ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಇದು ಜೈಲು ಹಕ್ಕಿಗಳ ಲವ್‌ ಸ್ಟೋರಿ: ಕೊಲೆ ಪಾತಕಿಗಳ ನಡುವೆ ಪ್ರೇಮಾಂಕುರ: ಪರೋಲ್ ಪಡೆದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಜೋಡಿ

Jail romance: ಜೈಲಿನಲ್ಲಿ ಒಟ್ಟಿಗೆ ಇದ್ದ ಸಮಯದಲ್ಲಿ ಆರಂಭವಾದ ಕೊಲೆ ಪಾತಕಿಗಳ ಪ್ರೇಮಕಥೆ ಇದೀಗ ಮದುವೆಯ ರೂಪ ಪಡೆದಿದೆ. ಪರೋಲ್ ಪಡೆದುಕೊಂಡು ಈ ಖೈದಿ ಜೋಡಿ ವಿವಾಹವಾಗಿರುವ ಈ ಘಟನೆ ರಾಜಸ್ಥಾನದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಜೈಲಿನಲ್ಲಿ ಶುರುವಾಯ್ತು ಕೊಲೆ ಪಾತಕಿಗಳ ಪ್ರೇಮಕಥೆ

15 ದಿನಗಳ ಪರೋಲ್ ಪಡೆದು ವಿವಾಹವಾದ ಕೊಲೆಪಾತಕಿಗಳು -

Priyanka P
Priyanka P Jan 23, 2026 6:05 PM

ಜೈಪುರ, ಜ. 23: ಜೈಲಿನಲ್ಲಿ ಒಟ್ಟಿಗೆ ಕಳೆದ ಸಮಯದಿಂದ ಆರಂಭವಾದ ಪ್ರೇಮಕಥೆ ಈಗ ಮದುವೆಯಲ್ಲಿ ಅಂತ್ಯಗೊಂಡಿದೆ. ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ವ್ಯಕ್ತಿಯನ್ನು ಹತ್ಯೆಗೈದ ಪ್ರಕರಣದ ಆರೋಪಿ ಮಹಿಳೆ ಮತ್ತು ಐದು ಜನರನ್ನು ಹತ್ಯೆಗೈದ ವ್ಯಕ್ತಿಯೊಬ್ಬ ಪರೋಲ್‌ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ (Jail romance). ರಾಜಸ್ಥಾನದ (Rajasthan) ಅಲ್ವಾರ್‌ನಲ್ಲಿ ಈ ವಿಚಿತ್ರ ಪ್ರೇಮ ಪ್ರಸಂಗ ನಡೆದಿದೆ. ಈ ಘಟನೆ ಮೇಲ್ನೀಟಕ್ಕೆ ಸಿನಿಮಾದ ಕಥೆಯಂತೆಯೇ ಕಾಣಿಸುತ್ತದೆ. ಆದರೆ ಇದು ರೀಲ್ ಅಲ್ಲ, ರಿಯಲ್ ಪ್ರೇಮ ಕಹಾನಿ.

ಅಲ್ವಾರ್‌ನ ಬರೋಡಮೇವ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರಿಯಾ ಸೇಠ್ ಅಲಿಯಾಸ್ ನೇಹಾ ಸೇಠ್ ಮತ್ತು ಆಕೆಯ ಪ್ರಿಯಕರ ಹನುಮಾನ್ ಪ್ರಸಾದ್ ರಾಜಸ್ಥಾನ ಹೈಕೋರ್ಟ್‌ನಿಂದ 15 ದಿನಗಳ ತುರ್ತು ಪರೋಲ್‌ಗಳನ್ನು ಪಡೆದಿದ್ದಾರೆ.

ಡೇಟಿಂಗ್ ಆ್ಯಪ್‌ನಲ್ಲಿ ಭೇಟಿಯಾದ ದುಷ್ಯಂತ್ ಶರ್ಮಾ ಎಂಬ ಯುವಕನ ಕೊಲೆ ಪ್ರಕರಣದಲ್ಲಿ ರೂಪದರ್ಶಿ ಪ್ರಿಯಾ ಸೇಠ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಆಕೆ ಸಂಗನೇರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಆರು ತಿಂಗಳ ಹಿಂದೆ ಅದೇ ಜೈಲಿನಲ್ಲಿದ್ದ ಪ್ರಸಾದ್‌ನನ್ನು ಆಕೆ ಭೇಟಿಯಾಗಿದ್ದಳು. ಅದಾದ ಬಳಿಕ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದರು.

