"ಜ್ವರ ಬರವುದಕ್ಕೂ ಮೊದಲೇ ಮಾಹಿತಿ ನೀಡಿ ರಜೆ ತೆಗೆದುಕೊಳ್ಳಿ"; ಮ್ಯಾನೇಜರ್ ವಿರುದ್ಧ ಉದ್ಯೊಗಿ ವಾಗ್ದಾಳಿ!
Viral Video: ಕೆಲಸದ ಒತ್ತಡ, ರಜೆ ಇಲ್ಲ, ಸ್ಯಾಲರಿ ಹೆಚ್ಚಳ ವಿಲ್ಲ, ಹೀಗೆ ನಾನಾ ನೆಪ ಹೇಳಿ ಕೆಲಸ ತೊರೆ ದವರು ಅನೇಕರು ಇದ್ದಾರೆ. ಇದೀಗ ಯುವತಿಯೊಬ್ಬಳು ಮ್ಯಾನೇಜರ್ ನೀಡಿದ ಹೇಳಿಕೆ ವಿರುದ್ಧ ವಾಗ್ದಾಳಿಯನ್ನು ನಡೆಸಿದ ಘಟನೆಯೊಂದು ಕಂಡುಬಂದಿದೆ. ಉದ್ಯೋಗಿಗಳು ಅನಾರೋಗ್ಯದ ರಜೆ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡುವಂತೆ ಕೇಳಿದ್ದಕ್ಕಾಗಿ ಮ್ಯಾನೇಜರ್ ವಿರುದ್ಧ ಯುವತಿ ಆಕ್ರೋಶ ಗೊಂಡಿದ್ದಾಳೆ. ಸದ್ಯ ಈ ವಿಚಾರವು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಮ್ಯಾನೇಜರ್ ವಿರುದ್ಧ ಯುವತಿ ಕಿಡಿ -
ಒಡಿಶಾ,ಮೇ 23: ಇತ್ತೀಚೆಗೆ ಕಾರ್ಪೊರೇಟ್ ಉದ್ಯೋಗದ ಬಗ್ಗೆ ಹಲವು ದೂರುಗಳು ಉದ್ಯೋಗಿಗಳಿಂದ ಕೇಳಿ ಬರುತ್ತಿದೆ. ಕೆಲಸದ ಒತ್ತಡ, ರಜೆ ಇಲ್ಲ, ಸ್ಯಾಲರಿ ಹೆಚ್ಚಳವಿಲ್ಲ, ಹೀಗೆ ನಾನಾ ನೆಪ ಹೇಳಿ ಕೆಲಸ ತೊರೆದವರು ಅನೇಕರು ಇದ್ದಾರೆ. ಇದೀಗ ಯುವತಿಯೊಬ್ಬಳು ಮ್ಯಾನೇಜರ್ ನೀಡಿದ ಹೇಳಿಕೆ ವಿರುದ್ಧ ವಾಗ್ದಾಳಿಯನ್ನು ನಡೆಸಿದ ಘಟನೆಯೊಂದು ಕಂಡು ಬಂದಿದೆ. ಉದ್ಯೋಗಿಗಳು ಅನಾರೋಗ್ಯ ರಜೆ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡುವಂತೆ ಕೇಳಿದ್ದಕ್ಕಾಗಿ ಮ್ಯಾನೇಜರ್ ವಿರುದ್ಧ ಯುವತಿ ಆಕ್ರೋಶಗೊಂಡಿದ್ದಾಳೆ. ಸದ್ಯ ಈ ವಿಚಾರವು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗುತ್ತಿದೆ.
ಡೆಬ್ಲಿನಾ ಎಂದು ಗುರುತಿಸಲ್ಪಟ್ಟ ಯುವತಿ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊದ ಮೂಲಕ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ತಮ್ಮ ಆರೋಗ್ಯ ಹದಗೆಟ್ಟ ನಂತರ ಆಕೆ ಎರಡು ದಿನಗಳ ಅನಾರೋಗ್ಯ ರಜೆ ತೆಗೆದುಕೊಂಡಿದ್ದಾರೆ ಎಂದು ವಿವರಿಸಿದ್ದಾರೆ. ಆದಾಗ್ಯೂ, ಅವರು ಕೆಲಸಕ್ಕೆ ಮರಳಿದಾಗ, ಅನಾರೋಗ್ಯ ರಜೆ ಅಧಿಸೂಚನೆಗಳಿಗೆ ಸಂಬಂಧಿಸಿದ ಹೊಸ ಕಚೇರಿ ನಿಯಯವನ್ನು ಮ್ಯಾನೇಜರ್ ಹೊರಡಿಸಿದ್ದಾರೆ.
