ಸಮೋಸಾ ತಿಂದು ಹಣ ಪಾವತಿಸುವ ಬದಲು ಹೋಟೆಲ್ ಮಾಲಕನ ಬೆರಳನ್ನೇ ಕಚ್ಚಿ ತುಂಡರಿಸಿದ ಗ್ರಾಹಕ!
Viral News: ಆನ್‌ಲೈನ್ ಪಾವತಿ ವಿಚಾರವಾಗಿ ನಡೆದ ಸಣ್ಣ ಜಗಳ ಅತಿರೇಕಕ್ಕೆ ಹೋಗಿರುವ ಘಟನೆಯೊಂದು ನಡೆದಿದೆ. ಸಿಡಿದೆದ್ದ ಗ್ರಾಹಕನು ಹೋಟೆಲ್ ಮಾಲಕನ ಬೆರಳನ್ನೇ ಕಂಚಿ ತುಂಡು ಮಾಡಿದ್ದಾನೆ. ಅಂಗಡಿ ಮಾಲಕ ರಂಜಿತ್ ಹರಿವಂಶ್ ಸಿಂಗ್ ಅವರ ಇತರ ಬೆರಳುಗಳಿಗೂ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಲಕ್ಷೀಂಧರ್ ಮಂಗಲ್ ಮಲ್ಲಿಕ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಾಂದರ್ಭಿಕ ಚಿತ್ರ -
ಮುಂಬೈ, ಮಾ. 31: ಇತ್ತೀಚಿನ ದಿನದಲ್ಲಿ ಬಹುತೇಕರು ಆನ್‌ಲೈನ್ ಪಾವತಿಯತ್ತ (Online payment) ಮುಖ ಮಾಡಿದ್ದಾರೆ. ಇದರಿಂದ ಚಿಲ್ಲರೆ ಸಮಸ್ಯೆ ಕಡಿಮೆಯಾಗಿದೆ. ಅದಾಗ್ಯೂ ಆನ್‌ಲೈನ್ ಪಾವತಿ ವಿಚಾರದಲ್ಲಿ ಕೆಲವೊಮ್ಮೆ ಜಗಳ ನಡೆಯುತ್ತಿರುತ್ತವೆ. ಇದೀಗ ಅಂತಹದ್ದೇ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ. ಆನ್‌ಲೈನ್ ಪಾವತಿ ವಿಚಾರವಾಗಿ ನಡೆದ ಸಣ್ಣ ಜಗಳವೊಂದು ಅತಿರೇಕಕ್ಕೆ ಹೋಗಿದೆ. ಸಿಡಿದೆದ್ದ ಗ್ರಾಹಕ ಹೋಟೆಲ್ ಮಾಲಕನ ಮಧ್ಯದ ಬೆರಳನ್ನೇ ಕಚ್ಚಿ ತುಂಡು ಮಾಡಿದ್ದಾನೆ. ಅಂಗಡಿ ಮಾಲಕ ರಂಜಿತ್ ಹರಿವಂಶ್ ಸಿಂಗ್ ಅವರ ಇತರ ಬೆರಳುಗಳಿಗೂ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಲಕ್ಷೀಂಧರ್ ಮಂಗಲ್ ಮಲ್ಲಿಕ್‌ನನ್ನು ವಶಕ್ಕೆ ಪಡೆಯಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ ಶನಿವಾರ (ಮಾರ್ಚ್ 28) ರಾತ್ರಿ ಮಲಾಡ್‌ನ ಶಿವಾಜಿ ಚೌಕ್‌ನಲ್ಲಿರುವ ಆಹಾರ ಜಾಯಿಂಟ್‌ಗೆ ಮಲ್ಲಿಕ್ ಬಂದು ಸಮೋಸಾ ಮತ್ತು ಕಟ್ಲೆಟ್ ಆರ್ಡರ್ ಮಾಡಿದ್ದ. ಅಂಗಡಿ ಮಾಲಕ ರಂಜಿತ್ ಹರಿವಂಶ್ ಸಿಂಗ್ ಅವರ ಮಗ ಹಣ ಕೇಳಿದಾಗ ಮಲ್ಲಿಕ್ ಆನ್‌ಲೈನ್‌ನಲ್ಲಿ ಪಾವತಿ ಮಾಡುವುದಾಗಿ ಹೇಳಿದ್ದಾನೆ. ಆದರೆ ಅಂಗಡಿ ಮಾಲಕನ ಮಗ ನಗದು ನೀಡುವಂತೆ ಒತ್ತಾಯಿಸಿದ್ದಾನೆ. ಈ ನಡುವೆ ಇಬ್ಬರ ನಡುವೆಯೂ ಮಾತಿನ ಚಕಮಕಿ ನಡೆದಿದೆ.
ಹಸುವಿಗೆ ಚಿಕನ್ ಮೋಮೋಸ್ ತಿನ್ನಿಸಿದ ಯುವಕ!
ಆಗ ಮಾಲಕ ಹಾಗೂ ಗ್ರಾಹಕ ಇಬ್ಬರೂ ಅವಾಚ್ಯ ಪದಗಳಿಂದ ಬೈದುಕೊಂಡಿದ್ದಾರೆ. ಇದು ಮಲ್ಲಿಕ್‌ನನ್ನು ಇನ್ನಷ್ಟು ಕೆರಳಿಸಿದೆ. ಕೊನೆಗೆ ಮಲ್ಲಿಕ್ ದಿಢೀರನೆ ರಂಜಿತ್ ಅವರ ಕೈ ಹಿಡಿದು ಬೆರಳನ್ನು ಬಲವಾಗಿ ಕಚ್ಚಿದ್ದಾನೆ.
ಕೊನೆಗೆ ಅಂಗಡಿಯ ಸಿಬ್ಬಂದಿ ಮಲ್ಲಿಕ್‌ನನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದು ಪೊಲೀಸರನ್ನು ಕರೆಸಲಾಯಿತು. ಪೊಲೀಸರು ಆರೋಪಿ ಮಲ್ಲಿಕ್ ಅವರನ್ನು ವಶಕ್ಕೆ ಪಡೆದಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ.