ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪಾನೀಪುರಿ ವ್ಯವಹಾರದಲ್ಲಿ ತಿಂಗಳಿಗೆ 90ಸಾವಿರ ರೂ. ಗಳಿಸುವ ವ್ಯಾಪಾರಿ‌‌‌; ನೆಟ್ಟಿಗರು ಹೇಳೋದೇನು?

Viral Video: ಪಾನಿಪುರಿ ಮಾರಾಟಗಾರನೊಬ್ಬನ ತಿಂಗಳ ಆದಾಯ ಕೇಳಿದರೆ ನಿಮಗೆ ಆಶ್ಚರ್ಯ ವಾಗಬಹುದು. ಮಾರಾಟಗಾರನು ತಿಂಗಳಿಗೆ ಸುಮಾರು 90,000 ರೂ. ಗಳಿಸುತ್ತಾನೆ, ಅಂದರೆ ವಾರ್ಷಿಕ 10.8 ಲಕ್ಷ ರೂ. ಆದಾಯ ಗಳಿಸುತ್ತಾನೆ. ಮಾರಾಟಗಾರನು ಪ್ರತಿ ಪ್ಲೇಟ್‌ಗೆ 30 ರೂ.ಗಳಂತೆ ಪ್ರತಿದಿನ ಸುಮಾರು 80–100 ಪ್ಲೇಟ್ ಪಾನಿಪುರಿಗಳನ್ನು ಮಾರಾಟ ಮಾಡುತ್ತಾರೆ. ಇದು ಸರಾಸರಿ ದೈನಂದಿನ ವಹಿವಾಟು ಸುಮಾರು 3,000 ರೂ.ಗಳನ್ನು ನೀಡುತ್ತದೆ

ತಿಂಗಳಿಗೆ 90 ಸಾವಿರ ರೂಪಾಯಿ ಸಂಪಾದಿಸುವ ಪಾನೀಪುರಿ ಮಾರಾಟಗಾರ: ವಿಡಿಯೊ ನೋಡಿ

ತಿಂಗಳಿಗೆ 90ಸಾವಿರ ರೂ. ಗಳಿಸುವ ವ್ಯಾಪಾರಿ‌‌‌ -

Profile
Pushpa Kumari Mar 27, 2026 2:53 PM

ನವದೆಹಲಿ,ಮಾ.27: ಹೆಚ್ಚಿನ ಜನರ ಅಚ್ಚುಮೆಚ್ಚಿನ ಬೀದಿ ಬದಿಯ ಆಹಾರ ಅಂದ್ರೆ ಅದು ಪಾನೀಪುರಿ. ಸುವಾಸನೆಯ ಆಲೂಗಡ್ಡೆ ಮತ್ತು ಬಟಾಣಿ ಮಿಶ್ರಣ ಮಸಾಲೆಯುಕ್ತ ನೀರಿನಿಂದ ತುಂಬಿದ ಟೊಳ್ಳಾದ ಪೂರಿಗಳು ಆಹಾರ ಪ್ರಿಯರ ನೆಚ್ಚಿನ ಖಾದ್ಯವಾಗಿದೆ. ಇದರ ರುಚಿಯೇನೋ ಎಲ್ಲರಿಗೂ ಪ್ರಿಯವಾದದ್ದು ನಿಜ, ಆದರೆ ಪಾನಿಪುರಿ (Pani Puri) ಮಾರಾಟಗಾರನೊಬ್ಬನ ತಿಂಗಳ ಆದಾಯ ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಪಾನಿಪುರಿ ಮಾರಾಟಗಾರನು ತಿಂಗಳಿಗೆ ಸುಮಾರು 90,000 ರೂ. ಗಳಿಸುತ್ತಾನೆ, ಅಂದರೆ ವಾರ್ಷಿಕ 10.8 ಲಕ್ಷ ರೂ. ಆದಾಯ ಗಳಿಸುತ್ತಾನೆ.

