ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಗಂಗೆಗೆ ಬಾಗಿನ ಅರ್ಪಿಸುವಾಗ ಈಕೆಯ ಬಗ್ಗೆ ಇರಲಿ ಎಚ್ಚರ- ಚಾಲಾಕಿ ಕಳ್ಳಿಯ ವಿಡಿಯೊ ನೋಡಿ

Woman snatching a coconut: ಪವಿತ್ರ ಸ್ನಾನದ ವೇಳೆ ಮಹಿಳೆಯೊಬ್ಬರು ತೆಂಗಿನಕಾಯಿಯನ್ನು ಕಸಿದುಕೊಳ್ಳುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ನೀರಿನಲ್ಲಿ ನಡೆಯುತ್ತಾ ಬಂದ ಯುವತಿ ಭಕ್ತಿಯಿಂದ ಗಂಗೆಗೆ ಬಟ್ಟೆ ಮತ್ತು ತೆಂಗಿನಕಾಯಿ ಅರ್ಪಿಸಿದ್ದಾಳೆ. ಇದನ್ನು ಕೂಡಲೇ ಮಹಿಳೆಯೊಬ್ಬಳು ಕಸಿದುಕೊಂಡಿದ್ದಾಳೆ.

ಗಂಗಾ ನದಿಯಲ್ಲಿ ಚಾಲಾಕಿ ಕಳ್ಳಿ- ಈ ವಿಡಿಯೊ ನೋಡಿ

Priyanka P Priyanka P Jul 29, 2025 5:35 PM

ಲಖನೌ: ಗಂಗಾ ಸ್ನಾನವು ಹಿಂದೂಗಳಿಗೆ ಪವಿತ್ರ ಆಚರಣೆಯಾಗಿದೆ. ಈ ವರ್ಷದ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಕುಂಭಮೇಳಕ್ಕೆ ದಾಖಲೆಯ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರು. ಪವಿತ್ರ ಸ್ನಾನಕ್ಕಾಗಿ ಕೋಟ್ಯಂತರ ಭಕ್ತರು ಜಮಾಯಿಸಿದ್ದರಿಂದ, ನಗರವು ದೇಶದ ಇತಿಹಾಸದಲ್ಲಿಯೇ ಅತಿ ಉದ್ದದ ಸಂಚಾರ ದಟ್ಟಣೆಯನ್ನು ಕಂಡಿತು. ಜನಜಂಗುಳಿ ಮತ್ತು ಧಾರ್ಮಿಕ ಉತ್ಸಾಹದ ನಡುವೆ, ವಿಡಿಯೊವೊಂದು ವೈರಲ್(Viral Video) ಆಗಿದ್ದು, ನೆಟ್ಟಿಗರು ಹಾಸ್ಯಚಟಾಕಿ ಹಾರಿಸಿದ್ದಾರೆ.

ಪವಿತ್ರ ಸ್ನಾನದ ವೇಳೆ ಮಹಿಳೆಯೊಬ್ಬರು ತೆಂಗಿನಕಾಯಿಯನ್ನು ಕಸಿದುಕೊಳ್ಳುವ ವಿಡಿಯೊ, ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ರಂಜಿಸಿತು ಮತ್ತು ಆಶ್ಚರ್ಯಗೊಳಿಸಿತು. ವೈರಲ್ ಆಗಿರುವ ವಿಡಿಯೊದಲ್ಲಿ, ಯುವತಿಯೊಬ್ಬಳು ತೆಂಗಿನಕಾಯಿ ಮತ್ತು ಬಟ್ಟೆಯ ತುಂಡನ್ನು ಹಿಡಿದುಕೊಂಡು ಧಾರ್ಮಿಕ ಅರ್ಪಣೆ ಮಾಡಲು ಗಂಗಾ ನದಿಗೆ ಕಾಲಿಡುತ್ತಿರುವುದು ಕಂಡುಬಂದಿದೆ. ಜನದಟ್ಟಣೆ ಹೆಚ್ಚಿದ್ದರೂ, ನೀರಿನಲ್ಲಿ ನಡೆಯುತ್ತಾ ಬಂದ ಯುವತಿ ಭಕ್ತಿಯಿಂದ ಗಂಗೆಗೆ ಅರ್ಪಿಸಲು ಮುಂದಾಗಿದ್ದಾಳೆ.

