ಕಸದಿಂದ ತುಂಬಿ ಹೋದ ಕೇದಾರನಾಥ: ಹಿಮಾಲಯದ ರಕ್ಷಣೆಗೆ ಪ್ರತಿ ಯಾತ್ರಿಕ 1 ಕೆಜಿ ಕಸ ಮರಳಿ ಕೊಂಡೊಯ್ಯಲು ಮನವಿ
Viral News: ಉತ್ತರಾಖಂಡದ ಕೇದಾರನಾಥಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಭಕ್ತರು ಆಗಮಿಸುತ್ತಿದ್ದು, ಕೇವಲ 40 ದಿನಗಳಲ್ಲಿ 10 ಲಕ್ಷ ನೋಂದಾಯಿತ ಯಾತ್ರಿಕರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ಮಿತಿ ಮೀರುತ್ತಿರುವ ಕಸವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹೀಲಿಂಗ್ ಹಿಮಾಲಯಸ್‌ನ ಸಂಸ್ಥಾಪಕ ಪ್ರದೀಪ್ ಸಾಂಗ್ವಾನ್ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಪ್ರತಿಯೊಬ್ಬರೂ ಸುಮಾರು 1 ಕೆಜಿ ಕಸ ಅಲ್ಲಿಂದ ಸಾಗಿಸಬೇಕು ಎಂದು ಕರೆ ನೀಡಿದ್ದಾರೆ.
ಕೇದಾರನಾಥ ತ್ಯಾಜ್ಯ ವಿಲೇವಾರಿಗೆ ಸಹಕರಿಸಲು ಯಾತ್ರಿಕರಿಗೆ ಮನವಿ -
ಡೆಹ್ರಾಡೂನ್, ಜೂ. 2: ಇತ್ತೀಚೆಗೆ ಪ್ರವಾಸಿ ಸ್ಥಳದಲ್ಲಿ ತ್ಯಾಜ್ಯ ವಿಲೇವಾರಿ ಅನ್ನೋದು ದೊಡ್ಡ ಸಮಸ್ಯೆಯಾಗಿ ಬಿಟ್ಟಿದೆ. ಎಲ್ಲೆಂದರಲ್ಲಿ ಕಸ ಹಾಕುವ ಪರಿಪಾಠಕ್ಕೆ ಇನ್ನೂ ಕಡಿವಾಣ ಬಿದ್ದಿಲ್ಲ. ಅದರಲ್ಲೂ ಉತ್ತರಾಖಂಡದ ಕೇದಾರನಾಥ ದೇವಾಲಯದಲ್ಲಿ ಈ ಬಾರಿ ದಾಖಲೆಯ ಮಟ್ಟದಲ್ಲಿ ತ್ಯಾಜ್ಯ ಹೆಚ್ಚಾಗಿದೆ. ಕೇದಾರನಾಥ ದೇವಾಲುಕ್ಕೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರ ಆಗಮಿಸುತ್ತಿದ್ದು ಕೇವಲ 40 ದಿನಗಳಲ್ಲಿ, 10 ಲಕ್ಷ ನೋಂದಾಯಿತ ಯಾತ್ರಿಕರು ಭೇಟಿ ನೀಡಿದ್ದಾರೆ. ಕಸವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ʼಹೀಲಿಂಗ್ ಹಿಮಾಲಯಸ್ʼ ಸಂಸ್ಥೆಯ ಸಂಸ್ಥಾಪಕ ಪ್ರದೀಪ್ ಸಾಂಗ್ವಾನ್ ವಿಶೇಷ ಮನವಿ ಮಾಡಿದ್ದಾರೆ. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದೆ.
ಕೇದಾರನಾಥದ ಯಾತ್ರೆ ಪ್ರಾರಂಭವಾದ ಕೇವಲ 40 ದಿನಗಳಲ್ಲಿ, 10 ಲಕ್ಷ ನೋಂದಾಯಿತ ಯಾತ್ರಿಕರು ದೇವಾಲಯವನ್ನು ತಲುಪಿದ್ದಾರೆ. ಆದರೆ ಈ ಜನಸಂಖ್ಯೆ ಹಿಮಾಲಯದ ಪರಿಸರ ವ್ಯವಸ್ಥೆಯ ಮೇಲೆ ಭಾರಿ ಹಾನಿ ಉಂಟು ಮಾಡಿದೆ. ಈ ಸ್ಥಳದಲ್ಲಿ ಟನ್ ಗಟ್ಟಲೆ ತ್ಯಾಜ್ಯ ಆವರಿಸಿಕೊಂಡಿದ್ದು, ಪ್ರವಾಸೋದ್ಯಮ ಇಲಾಖೆಗೆ ವಿಲೇವಾರಿ ದೊಡ್ಡ ಸವಾಲಾಗಿದೆ.
