ಜಪಾನ್‌ನಲ್ಲಿ ಯೋಗಿ ಆದಿತ್ಯನಾಥ್ ಕಾಲು ಮುಟ್ಟಿ ಶ್ಲೋಕ ಪಠಿಸಿದ ಬಾಲಕ; ವಿಡಿಯೋ ನೋಡಿ
Viral Video: ಇತ್ತೀಚೆಗಷ್ಟೇ ಸಿಎಂ ಯೋಗಿ ಆದಿತ್ಯನಾಥ್ ಬಳಿ ಮಗುವೊಂದು ಕ್ಯೂಟ್ ಆಗಿ ಚಿಪ್ಸ್ ಬೇಕು ಎಂದು ಕೇಳಿಕೊಂಡಿರುವ ವಿಡಿಯೊ ವೈರಲ್ ಆಗಿತ್ತು. ಇದೀಗ ಜಪಾನ್ ನಲ್ಲಿ ಭಾರತೀಯ ಮೂಲದ ಬಾಲಕನೊಬ್ಬ ಸಿಎಂ ಯೋಗಿ ಪಾದ ಮುಟ್ಟಿ ನಮಸ್ಕರಿಸಿ, ಶ್ಲೋಕಗಳನ್ನು ಪಠಿಸಿದ ಘಟನೆಯೊಂದು ನಡೆದಿದೆ. ಈ ವಿಡಿಯೊ ಭಾರೀ ವೈರಲ್ ಆಗಿದ್ದು ಬಳಕೆದಾರರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಯೋಗಿ ಆದಿತ್ಯನಾಥ್ ಪಾದ ಮುಟ್ಟಿ ಶ್ಲೋಕ ಪಠಿಸಿದ ಬಾಲಕ -
ಟೋಕಿಯೋ,ಫೆ.26: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೇವಲ ರಾಜಕೀಯ ವಿಚಾರ ಅಲ್ಲದೆ ವೈಯಕ್ತಿಕವಾಗಿಯೂ ಗಮನ ಸೆಳೆಯುತ್ತಾರೆ. ಇತ್ತೀಚೆಗಷ್ಟೇ ಸಿಎಂ ಯೋಗಿ ಆದಿತ್ಯನಾಥ್ ಬಳಿ ಮಗುವೊಂದು ಕ್ಯೂಟ್ ಆಗಿ ಚಿಪ್ಸ್ ಬೇಕು ಎಂದು ಕೇಳಿಕೊಂಡಿರುವ ವಿಡಿಯೊ ವೈರಲ್ ಆಗಿತ್ತು. ಇದೀಗ ಜಪಾನ್‌ನಲ್ಲಿ ಭಾರತೀಯ ಮೂಲದ ಬಾಲಕನೊಬ್ಬ ಸಿಎಂ ಯೋಗಿ ಪಾದ ಮುಟ್ಟಿ ನಮಸ್ಕರಿಸಿ, ಶ್ಲೋಕಗಳನ್ನು ಪಠಿಸಿದ ಘಟನೆಯೊಂದು ನಡೆದಿದೆ. ಈ ವಿಡಿಯೊ ಭಾರೀ ವೈರಲ್ (Viral Video) ಆಗಿದ್ದು ಬಳಕೆದಾರರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಸ್ತುತ ಜಪಾನ್‌ಗೆ ಎರಡು ದಿನಗಳ ಅಧಿಕೃತ ಭೇಟಿಯಲ್ಲಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ರಾಜಕೀಯ ಚರ್ಚೆಗಳ ನಡುವೆ, ಭಾರತೀಯ ಮೂಲದ ಪುಟ್ಟ ಬಾಲಕನೊಬ್ಬ ಸಿಎಂ ಯೋಗಿ ಅವರ ಪಾದಗಳನ್ನು ಮುಟ್ಟಿ ಶ್ಲೋಕ ಪಠಿಸಿದ್ದಾನೆ. ಈ ಹೃದಯಸ್ಪರ್ಶಿ ದೃಶ್ಯಕ್ಕೆ ಹೆಚ್ಚಿನವರು ಲೈಕ್ ಕಾಮೆಂಟ್ ನೀಡಿ ಪ್ರತಿಕ್ರಿಯೆ ನೀಡಿದ್ದಾರೆ.