ಕಂಟೆಂಟ್ ಕ್ರಿಯೇಟರ್ ಕ್ಯಾಸಿ ಪರೇರಾ ಈ ವಿಡಿಯೊ ಹಂಚಿ ಕೊಂಡಿದ್ದಾರೆ. ಈ ಮಾರಾಟಗಾರನು ಪ್ರತಿ ಪ್ಲೇಟ್‌ಗೆ 30 ರೂ.ಗಳಂತೆ ಪ್ರತಿದಿನ ಸುಮಾರು 80–100 ಪ್ಲೇಟ್ ಪಾನಿ ಪುರಿಗಳನ್ನು ಮಾರಾಟ ಮಾಡುತ್ತಾರೆ. ಇದು ಸರಾಸರಿ ದೈನಂದಿನ ವಹಿವಾಟು ಸುಮಾರು 3,000 ರೂ.ಗಳನ್ನು ನೀಡುತ್ತದೆ. ಕ್ಲಿಪ್‌ನಲ್ಲಿ, ಕಂಟೆಂಟ್ ಕ್ರಿಯೇಡರ್ ಸ್ವತಃ ಪಾನಿ ಪುರಿಯನ್ನು ಹೇಗೆ ತಯಾರಿಸಬೇಕೆಂದು ಕಲಿಯುತ್ತಿರುವುದನ್ನು ಕಾಣಬಹುದು.

ವಿಡಿಯೋ ನೋಡಿ:

ಅಂಗಡಿಯು ಸಂಜೆ 4:00 ರಿಂದ ರಾತ್ರಿ 10:00 ರವರೆಗೆ ಕಾರ್ಯನಿರ್ವಹಿಸುತ್ತದೆ. ಮಾರಾಟಗಾರನು ಈ ಬಗ್ಗೆ ಮಾತನಾಡುತ್ತ ನಾನು ಸುಳ್ಳು ಹೇಳುವುದಿಲ್ಲ, ಮೊದಲಿಗೆ ನಾನು ಹೆದರುತ್ತಿದ್ದೆ, ಆದರೆ ನಂತರ ನಾನು ಇದಕ್ಕೆ ಒಗ್ಗಿಕೊಂಡೆ‌ಎಂದು ಅವರು ಆಲೂಗಡ್ಡೆ ಸಿಪ್ಪೆ ಸುಲಿಯುತ್ತಾ ಈರುಳ್ಳಿ ಕತ್ತರಿಸುತ್ತಾ ಹೇಳುತ್ತಾರೆ. ವೀಡಿಯೊವನ್ನು ನೋಡಿದ ಅನೇಕ ಬಳಕೆದಾರರು ಮಾರಾಟಗಾರರ ಉದ್ಯಮಶೀಲತಾ ಮನೋಭಾವವನ್ನು ಶ್ಲಾಘಿಸಿದರು.

Viral Video: ಛೇ ಎಂತಾ ಅಮಾನವೀಯ ಕೃತ್ಯ: ಭಾರಿ ತೂಕದ ಪಾರ್ಸೆಲ್ ಹೊತ್ತು ಹೈರಾಣಾದ ಡೆಲಿವರಿ ಬಾಯ್!

ಒಬ್ಬ ಬಳಕೆದಾರರು, “ಬ್ರೋ, ಯಾವುದೇ ಅಂಗಡಿ ಮಾಲೀಕರು ಬಿಕಾಂ ಪದವೀಧರರಿಗಿಂತ ಹೆಚ್ಚು ಗಳಿಸಬಹುದು. ಬಿ.ಕಾಂ ಕಸದ ಪದವಿಯಂತೆ” ಎಂದು ಬರೆದಿದ್ದಾರೆ‌. ಮತ್ತೊಬ್ಬರು, “ಆಶ್ಚರ್ಯ ವಿಲ್ಲ. ಹೋಟೆಲ್‌ಗಳು ಸಹ ಅಧಿಕ ಲಾಭವನ್ನು ಗಳಿಸುತ್ತವೆ" ಎಂದು ಕಾಮೆಂಟ್ ಮಾಡಿದ್ದಾರೆ.