಲು ಮತ್ತು ಗ್ರಾಮದ ಅಭಿವೃದ್ಧಿ ಯೋಜನೆಯನ್ನು ರೂಪಿಸಲು ಸಭೆಯನ್ನು ಕರೆಯಲಾಗಿತ್ತು. ವಿಚಾರಣೆಯ ಸಮಯದಲ್ಲಿ, ವೃದ್ಧ ಗ್ರಾಮಸ್ಥರೊಬ್ಬರು ಅಪೂರ್ಣ ಮತ್ತು ವಿಳಂಬವಾದ ಅಭಿವೃದ್ಧಿ ಯೋಜನೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಪ್ರಗತಿಯ ಬಗ್ಗೆ ಗ್ರಾಮ ಪಂಚಾಯತ್ ಸದಸ್ಯನನ್ನು ಪ್ರಶ್ನಿಸಿದಾಗ ಪರಿಸ್ಥಿತಿ ಉಲ್ಬಣ ಗೊಂಡಿದೆ. ಪಂಚಾಯತಿ ಸದಸ್ಯನನ್ನು ನೇರವಾಗಿ ಪ್ರಶ್ನಿಸಿದ ವೃದ್ಧರು, "ಗ್ರಾಮದಲ್ಲಿ ಅಭಿವೃದ್ಧಿ ಚಟುವಟಿಕೆ ಮಾಡಲು ನಿಮ್ಮಿಂದ ಸಾಧ್ಯವಿಲ್ಲದಿದ್ದರೆ ಈ ಹುದ್ದೆಯನ್ನು ಏಕೆ ವಹಿಸಿಕೊಂಡಿದ್ದೀರಿ?" ಎಂದು ಕಿಡಿಕಾರಿದ್ದಾರೆ. ಆಗ ಇಬ್ಬರಲ್ಲೂ ಮಾತಿನ ಚಕಮಕಿ ನಡೆದಿದ್ದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ವೃದ್ಧ ವ್ಯಕ್ತಿ ಕೋಪಗೊಂಡು ಸಾರ್ವಜನಿಕರ ಎದುರೇ ಪಂಚಾಯತಿ ಸದಸ್ಯನ ಕೆನ್ನೆಗೆ ಹೊಡೆದಿದ್ದಾರೆ.
ತಕ್ಷಣವೇ ಇತರ ಗ್ರಾಮಸ್ಥರು ಇಬ್ಬರನ್ನೂ ಸಮಾಧಾನಪಡಿಸಿ ಪರಿಸ್ಥಿತಿಯನ್ನು ನಿಭಾಯಿಸಿದರು. ಈ ವಾಗ್ವಾದವನ್ನು ತೋರಿಸುವ ದೃಶ್ಯ ವೈರಲ್ ಆಗಿದ್ದು ಈ ಘಟನೆಯು ಸ್ಥಳೀಯ ಅಭಿವೃದ್ಧಿ ಸಂಸ್ಥೆಗಳ ಕಾರ್ಯನಿರ್ವಹಣೆಯ ಕುರಿತು ಚರ್ಚೆಗೆ ನಾಂದಿ ಹಾಡಿದೆ. ಈ ಬಗ್ಗೆ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದು ಬಳಕೆದಾರರೊಬ್ಬರು ಯಾವುದೇ ಅಭಿವೃದ್ಧಿ ಚಟುವಟಿಕೆ ಮಾಡದ ಅಧಿಕಾರಿಗಳ ಜೊತೆ ಹೀಗೆಯೇ ವರ್ತನೆ ತೋರಬೇಕು,ಆಗ ಮಾತ್ರ ಬುದ್ಧಿ ಬರುತ್ತದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು ಈ ವೃದ್ಧ ವ್ಯಕ್ತಿಯ ನಿರ್ಧಾರ ಸರಿಯಾಗಿದೆ, ಗ್ರಾಮದ ಅಭಿವೃದ್ಧಿಗಾಗಿ ಪ್ರತಿಯೊಬ್ಬ ವ್ಯಕ್ತಿಯೂ ಪ್ರಶ್ನೆ ಮಾಡಬೇಕು ಎಂದು ಬರೆದಿದ್ದಾರೆ.