Viral Video: ಹಣ ನೀಡದೆ ವಂಚಿಸಿದ ಪ್ರಯಾಣಿಕ; ರೈಲಿನ ಹಿಂದೆ ಓಡೋಡಿ ಬಂದ ಬಾಲಕ! ಮನ ಕಲಕುವ ವಿಡಿಯೊ ಇಲ್ಲಿದೆ
Viral Video: ರೈಲ್ವೆ ನಿಲ್ದಾಣವೊಂದರಲ್ಲಿ ಹೃದಯ ಕಲಕುವ ಘಟನೆ ನಡೆದಿದೆ. ರೈಲಿನಲ್ಲಿ ತಿಂಡಿ ತಿನಿಸುಗಳನ್ನು ಮಾರಾಟ ಮಾಡುವ ಬಾಲಕನೊಬ್ಬ,ತಾನು ಮಾರಾಟ ಮಾಡಿದ ವಸ್ತುವಿಗೆ ಹಣವನ್ನು ಕೊಡಲು ನಿರಾಕರಿಸಿದ ಪ್ರಯಾಣಿಕನಿಂದ ಹಣ ಪಡೆಯಲು ಹರಸಾಹಸ ಪಟ್ಟಿರುವ ದೃಶ್ಯ ಕರುಳು ಹಿಂಡುವಂತಿದೆ. ಸದ್ಯ ಈ ವಿಡಿಯೋ ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಯಾಣಿಕನ ಕ್ರೂರ ವರ್ತನೆಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಹಣಕ್ಕಾಗಿ ರೈಲಿನ ಹಿಂದೆ ಓಡುತ್ತಿರುವ ಬಾಲಕ -
ಮುಂಬೈ: "ಎಲ್ಲರೂ ದುಡಿಯುವುದು ಹೊಟ್ಟೆಗಾಗಿ ಎಂಬ ಮಾತಿದೆ"... ದಿನ ನಿತ್ಯದ ಜೀವನ ಸಾಗಿಸಲು ಕಷ್ಟ ಪಟ್ಟು ದುಡಿಯುವ ಅದೆಷ್ಟೋ ಜನರು ನಮ್ಮ ಹತ್ತಿರವೇ ಇದ್ದಾರೆ. ಆದರೆ ಈ ಯುಗದಲ್ಲಿ ಇಂತಹ ನಿಯತ್ತಾಗಿ ದುಡಿಯುವ ಜನರಿಗೆ ಮೋಸ ಮಾಡುವವರು ಹೆಚ್ಚಾಗಿಯೇ ಇದ್ದಾರೆ. ಇಂದಿನ ದಿನದಲ್ಲಂತೂ ಮಾನವೀಯತೆ ಎಂಬುದು ಮರೆಯಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ರೈಲ್ವೆ ನಿಲ್ದಾಣವೊಂದರಲ್ಲಿ ಹೃದಯ ಕಲಕುವ ಘಟನೆ ನಡೆದಿದೆ. ರೈಲಿನಲ್ಲಿ ತಿಂಡಿ ತಿನಿಸು ಗಳನ್ನು ಮಾರಾಟ ಮಾಡುವ ಬಾಲಕನೊಬ್ಬ, ತಾನು ಮಾರಾಟ ಮಾಡಿದ ವಸ್ತುವಿಗೆ ಹಣವನ್ನು ಕೊಡಲು ನಿರಾಕರಿಸಿದ ಪ್ರಯಾಣಿಕನಿಂದ ಹಣ ಪಡೆಯಲು ಹರಸಾಹಸ ಪಟ್ಟಿರುವ ದೃಶ್ಯ ಕರುಳು ಹಿಂಡುವಂತಿದೆ. ಸದ್ಯ ಈ ವಿಡಿಯೋ ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು (Viral Video) ಪ್ರಯಾಣಿಕನ ಕ್ರೂರ ವರ್ತನೆಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ರೈಲಿನ ಬಳಿ ತಿಂಡಿ-ತಿನಿಸುಗಳನ್ನು ಮಾರಾಟ ಮಾಡಲು ಬಾಲಕನೊಬ್ಬ ಆಗಮಿಸಿದ್ದಾನೆ. ಆದರೆ ತಾನು ಮಾರಿದ ವಸ್ತುವಿಗೆ ಹಣವನ್ನು ಕೊಡಲು ಪ್ರಯಾಣಿಕನೊಬ್ಬ ನಿರಾಕರಿಸಿದ್ದಾನೆ. ಈ ಸಂದರ್ಭದಲ್ಲಿ ಹಣ ಪಡೆಯಲು ಬಾಲಕ ಹರಸಾಹಸ ಪಟ್ಟಿದ್ದಾನೆ. ರೈಲು ನಿಲ್ದಾಣದಿಂದ ನಿಧಾನ ವಾಗಿ ಹೊರಡಲು ಆರಂಭಿಸಿದಂತೆ ಪ್ರಯಾಣಿಕನು ಉದ್ದೇಶಪೂರ್ವಕವಾಗಿ ಹಣ ನೀಡದೆ ವಂಚಿಸಿ ದ್ದಾನೆ ಎಂದು ಹೇಳಲಾಗಿದೆ.