ವಿಡಿಯೋ ನೋಡಿ:
ಇನ್ಮುಂದೆ ಯಾರೇ ಅನಾರೋಗ್ಯದ ರಜೆ ತೆಗೆದುಕೊಳ್ಳುದಾದರೂ ಅದರ ಹಿಂದಿನ ದಿನ ರಾತ್ರಿಯೇ ಆಫೀಸ್‌ಗೆ ಮಾಹಿತಿ ನೀಡಬೇಕು ಎಂದು ತಿಳಿಸಿದ್ದಾರೆ. ಇದಕ್ಕೆ ಡೆಬ್ಲಿನಾ "ಅನಾರೋಗ್ಯವನ್ನು ಮುಂಚಿತವಾಗಿ ಊಹಿಸುವ ಸಾಮರ್ಥ್ಯವಿದ್ದರೆ, ಅವಳು ಬಹುಶಃ ಸಾಮಾನ್ಯ ಕಾರ್ಪೊರೇಟ್ ಕೆಲಸ ಮಾಡುತ್ತಿರಲಿಲ್ಲ'' ಎಂದು ತಮಾಷೆ ಮಾಡಿದ್ದಾರೆ.
ತಮಗೆ ನಾಳೆ ಹುಷಾರಿಲ್ಲ ಎಂದು ಇಂದೇ ತಿಳಿದಿರುತ್ತಾ? ನಾನು ನನ್ನ ಜೀವನವನ್ನು ಅಷ್ಟು ನಿಖರವಾಗಿ ಊಹಿಸಲು ಸಾಧ್ಯವಾದರೆ, ಐಪಿಎಲ್‌ನಲ್ಲಿ ಊಹಿಸುವ ಮೂಲಕ ನಾನು ಹಣಗಳಿಸುತ್ತಿರಲಿಲ್ಲವೇ? ನಾನು ಈ ಲಾಲಾ ಕಂಪನಿಯಲ್ಲಿ ಏಕೆ ಕೆಲಸ ಮಾಡುತ್ತಿದ್ದೆ? ಎಂದು ಟೀಕಿಸಿ ದ್ದಾರೆ." ಜ್ವರಕ್ಕೂ ಈಗ ಅಪ್ರೂವಲ್ ಬೇಕು" ಶೀರ್ಷಿಕೆಯೊಂದಿಗೆ ಕ್ಲಿಪ್ ಅನ್ನು ಅಪ್‌ಲೋಡ್ ಮಾಡಲಾಗಿದೆ. ಈ ಬಗ್ಗೆ ನೆಟ್ಟಿಗರು ಕೂಡ ತಮಾಷೆಯ ಕಾಮೆಂಟ್ ಮಾಡಿದ್ದಾರೆ. ಕೆಲವರು ಕೆಲಸದ ಸ್ಥಳಗಳಲ್ಲಿ ಇದೇ ರೀತಿಯ ಕಠಿಣ ನೀತಿಗಳನ್ನು ಎದುರಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಬಳಕೆದಾರರೊಬ್ಬರು ಕೆಲವರು ಮ್ಯಾನೇಜರ್ ಆದ 3-4 ತಿಂಗಳಲ್ಲೇ ಹುಚ್ಚರಂತೆ ವರ್ತಿಸುತ್ತಾರೆ ಎಂದು ಬರೆದಿದ್ದಾರೆ. ಮತ್ತೊಬ್ಬರು ನಮ್ಮ ಮ್ಯಾನೇಜರ್ ರಜೆಗಳು ಬಾಕಿ ಇವೆ, ಉಪಯೋಗಿಸಿಕೊಳ್ಳಿ ಎಂದು ಪ್ರೀತಿಯಿಂದ ಮಾತನಾಡಿಸುತ್ತಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.