ವಿಡಿಯೋ ನೋಡಿ:
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎಲ್ಲೇ ಹೋದರೂ ಮಕ್ಕಳೊಂದಿಗೆ ಪ್ರೀತಿಯ ಬಾಂಧವ್ಯವನ್ನು ತೋರುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಜಪಾನ್ ನಲ್ಲಿ ಪುಟ್ಟ ಬಾಲಕ ಯೋಗಿ ಆದಿತ್ಯನಾಥ್ ಅವರಿಗೆ ನಮಸ್ಕಾರ ಎಂದು ಕೈ ಮುಗಿದು ಹೇಳುವ ಮೂಲಕ ಗೌರವ ಸಲ್ಲಿಸಿದ್ದಾನೆ. ಇದನ್ನು ಕಂಡ ಕೂಡಲೇ ಸಿಎಂ ಯೋಗಿ ಆ ಮಗುವನ್ನು ಹತ್ತಿರ ಕರೆದು ಚಾಕೊಲೇಟ್ ನೀಡಿದ್ದಾರೆ. ಅದೇ ಕ್ಷಣ ಬಾಲಕ ಅವರ ಪಾದಗಳನ್ನು ಮುಟ್ಟಿ ಬಾಲಕ ಶ್ಲೋಕಗಳನ್ನು ಪಠಿಸಲು ಪ್ರಾರಂಭಿಸಿದ್ದಾನೆ. ಬಾಲಕನ ಭಕ್ತಿಯನ್ನು ಕಂಡ ಯೋಗಿ ಆದಿತ್ಯನಾಥ್ ಕೂಡ ಆತನೊಂದಿಗೆ ಸೇರಿ ಶ್ಲೋಕ ಪಠಿಸಿದ್ದಾರೆ.
Viral Video: ಇಂಡಿಗೋ ವಿಮಾನ ಎಡವಟ್ಟು: ಕೈಯಲ್ಲಿ ಅಸ್ಥಿ ಹಿಡಿದು ಏರ್‌ಪೋರ್ಟ್‌ನಲ್ಲೇ ಕುಳಿತ ಯುವತಿ!
ಎಎನ್ಐ ಹಂಚಿಕೊಂಡ ವೀಡಿಯೊದಲ್ಲಿ, ಒಬ್ಬ ಮಹಿಳೆ ಯೋಗಿಯನ್ನು ಸ್ವಾಗತಿಸುತ್ತಾ ತಾನು ಅವರಿಗೆ ಉಡುಗೊರೆಯನ್ನು ತಂದಿದ್ದೇನೆ ಎಂದು ತಿಳಿಸುತ್ತಿರುವುದನ್ನು ಕಾಣಬಹುದು. ಆದರೆ ಮುಖ್ಯಮಂತ್ರಿಯ ಗಮನವು ಹತ್ತಿರದಲ್ಲಿ ಇದ್ದ ಬಾಲಕನ ಕಡೆಗೆ ತಿರುಗಿದೆ. ಮಗು ಅವರನ್ನು "ನಮಸ್ತೆ" ಹೇಳಿ ಸ್ವಾಗತಿಸುತ್ತಿದ್ದಂತೆ ಯೋಗಿ ಅವರು ಬಾಲಕನಿಗೆ ಚಾಕೊಲೇಟ್ ನೀಡಿದ್ದಾರೆ. ಆ ಕ್ಷಣ ಬಾಲಕ ಕೂಡ ಪಾದಗಳಿಗೆ ನಮಸ್ಕಾರ ಮಾಡಿ ಶ್ಲೋಕ ಪಠಿಸಿದ್ದಾನೆ.
ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, "ಇದು ಅತ್ಯಂತ ಸುಂದರ ದೃಶ್ಯ"ಎಂದು ಹಲವಾರು ಬಳಕೆದಾರರು ಕಾಮೆಂಟ್ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಮಕ್ಕಳೊಂದಿಗೆ ನಡೆಸಿದ ಸಂವಾದಗಳು ಸಾರ್ವಜನಿಕ ಗಮನ ಸೆಳೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಭಾರಿ ಮೆಚ್ಚುಗೆ ಗಳಿಸಿದೆ.