ವೈರಲ್ ವಿಡಿಯೊ ಇಲ್ಲಿದೆ:
ರೈಲು ನಿಧಾನವಾಗಿ ಚಲಿಸುತ್ತಿದ್ದಂತೆ ಬಾಲಕನು ಚಲಿಸುತ್ತಿರುವ ರೈಲಿನ ಬೋಗಿಯ ಹಿಂದೆ ವೇಗವಾಗಿ ಓಡುತ್ತಾ, ಕಿಟಕಿಯ ಬಳಿಯಿದ್ದ ಪ್ರಯಾಣಿಕನಿಗೆ ಹಣ ಹಿಂತಿರುಗಿಸುವಂತೆ ಪದೇ ಪದೇ ಕೈಮುಗಿದು ಬೇಡಿಕೊಳ್ಳುವ ದೃಶ್ಯ ವೈರಲ್ ಆಗಿದೆ. ಘಟನೆಯ ನಿಖರವಾದ ಸ್ಥಳ ಇನ್ನೂ ದೃಢ ಪಟ್ಟಿಲ್ಲ ವಾದರೂ, ಭಾರತೀಯ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಏಕೆಂದರೆ ಕ್ಲಿಪ್‌ನಲ್ಲಿರುವ ಜನರು ಹಿಂದಿಯಲ್ಲಿ ಮಾತನಾಡುವುದನ್ನು ಗಮನಿಸಬಹುದು.
ವೈರಲ್ ವೀಡಿಯೊದಲ್ಲಿ, ಹುಡುಗ ಪ್ಲಾಟ್‌ಫಾರ್ಮ್‌ನ ಉದ್ದಕ್ಕೂ ವೇಗವಾಗಿ ಓಡುತ್ತಿರುವುದನ್ನು ಕಾಣಬಹುದು. ಪ್ರಯಾಣಿಕನಿಗೆ ತನ್ನ ಹಣವನ್ನು ಹಿಂತಿರುಗಿಸುವಂತೆ ಪದೇ ಪದೇ ಕೇಳುತ್ತಿದ್ದಾನೆ. ಆದಾಗ್ಯೂ, ಪ್ರಯಾಣಿಕನು ಅವನನ್ನು ನಿರ್ಲಕ್ಷಿಸಿ ರೈಲು ಚಲಿಸಲು ಪ್ರಾರಂಭಿಸುವವರೆಗೆ ಉದ್ದೇಶ ಪೂರ್ವಕವಾಗಿ ಹಣ ಪಾವತಿ ಮಾಡಲು ವಿಳಂಬ ಮಾಡುತ್ತಿದ್ದಾನೆ. ಕಿಟಕಿಯ ಬಳಿ ಕುಳಿತಿದ್ದ ಮತ್ತೊಬ್ಬ ಪ್ರಯಾಣಿಕನು ಇಡೀ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾನೆ.
ಇದನ್ನೂ ಓದಿ:Viral Video: ಗೃಹ ಪ್ರವೇಶ ಆಚರಣೆಯಲ್ಲಿ ಗೋಮಾತೆ ಬದಲಿಗೆ ಆಟಿಕೆ ಹಸು: ಇದೇ ಮಾಡರ್ನ್ ಇಂಡಿಯಾ ಎಂದ ನೆಟ್ಟಿಗರು
ಈ ವಿಡಿಯೋ ಸದ್ಯ ಭಾರೀ ವೈರಲ್ ಆಗಿದ್ದು ಕಷ್ಟಪಟ್ಟು ದುಡಿಯುವ ಬಾಲಕನ ಬಳಿ ಈ ರೀತಿ ನಡೆದುಕೊಳ್ಳುವ ಮನಸ್ಥಿತಿಯವನ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಆಕ್ರೋಶ ಕೇಳಿಬಂದಿದೆ. ಇದು ಹೃದಯಹೀನ ಮತ್ತು ಶೋಷಣೆಯಾಗಿದೆ, ವಿಶೇಷವಾಗಿ ಜೀವನೋಪಾಯ ಕ್ಕಾಗಿ ಶ್ರಮಿಸುವ ಬಾಲಕನಿಗೆ ಈ ರೀತಿ ಮಾಡಿದ್ದು ತಪ್ಪು ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ''ಈ ರೀತಿ ಬಡವರಿಗೆ ಮೋಸ ಮಾಡುವವರಿಗೆ ಕರ್ಮವು ಮುಂದೊಂದು ದಿನ ತಕ್ಕ ಪಾಠ ಕಲಿಸುತ್ತದೆ" ಎಂದು ಮತ್ತೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಣ್ಣ ವ್ಯಾಪಾರಿಗಳ ಮೇಲೆ ಇಂತಹ ಅಗೌರವ ತೋರುವುದು ಸರಿಯಲ್ಲ. ಕೇವಲ 10 ರೂಪಾಯಿ ಗಾಗಿ ಈ ಬಾಲಕ ಎಷ್ಟು ಕಷ್ಟಪಡುತ್ತಿದ್ದಾನೆ ಎಂದು ಹಲವರು ದುಃಖ ವ್ಯಕ್ತ ಪಡಿಸಿದ್ದಾರೆ. ಯಾರಾದರೂ ಕೂಡಲೇ ರೈಲನ್ನು ನಿಲ್ಲಿಸಿ, ಆ ಪ್ರಯಾಣಿಕನನ್ನು ಪೊಲೀಸರಿಗೆ ಒಪ್ಪಿಸಬೇಕಿತ್ತು ಎಂಬ ಕಠಿಣ ಕ್ರಮದ ಬೇಡಿಕೆ ಕೂಡ ಸದ್ಯ ಕೇಳಿ ಬಂದಿದೆ.