ಯುವತಿ ತನ್ನ ಕೈಗಳನ್ನು ಮಡಚಿ ತೆಂಗಿನಕಾಯಿಯನ್ನು ನದಿಗೆ ಅರ್ಪಿಸುತ್ತಿದ್ದಂತೆ, ಚೀಲ ಹಿಡಿದ ಮಹಿಳೆಯೊಬ್ಬಳು ತೆಂಗಿನಕಾಯಿ ತೇಲುವ ಮೊದಲೇ ಅದನ್ನು ಎತ್ತಿಕೊಂಡು ಹೋಗುತ್ತಾಳೆ. ಇದನ್ನು ನೋಡಿದ ಯುವತಿ ದಿಗ್ಭ್ರಮೆಗೊಂಡಿದ್ದಾಳೆ. ಗೊಂದಲದಿಂದ ಸುತ್ತಲೂ ಆಕೆ ನೋಡಿದ್ದಾಳೆ. ಬಹುಷಃ ಆಕೆಗೆ ಏನು ಹೇಳಬೇಕು ಅನ್ನೋದು ತಿಳಿಯಲಿಲ್ಲ ಎಂದೆನಿಸುತ್ತದೆ. ಚೀಲ ಹಿಡಿದ ಮಹಿಳೆ ಕಾಣಿಸಿಕೊಂಡಷ್ಟೇ ವೇಗವಾಗಿ ಕಣ್ಮರೆಯಾಗುತ್ತಾಳೆ.

ಇಲ್ಲಿದೆ ವಿಡಿಯೊ:

ಈ ವಿಡಿಯೊವನ್ನು ಇನ್‌ಸ್ಟಾಗ್ರಾಮ್ ಬಳಕೆದಾರ @ps.reacts.05 ಹಂಚಿಕೊಂಡಿದ್ದು, 11 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ನೆಟ್ಟಿಗರು ಕಾಮೆಂಟ್‌ಗಳ ವಿಭಾಗದಲ್ಲಿ ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ್ದಾರೆ. ಆಸೆ ಕಣ್ಣು ಮಿಟುಕಿಸುವುದರೊಳಗೆ ಈಡೇರಿತು ಎಂದು ಬಳಕೆದಾರರೊಬ್ಬರು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು, ಒಂದು ನಿಮಿಷದಲ್ಲಿ ಭಾವನೆಗಳು ಬದಲಾದವು ಎಂದು ಬರೆದಿದ್ದಾರೆ. ಮೂರನೆಯವರು, ಅವಳು ಎಷ್ಟು ಬೇಗನೆ ಆ ತೆಂಗಿನಕಾಯಿಯನ್ನು ಎತ್ತಿಕೊಂಡಳು ಎಂದು ವ್ಯಂಗ್ಯವಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: Actor Pratham: ತಮ್ಮ ಮೇಲೆ ಹಲ್ಲೆ ನಡೆದಿದ್ದು ನಿಜ ಎಂದ ನಟ ಪ್ರಥಮ್‌; ಆಡಿಯೋ ವೈರಲ್‌, ಲಾಯರ್‌ ಜಗದೀಶ್‌ ವಿರುದ್ಧ ಕಿಡಿ

ಇನ್ನೂ ಕೆಲವರು ಪರಿಸರ ದೃಷ್ಟಿಕೋನದಿಂದ ಮಾತನಾಡುತ್ತಾ, ನಾವು ಸಕಾರಾತ್ಮಕ ಚಿಂತನೆಯನ್ನು ಮಾಡಬೇಕು ಎಂದಿದ್ದಾರೆ. ಅವರಂತಹ ಜನರು ಇಲ್ಲದಿದ್ದರೆ, ಘಾಟ್‌ಗಳು ತೆಂಗಿನಕಾಯಿ ಮತ್ತು ಬಟ್ಟೆಗಳಿಂದ ತುಂಬಿರುತ್ತಿದ್ದವು. ಸ್ವಚ್ಛಗೊಳಿಸುವುದು ತುಂಬಾ ಕಷ್ಟಕರವಾಗುತ್ತಿತ್ತು ಎಂದು ಒಬ್ಬ ಬಳಕೆದಾರರೊಬ್ಬರು ಹೇಳಿದ್ದಾರೆ. ಮತ್ತೊಬ್ಬರು, ಕೋಪಗೊಳ್ಳಬೇಡಿ. ದೇವಿ ಪ್ರಸಾದವನ್ನು ಸ್ವೀಕರಿಸಿದ್ದಾರೆ. ಗಂಗೆಯನ್ನು ಸ್ವಚ್ಛವಾಗಿಟ್ಟಿದ್ದಕ್ಕಾಗಿ ಅವರಿಗೆ ಧನ್ಯವಾದ ಹೇಳೋಣ ಎಂದು ಹೇಳಿದ್ದಾರೆ. ಸದ್ಯ ಈ ವಿಡಿಯೊ ಮಾತ್ರ ಭಾರಿ ವೈರಲ್ ಆಗಿದ್ದು, ಹಲವರು ನಗೆಗಡಲಲ್ಲಿ ತೇಲಿದ್ದಾರೆ.