ವೈರಲ್ ಪೋಸ್ಟ್ ಇಲ್ಲಿದೆ:
40 days of Kedarnath Yatra
— Pradeep Sangwan (@iPradeepSangwan) June 2, 2026
10 lakh registered pilgrims reached breaking all previous records
Our carry me back yatra is now picking up
1 lakh yatri carrying 1kg = 100 tons removed
That’s our aim #HealingHimalayas
it’s all digital - so keeping records pic.twitter.com/wd2iurl0Vf
ಇದಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರದೀಪ್ ಸಾಂಗ್ವಾನ್ ಉತ್ತಮ ಯೋಜನೆ ಪ್ರಕಟಿಸಿದ್ದಾರೆ. ʼಕ್ಯಾರಿ ಮಿ ಬ್ಯಾಕ್' ಡಿಜಿಟಲ್ ಅಭಿಯಾನವನ್ನು ಅವರು ಹಂಚಿಕೊಂಡಿದ್ದಾರೆ. ಅವರ ಪ್ರಕಾರ, ಪ್ರತಿ ಕೇದಾರನಾಥ ಯಾತ್ರಿಕ ಹಿಮಾಲಯವನ್ನು ಉಳಿಸಲು ತಲಾ 1 ಕೆಜಿ ಕಸವನ್ನು ಹಿಂದಕ್ಕೆ ಕೊಂಡೊಯ್ಯಬೇಕು.
ಶೂಟಿಂಗ್ ವೇಳೆ ಗೋಡೆ ಏರಿದ ಅಕ್ಷಯ ಕುಮಾರ್; ಮೈ ಝುಂ ಎನ್ನುವ ಸಾಹಸ ದೃಶ್ಯ
ಪ್ರತಿ ಯಾತ್ರಾರ್ಥಿ ಕನಿಷ್ಠ 250 ಗ್ರಾಂನಿಂದ 5 ಕೆಜಿವರೆಗೆ ಪ್ಲಾಸ್ಟಿಕ್ ಅಥವಾ ಇತರ ಕಸವನ್ನು ಬೆಟ್ಟದಿಂದ ಕೆಳಗೆ ಕೊಂಡೊಯ್ಯಬೇಕು ಎಂದು ಹೇಳಿದ್ದಾರೆ. ಒಂದು ಲಕ್ಷ ಯಾತ್ರಾರ್ಥಿಗಳು ತಲಾ 1 ಕೆಜಿ ಕಸವನ್ನು ಮರಳಿ ತಂದರೆ, ಕೇವಲ 40 ದಿನಗಳಲ್ಲಿ 100 ಟನ್ ಕಸಕ್ಕೆ ಕಡಿವಾಣ ಹಾಕಬಹುದು ಎಂಬುದು ಅವರ ಲೆಕ್ಕಾಚಾರ.
ಪ್ರದೀಪ್ ಸಾಂಗ್ವಾನ್ ವರ್ಷಗಳ ಹಿಂದೆ ಹಿಮಾಚಲ ಪ್ರದೇಶದ ಚಾರಣ ಪ್ರದೇಶಗಳಲ್ಲಿ ಕಸದ ರಾಶಿಯನ್ನು ಕಂಡು 2016ರಲ್ಲಿ ಹೀಲಿಂಗ್ ಹಿಮಾಲಯಸ್ ಫೌಂಡೇಶನ್' ಪ್ರಾರಂಭಿಸಿದರು. ಈ ಕೆಲಸಕ್ಕೆ ನೆಟ್ಟಿಗರಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ. ಒಬ್ಬರು, ʼʼಯಾತ್ರಾರ್ಥಿಗಳು ಕೇವಲ ದೇವರ ದರ್ಶನ ಪಡೆಯುವುದಷ್ಟೇ ಅಲ್ಲದೆ, ಪ್ರಕೃತಿಯನ್ನು ಸ್ವಚ್ಛವಾಗಿಡಬೇಕುʼʼ ಎಂದು ಕಮೆಂಟ್ ಮಾಡಿದ್ದಾರೆ.