ಹುಟ್ಟಿದ ಎರಡೇ ದಿನಕ್ಕೆ ಫುಟ್‌ಬಾಲ್ ‘ಟ್ರೈನಿಂಗ್’ ; ಫಿಫಾ ವಿಶ್ವಕಪ್‌ಗೆ ಆನೆ ಮರಿ ಫುಲ್ ರೆಡಿ, ವಿಡಿಯೋ ನೋಡಿ
Viral News: ಮೃಗಾಲಯದಲ್ಲಿ ಹುಟ್ಟಿದ ಕೇವಲ ಎರಡು ದಿನದ ಪುಟ್ಟ ಆನೆಯೊಂದು ಫುಟ್ ಬಾಲ್ ಟ್ರೈನಿಂಗ್ ಆರಂಭ ಮಾಡಿರುವ ದೃಶ್ಯವೊಂದು ಭಾರೀ ವೈರಲ್ ಆಗಿದೆ. ವೀಡಿಯೊದಲ್ಲಿ, ಪುಟ್ಟ ಆನೆಯು ತನ್ನ ಮುಂದೆ ಇರಿಸಲಾದ ಫುಟ್‌ಬಾಲ್ ಅನ್ನು ಆಶ್ಚರ್ಯದಿಂದ ನೋಡುತ್ತಿರುವ ವಿಡಿಯೊ ಕಾಣಬಹುದು...
ಫುಟ್‌ಬಾಲ್‌ಗಾಗಿ 'ತರಬೇತಿ' ಪಡೆಯುತ್ತಿರುವ ಮರಿ ಆನೆ -
ಏಷ್ಯ,ಜೂ.12: ವಿಶ್ವದಾದ್ಯಂತ FIFA ವಿಶ್ವಕಪ್ 2026 ರ ಉತ್ಸಾಹ ಭಾರೀ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಮೃಗಾಲಯದಲ್ಲಿ ಹುಟ್ಟಿದ ಕೇವಲ ಎರಡು ದಿನದ ಪುಟ್ಟ ಆನೆಯೊಂದು ಫುಟ್ ಬಾಲ್ ಟ್ರೈನಿಂಗ್ ಆರಂಭ ಮಾಡಿರುವ ದೃಶ್ಯವೊಂದು ಭಾರೀ ವೈರಲ್ (Viral News) ಆಗಿದೆ. ವೀಡಿಯೊದಲ್ಲಿ, ಪುಟ್ಟ ಆನೆಯು ತನ್ನ ಮುಂದೆ ಇರಿಸಲಾದ ಫುಟ್‌ಬಾಲ್ ಅನ್ನು ಆಶ್ಚರ್ಯದಿಂದ ನೋಡುತ್ತಿರುವ ವಿಡಿಯೊ ಕಾಣಬಹುದು.
ಯುಕೆ ಮೃಗಾಲಯದಿಂದ ಈ ಹೃದಯಸ್ಪರ್ಶಿ ವೀಡಿಯೊ ಶೇರ್ ಮಾಡಲಾಗಿದೆ. ವೀಡಿಯೊದಲ್ಲಿ, ಪುಟ್ಟ ಆನೆಯು ತನ್ನ ಮುಂದೆ ಇರಿಸಲಾದ ಫುಟ್‌ಬಾಲ್ ಅನ್ನು ಸಮೀಪಿಸುತ್ತಿರುವುದನ್ನು ಕಾಣಬಹುದು. ಮೊದಲಿಗೆ, ಅದು ತನ್ನ ಸೊಂಡಿಲಿನಿಂದ ಹಿಡಿದು ಆಶ್ಚರ್ಯದಿಂದ ನೋಡುತ್ತಿ ರುತ್ತದೆ. ಕೆಲವು ಕ್ಷಣದ ನಂತರ ಆ ವಸ್ತು ಏನೆಂದು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ. ನಂತರ, ಅದು ತನ್ನ ಪಾದಗಳಿಂದ ಚೆಂಡನ್ನು ಮುಂದಕ್ಕೆ ತಳ್ಳಲು ಪ್ರಾರಂಭಿಸಿದೆ.
ವಿಡಿಯೋ ನೋಡಿ:
A baby Asian elephant made his debut at a UK zoo on Wednesday at just two days old.
— The Associated Press (@AP) June 11, 2026
On the eve of the FIFA World Cup, the baby boy was given a ball to play with and could be seen attempting a few dribbles and investigating with his trunk. pic.twitter.com/ExczEmk16y
ವಿಶ್ವದ ಕೋಟ್ಯಂತರ ಫುಟ್ಬಾಲ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಫಿಫಾ ವಿಶ್ವಕಪ್ ಆರಂಭವಾಗುತ್ತಿದ್ದಂತೆ ಈ ದೃಶ್ಯ ಕೂಡ ಎಲ್ಲರ ಗಮನ ಸೆಳೆಯುತ್ತಿದೆ. ವೀಡಿಯೊದಲ್ಲಿ, ಪುಟ್ಟ ಆನೆಯು ತನ್ನ ಮುಂದೆ ಇರಿಸಲಾದ ಫುಟ್‌ಬಾಲ್ ಅನ್ನು ಆಶ್ಚರ್ಯದಿಂದ ನೋಡುತ್ತಿರುವ ವಿಡಿಯೊ ಕಾಣಬಹುದು.
Viral Video: ಏರ್‌ಪೋರ್ಟ್ ರೋಡ್‌ನಲ್ಲಿ ಮಚ್ಚು ಹಿಡಿದು ವಿಲೀಂಗ್; ಯುವಕರ ಹುಚ್ಚಾಟ ಕ್ಯಾಮರಾದಲ್ಲಿ ಸೆರೆ
ಮುದ್ದಾದ ಪುಟ್ಟ ಆನೆಮರಿ ಫುಟ್‌ಬಾಲ್ ಅನ್ನು ತಳ್ಳಲು ಪ್ರಯತ್ನಿಸುವ ದೃಶ್ಯ ವೀಕ್ಷಕರನ್ನು ಖುಷಿ ಪಡಿಸಿದೆ. ಕೇವಲ ಎರಡು ದಿನಗಳ ಮರಿಯಾದರೂ ಉತ್ಸಾಹ ಮತ್ತು ಮುಗ್ಧತೆ ಎಲ್ಲರ ಹೃದಯ ತಟ್ಟಿದೆ. ಈ ಮುದ್ದಾದ ವಿಡಿಯೋ ಕಂಡು ನೆಟ್ಟಿಗರು ಫುಲ್ ಫಿದಾ ಆಗಿದ್ದು ನಾನಾ ಪ್ರತಿಕ್ರಿಯೆ ಗಳನ್ನು ನೀಡುತ್ತಿದ್ದಾರೆ. ಬಳಕೆದಾರರೊಬ್ಬರು ವಿಷ್ಯದ ಗೋಲ್ಡನ್ ಬೂಟ್ ವಿಜೇತ ಅಲ್ಲೇ ಇದ್ದಾನೆ ಎಂದು ಬರೆದಿದ್ದಾರೆ. ಮತ್ತೊಬ್ಬರು ವಿಶ್ವಕಪ್ ಅನ್ನು ಯಾರು ಗೆಲ್ಲುತ್ತಾರೋ ಇಲ್ಲವೋ ಗೊತ್ತಿಲ್ಲ, ಆದರೆ ಈ ಆನೆಮರಿ ಎಲ್ಲರ ಮನಸ್ಸನ್ನು ಗೆದ್ದಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.