ಪರಸ್ಪರ ಪ್ರೀತಿಸಿ ಮದುವೆಯಾದ ಕೊಲೆ ಪಾತಕಿಗಳು:



ಅಂದಹಾಗೆ ಪ್ರಿಯಾ ಸೇಠ್‌ಗೆ ಶಿಕ್ಷೆ ವಿಧಿಸಲಾದ ಕೊಲೆ ಪ್ರಕರಣವು 2018ರ ಸಮಯದಲ್ಲಿ ನಡೆದಿರುವುದು. 2018ರ ಮೇ 2ರಂದು ಪ್ರಿಯಾ ಸೇಠ್ ತನ್ನ ಪ್ರೇಮಿ ಮತ್ತು ಇನ್ನೊಬ್ಬ ವ್ಯಕ್ತಿಯ ಸಹಾಯದಿಂದ ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ದುಷ್ಯಂತ್ ಶರ್ಮಾನನ್ನು ಕೊಂದಿದ್ದಳು. ಆತನನ್ನು ಅಪಹರಿಸಿ, ಸುಲಿಗೆ ಮಾಡುವುದು ಮತ್ತು ತನ್ನ ಪ್ರೇಮಿ ದಿಕ್ಷಾಂತ್ ಕಮ್ರಾನ ಸಾಲವನ್ನು ತೀರಿಸುವುದು ಆಕೆಯ ಯೋಜನೆಯಾಗಿತ್ತು.

ಜನನಿಬಿಡ ಪ್ರದೇಶದಲ್ಲಿ ಹಾಡಹಗಲೇ ಯುವತಿಯನ್ನು ಅಪಹರಿಸಿದ ಮುಸುಕುಧಾರಿಗಳು

ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ವ್ಯಕ್ತಿಯನ್ನು ಕೊಂದಿದ್ದ ಪ್ರಿಯಾ ಸೇಠ್

ತಮ್ಮ ಯೋಜನೆಯಂತೆ ಪ್ರಿಯಾ ಸೇಠ್, ಶರ್ಮಾನೊಂದಿಗೆ ಸ್ನೇಹ ಬೆಳೆಸಿದಳು. ನಂತರ ಆತನನ್ನು ಬಜಾಜ್ ನಗರದಲ್ಲಿನ ಒಂದು ಫ್ಲಾಟ್‌ಗೆ ಕರೆಸಿಕೊಂಡಳು. ಬಳಿಕ ಆತನ ತಂದೆಯಿಂದ 10 ಲಕ್ಷ ರುಪಾಯಿ ಹಣಕ್ಕೆ ಬೇಡಿಕೆ ಇಟ್ಟಳು. ಅವರು 3 ಲಕ್ಷ ರೂ. ಹಣವನ್ನು ವ್ಯವಸ್ಥೆ ಮಾಡಿ ವರ್ಗಾಯಿಸಿದರು. ಆದರೆ ಶರ್ಮಾನನ್ನು ಬಿಡುಗಡೆ ಮಾಡಿದರೆ ಆತ ಪೊಲೀಸರಿಗೆ ತನ್ನ ಬಗ್ಗೆ ಮಾಹಿತಿ ನೀಡಬಹುದು ಎಂಬ ಭಯದಿಂದ ಪ್ರಿಯಾ ಸೇಠ್ ಆತನನ್ನು ಬಿಡದಿರಲು ತೀರ್ಮಾನಿಸಿದಳು.

ಬಂಧನದಿಂದ ತಪ್ಪಿಸಿಕೊಳ್ಳಲು ಪ್ರಿಯಾ ಸೇಠ್, ಆಕೆಯ ಪ್ರಿಯಕರ ಕಾಮ್ರಾ ಮತ್ತು ಅವನ ಸ್ನೇಹಿತ ಲಕ್ಷ್ಯ ವಾಲಿಯಾ ಸೇರಿಕೊಂಡು ಶರ್ಮಾನನ್ನು ಹತ್ಯೆಗೈದರು. ಬಳಿಕ ಮೃತದೇಹವನ್ನು ಸೂಟ್‌ಕೇಸ್‌ನಲ್ಲಿ ಹಾಕಿ ಅಮೆರ್ ಬೆಟ್ಟದಲ್ಲಿ ವಿಲೇವಾರಿ ಮಾಡಿದರು. ಶವದ ಗುರುತು ಪತ್ತೆಯಾಗದಂತೆ ಮಾಡಲು ಮುಖದ ಮೇಲೆ ಹಲವಾರು ಬಾರಿ ಚೂರಿಯಿಂದ ಇರಿದರು. ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಫ್ಲಾಟ್‌ ಅನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದ್ದರು.

