ಬೆಂಗಳೂರು ವ್ಯಕ್ತಿಯ 'ರಾಕೆಟ್ ಸ್ಟೌವ್' ಹೋಟೆಲ್‌ಗಳಿಗೆ ಆಸರೆ; ಹೇಗಿದೆ ನೋಡಿ ಇದರ ವಿನ್ಯಾಸ!
Viral News: ಭಾರತದಲ್ಲಿ ವಾಣಿಜ್ಯ ಹಾಗೂ ಅಡುಗೆ ಅನಿಲ ಸಿಲಿಂಡರ್ ಕೊರತೆಯ ಆತಂಕ ದಿನದಿಂದ ದಿನಕ್ಕೆ ಜಾಸ್ತಿಯಾಗಿದೆ. ಹೀಗಾಗಿ ಈ ಅಭಾವ ತಪ್ಪಿಸಲು ಕೆಲವರು ಸೌದೆ ಒಲೆಗೆ ಒತ್ತು ನೀಡುತ್ತಿದ್ದಾರೆ. ಈ ನಡುವೆ ಬೆಂಗಳೂರಿನ ವ್ಯಕ್ತಿಯೊಬ್ಬರ ರಾಕೆಟ್ ಸ್ಟೌವ್ ಹೋಟೆಲ್ ಗಳಿಗೆ ಆಸರೆಯಾಗಿದೆ. ವರ್ಷಗಳ ಹಿಂದೆ ರಚಿಸಲಾದ ಅವರ ಕಲ್ಪನೆಯನ್ನು ಈಗ ಈ ಸಮಯದಲ್ಲಿ ಉಪಯುಕ್ತ ಆಯ್ಕೆಯಾಗಿದೆ.
ಬೆಂಗಳೂರು ವ್ಯಕ್ತಿಯ 'ರಾಕೆಟ್ ಸ್ಟೌವ್' ಹೋಟೆಲ್ ಗಳಿಗೆ ಆಸರೆ -
ಬೆಂಗಳೂರು,ಮಾ.17: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಭೀತಿ ಕರ್ನಾಟಕದ ಅಡುಗೆಮನೆಗೂ ತಟ್ಟಿದೆ. ಭಾರತದಲ್ಲಿ ವಾಣಿಜ್ಯ ಹಾಗೂ ಅಡುಗೆ ಅನಿಲ ಸಿಲಿಂಡರ್ ಕೊರತೆಯ ಆತಂಕ ದಿನದಿಂದ ದಿನಕ್ಕೆ ಜಾಸ್ತಿ ಯಾಗಿದೆ. ಹೀಗಾಗಿ ಈ ಅಭಾವ ತಪ್ಪಿಸಲು ಕೆಲವರು ಸೌದೆ ಒಲೆಗೆ ಒತ್ತು ನೀಡುತ್ತಿದ್ದಾರೆ. ಈ ನಡುವೆ ಬೆಂಗಳೂರಿನ (Bengaluru) ವ್ಯಕ್ತಿಯೊಬ್ಬರ ರಾಕೆಟ್ ಸ್ಟೌವ್ ಹೋಟೆಲ್ ಗಳಿಗೆ ಆಸರೆಯಾಗಿದೆ. ವರ್ಷಗಳ ಹಿಂದೆ ರಚಿಸಲಾದ ಅವರ ಕಲ್ಪನೆಯನ್ನು ಈಗ ಈ ಸಮಯದಲ್ಲಿ ಉಪಯುಕ್ತ ಆಯ್ಕೆಯಾಗಿದೆ.
ಎಲ್‌ಪಿಜಿ ಪೂರೈಕೆ ಸಮಸ್ಯೆಗಳಿಂದಾಗಿ ರೆಸ್ಟೋರೆಂಟ್‌ಗಳು ಸಮಸ್ಯೆಗಳನ್ನು ಎದುರಿಸುತ್ತಿದೆ. ಕೆಲವರು ಹೋಟೆಲ್ ಅನ್ನು ಮುಚ್ಚುವಂತಹ ಪರಿಸ್ಥಿತಿ ಬಂದಿದೆ. ಈ ನಡುವೆ ಬೆಂಗಳೂರು ನಿವಾಸಿಯ ಸರಳ ಅಡುಗೆ ಪರಿಹಾರವು ಈಗ ಗಮನ ಸೆಳೆಯುತ್ತಿದೆ. ಅವರು ಇಂಧನ ಉಳಿತಾಯದ "ರಾಕೆಟ್ ಸ್ಟೌವ್" ಅನ್ನು ಮಾದರಿಯಾಗಿ ಬಳಸಿದ್ದಾರೆ.
