ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಕಾರ್ಮಿಕನನ್ನು ತಲೆಕೆಳಗಾಗಿ ನೇತುಹಾಕಿ, ಗುತ್ತಿಗೆದಾರನಿಂದ ಥಳಿತ; ಅಮಾನವೀಯ ಕೃತ್ಯದ ವಿಡಿಯೊ ಇಲ್ಲಿದೆ

Migrant worker hung upside down: ವಲಸೆ ಕಾರ್ಮಿಕನೊಬ್ಬನನ್ನು ತಲೆಕೆಳಗಾಗಿ ನೇತುಹಾಕಿ ಅಮಾನುಷವಾಗಿ ಥಳಿಸಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. ಸೆಕ್ಟರ್ 37C ಯಲ್ಲಿ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ.

ಕಾರ್ಮಿಕನನ್ನು ತಲೆಕೆಳಗಾಗಿ ನೇತುಹಾಕಿ, ಗುತ್ತಿಗೆದಾರನಿಂದ ಥಳಿತ

Priyanka P Priyanka P Jul 29, 2025 5:48 PM

ಗುರುಗ್ರಾಮ: ವಲಸೆ ಕಾರ್ಮಿಕನೊಬ್ಬನನ್ನು ತಲೆಕೆಳಗಾಗಿ ನೇತುಹಾಕಿ ಅಮಾನುಷವಾಗಿ ಥಳಿಸಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. ಆರೋಪಿಯನ್ನು ಗುತ್ತಿಗೆದಾರ ಎಂದು ಗುರುತಿಸಲಾಗಿದೆ. ಸೆಕ್ಟರ್ 37C ಯಲ್ಲಿ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ತನ್ನ ಮೇಲೆ ಹಲ್ಲೆ ನಡೆದಾಗ ವಲಸೆ ಕಾರ್ಮಿಕನು ಅಳುತ್ತಾ ಬಿಟ್ಟುಬಿಡುವಂತೆ ಬೇಡಿಕೊಂಡಿದ್ದಾರೆ. ಗುತ್ತಿಗೆದಾರ ಆತನಿಗೆ ಥಳಿಸುವಾಗ, ಅಲ್ಲೇ ನಿಂತಿದ್ದ ಕೆಲವರು ಅವನೊಂದಿಗೆ ಜಗಳವಾಡಿದ್ದಾರೆ. ಇನ್ನು ಘಟನೆ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌(Viral Video) ಆಗುತ್ತಿದ್ದು, ಹಲವರಿಂದ ಖಂಡನೆ ವ್ಯಕ್ತವಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿಗಳನ್ನು ಗುರುತಿಸಿ ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ವರದಿಗಳು ತಿಳಿಸಿವೆ. ಆದರೆ, ವರದಿಯ ಪ್ರಕಾರ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದೆ ಎನ್ನಲಾಗಿದೆ. ಜೂನ್‌ನಲ್ಲಿ ನಡೆದಿದ್ದ ಘಟನೆಯಿದು ಎಂದು ಹೇಳಲಾಗಿದ್ದು, ಇತ್ತೀಚೆಗೆ ಪ್ರಕರಣ ಬೆಳಕಿಗೆ ಬಂದಿದೆ.

ವಿಡಿಯೊ ವೀಕ್ಷಿಸಿ:



ಬೆಚ್ಚಿ ಬೀಳಿಸುವ ಕೊಲೆ ಪ್ರಕರಣ

ಜುಲೈ 25 ರಂದು, ಹರಿಯಾಣ ಪೊಲೀಸ್ ಇಲಾಖೆಯ ಕಾನ್‌ಸ್ಟೇಬಲ್ ಒಬ್ಬರು ಗುರುಗ್ರಾಮದಲ್ಲಿ ವಾಸಿಸುತ್ತಿದ್ದ ತಮ್ಮ ಸಂಬಂಧಿಯನ್ನು ಕತ್ತು ಹಿಸುಕಿ ಕೊಂದ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧ ಪೊಲೀಸ್ ಪೇದೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ರಾಜಸ್ಥಾನ ಮೂಲದ ಸಂಗೀತಾ (25) ಮೃತ ದುರ್ದೈವಿ. ಅವರಿಗೆ ಮೂರು ವರ್ಷದ ಮಗುವಿದೆ. ಮೃತ ಸಂಗೀತಾ ಅವರ ಪತಿ ಸೇನೆಯಲ್ಲಿದ್ದರು. ಎರಡು ವರ್ಷಗಳ ಹಿಂದೆ ನಿಧನರಾದರು. ಅವರು ಕಾನ್‌ಸ್ಟೇಬಲ್ ರವೀಂದ್ರ ಅವರೊಂದಿಗೆ ಸೋಹ್ನಾದಲ್ಲಿ ಬಾಡಿಗೆ ಫ್ಲಾಟ್‌ನಲ್ಲಿ ಸ್ವಲ್ಪ ಸಮಯದಿಂದ ವಾಸಿಸುತ್ತಿದ್ದರು. ಅವರನ್ನು ಫ್ಲಾಟ್‌ನಲ್ಲಿ ಕತ್ತು ಹಿಸುಕಿ ಕೊಂದಿದ್ದಾರೆ.

ಈ ಸುದ್ದಿಯನ್ನೂ ಓದಿ: Actor Pratham: ತಮ್ಮ ಮೇಲೆ ಹಲ್ಲೆ ನಡೆದಿದ್ದು ನಿಜ ಎಂದ ನಟ ಪ್ರಥಮ್‌; ಆಡಿಯೋ ವೈರಲ್‌, ಲಾಯರ್‌ ಜಗದೀಶ್‌ ವಿರುದ್ಧ ಕಿಡಿ

ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿತು. ಸಂಗೀತಾಳ ಸಹೋದರ ನರೇಂದ್ರ, ರವೀಂದ್ರ ತನ್ನ ಸಹೋದರಿಯನ್ನು ಕೊಂದಿದ್ದಾನೆ ಎಂದು ಆರೋಪಿಸಿದ್ದಾರೆ. ನರೇಂದ್ರ ನೀಡಿದ ದೂರಿನ ಆಧಾರದ ಮೇಲೆ, ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ, ಪ್ರಸ್ತುತ ಆರೋಪಿ ಪರಾರಿಯಾಗಿದ್ದು, ಹುಡುಕಾಟ ನಡೆಸಲಾಗುತ್ತಿದೆ.