ಮೇ 3ರಂದು ರಾತ್ರಿ ಆಮೆರ್ ಬೆಟ್ಟದಲ್ಲಿ ಸಿಂಗ್ ಅವರ ಮೃತದೇಹ ಪತ್ತೆಯಾಗಿದ್ದು. ಅಂತಿಮವಾಗಿ ಸೇಠ್, ಕಮ್ರಾ ಮತ್ತು ವಾಲಿಯಾ ಅವರನ್ನು ಫ್ಲಾಟ್‌ನಿಂದ ಬಂಧಿಸಲಾಯಿತು.

ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಹತೈಗೈದು ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೊ ನೋಡುತ್ತ ಕುಳಿತ ಪಾಪಿ ಪತ್ನಿ!

5 ಕೊಲೆಗಳನ್ನು ಮಾಡಿರುವ ಹನುಮಾನ್ ಪ್ರಸಾದ್

ಇತ್ತ ಹನುಮಾನ್ ಪ್ರಸಾದ್ ತನಗಿಂತ 10 ವರ್ಷ ಹಿರಿಯಳಾದ ಪ್ರೇಯಸಿಯ ಪತಿ ಮತ್ತು ಮಕ್ಕಳನ್ನು ಹತ್ಯೆಗೈದ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಪ್ರಸಾದ್‍ನ ಪ್ರೇಯಸಿ ಸಂತೋಷ್ ತೈಕ್ವಾಂಡೋ ಆಟಗಾರ್ತಿಯಾಗಿದ್ದಳು. 2017ರ ಅಕ್ಟೋಬರ್ 2ರ ರಾತ್ರಿ ತನ್ನ ಪತಿ ಮತ್ತು ಮಕ್ಕಳನ್ನು ಕೊಲ್ಲುವಂತೆ ಅವಳು ಪ್ರಸಾದ್‌ಗೆ ಕರೆ ಮಾಡಿದ್ದಳು. ಪ್ರಸಾದ್ ಒಬ್ಬ ಸಹಚರನೊಂದಿಗೆ ಅಲ್ಲಿಗೆ ಆಗಮಿಸಿ, ಪ್ರಾಣಿಗಳನ್ನು ಕೊಯ್ಯಲು ಬಳಸುವ ಚಾಕುವಿನಿಂದ ಆಕೆಯ ಪತಿ ಬನ್ವಾರಿ ಲಾಲ್ ಅವರನ್ನು ಹತ್ಯೆಗೈದಿದ್ದ.

ಈ ವೇಳೆ ದಂಪತಿಯ ಮೂವರು ಮಕ್ಕಳು ಹಾಗೂ ಅವರೊಂದಿಗೆ ವಾಸವಾಗಿದ್ದ ಒಬ್ಬ ಸೋದರಳಿಯ ಎಚ್ಚರಗೊಂಡು, ಭೀಕರ ಈ ಹತ್ಯೆಯನ್ನು ಕಣ್ಣಾರೆ ನೋಡಿದರು. ಜೈಲಿಗೆ ಹೋಗುವ ಭಯದಿಂದ ಮಕ್ಕಳನ್ನೂ ಕೊಲ್ಲಲು ಆಕೆ ಕೇಳಿಕೊಂಡಳು. ಹೀಗಾಗಿ ಪ್ರಸಾದ್ ಆ ಕ್ರೂರ ಕೃತ್ಯವನ್ನು ಮಾಡಿದ್ದ.

ಇದೀಗ ಇಬ್ಬರು ಕೊಲೆಪಾತಕಿಗಳು ಜೈಲಿನಲ್ಲಿ ಪರಿಚಯವಾಗಿ, ಪರಸ್ಪರ ಪ್ರೀತಿಯಲ್ಲಿ ಬಿದ್ದು ಮದುವೆಯಾಗಿದ್ದಾರೆ.