Bengaluru man’s ‘rocket stove’ draws attention amid LPG crisis
— The Hindu (@the_hindu) March 15, 2026
✍️@rishitaakhanna https://t.co/pONkgUsRjF
ಈ ಹಿಂದೆ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದಲ್ಲಿ ಕೆಲಸ ಮಾಡಿದ್ದ 65 ವರ್ಷದ ಅಶೋಕ್ ಅರ್ಸ್ ಇಂಧನ ಉಳಿತಾಯದ "ರಾಕೆಟ್ ಸ್ಟೌವ್" ಅನ್ನು ಅಭಿವೃದ್ಧಿಪಡಿಸಿದ್ದಾರೆ. ಗ್ರಾಮೀಣ ಭಾಗದ ಜನತೆಗಾಗಿ ಅವರು ಇದನ್ನು ಜಾರಿಗೆ ತಂದಿದ್ದು ಕಡಿಮೆ ಇಂಧನವನ್ನು ಬಳಸಿ ಅಡುಗೆ ಮಾಡಬಹುದು ಎಂದು ಅವರು ತೋರಿಸಲು ಬಯಸಿದ್ದರು.
Viral Video: ಛೇ ಎಂತಾ ಅಮಾನವೀಯ ಕೃತ್ಯ: ಭಾರಿ ತೂಕದ ಪಾರ್ಸೆಲ್ ಹೊತ್ತು ಹೈರಾಣಾದ ಡೆಲಿವರಿ ಬಾಯ್!
ಅನೇಕ ಗ್ರಾಮೀಣ ಪ್ರದೇಶಗಳಲ್ಲಿ, ಜನರು ಅಧಿಕ ಹೊಗೆಯನ್ನು ಉತ್ಪಾದಿಸುವ ತೆರೆದ ಬೆಂಕಿಯಲ್ಲಿ ಅಡುಗೆ ಮಾಡುತ್ತಾರೆ. ಅದೇ ಕೆಲಸವನ್ನುಕಡಿಮೆ ಇಂಧನದಿಂದ ಮಾಡಬಹುದು ಎಂದು ಸಾಬೀತು ಪಡಿಸಿದ್ದಾರೆ. ರಾಕೆಟ್ ಸ್ಟೌವ್ ಒಂದು ಸಣ್ಣ ಮರದ ಸ್ಟೌವ್ ಆಗಿದ್ದು, ಇಂಧನವನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಲು ವಿನ್ಯಾಸಗೊಳಿಸಲಾಗಿದೆ. ಇದು ವಿಶೇಷ L- ಆಕಾರದ ಕೋಣೆ ಯನ್ನು ಹೊಂದಿದ್ದು ಅದು ಗಾಳಿಯ ಹರಿವನ್ನು ಉತ್ತಮವಾಗಿ ಸಾಗಿಸಿ ಬಲವಾದ ಶಾಖವನ್ನು ಸೃಷ್ಟಿಸುತ್ತದೆ.
ಈ ವಿನ್ಯಾಸದಿಂದಾಗಿ, ಒಣ ಎಲೆಗಳು, ತೆಂಗಿನ ಚಿಪ್ಪುಗಳು ಮತ್ತು ಇತರ ತ್ಯಾಜ್ಯ ವಸ್ತುಗಳಂತಹ ಸಣ್ಣ ವಸ್ತುಗಳನ್ನು ಇಂಧನವಾಗಿ ಬಳಸಬಹುದು. ಇವು ಸಾಮಾನ್ಯ ಸ್ಟೌವ್‌ಗಳಿಗೆ ಹೋಲಿಸಿದರೆ ಹೆಚ್ಚು ಹೆಚ್ಚಿನ ತಾಪಮಾನದಲ್ಲಿ ಉರಿಯುತ್ತವೆ. ಪ್ರತಿ ಸ್ಟೌವ್‌ಗೆ ಸುಮಾರು 3,000 ರೂ. ಇದನ್ನು ಮೊದಲು ಗ್ರಾಮೀಣ ಮನೆಗಳಿಗಾಗಿ ತಯಾರಿಸಲಾಗಿದ್ದರೂ, ಪ್ರಸ್ತುತ LPG ಪೂರೈಕೆ ಸಮಸ್ಯೆ ಗಳಿಂದಾಗಿ ಬೆಂಗಳೂರಿನ ಕೆಲವು ರೆಸ್ಟೋರೆಂಟ್‌ಗಳಲ್ಲಿ ಇದನ್ನು ಬಳಕೆ ಮಾಡುತ್ತಿದ್ದಾರೆ.