26ನೇ ವಯಸ್ಸಿಗೆ ಬಿಎಂಡಬ್ಲ್ಯು ಕಾರ್ ಖರೀದಿಸಿದ ಬೆಂಗಳೂರಿನ ಯುವಕ: ಪೋಷಕರ ಭಾವನಾತ್ಮಕ ಕ್ಷಣ ವೈರಲ್
Viral News: ಬೆಂಗಳೂರಿನ ಟೆಕ್ಕಿ ಇಶಾನ್ ದತ್ತ 26ನೇ ವಯಸ್ಸಿನಲ್ಲಿ ತಮ್ಮ ಕನಸಿನ ಬಿಎಂಡಬ್ಲ್ಯು ಕಾರ್ ಖರೀದಿಸಿದ್ದು, ಇದನ್ನು ಕಂಡು ಪೋಷಕರು ಖುಷಿಯಲ್ಲೇ ಅತ್ತು ಬಿಟ್ಟಿದ್ದಾರೆ. ಈ ಘಟನೆಯ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಬಿಎಂಡಬ್ಲ್ಯು ಕಾರ್ ಖರೀದಿಸಿದ ಬೆಂಗಳೂರಿನ ಯುವಕ -
ಬೆಂಗಳೂರು, ಮೇ 21: ಹೆಚ್ಚಿನ ಮಕ್ಕಳಿಗೆ ವಾಹನ ಖರೀದಿಸಬೇಕು, ಪೋಷಕರನ್ನು ಅದರಲ್ಲಿ ಟ್ರಿಪ್ ಕರೆದೊಯ್ಯಬೇಕು ಎನ್ನುವ ಆಸೆ, ಕನಸು ಇರುತ್ತದೆ. ಅದರಲ್ಲೂ ಕಷ್ಟ ಪಟ್ಟು ಓದಿ ಕೆಲಸ ಗಿಟ್ಟಿಸಿಕೊಂಡ ಮಕ್ಕಳಂತೂ ಇಂತಹ ಕನಸು ಕಾಣುವಲ್ಲಿ ಮೊದಲಿಗರು. ಇಂತಹದ್ದೇ ಒಂದು ಹೆಮ್ಮೆಯ ಕ್ಷಣದ ದೃಶ್ಯ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಟೆಕ್ಕಿ ಇಶಾನ್ ದತ್ತ 26ನೇ ವಯಸ್ಸಿನಲ್ಲಿ ತಮ್ಮ ಕನಸಿನ ಬಿಎಂಡಬ್ಲ್ಯು ಕಾರ್ ಖರೀದಿಸಿದ್ದು ಇದನ್ನು ಕಂಡು ಪೋಷಕರು ಖುಷಿಯಲ್ಲೇ ಅತ್ತು ಬಿಟ್ಟಿದ್ದಾರೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗುತ್ತಿದೆ.
ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್ ಇಶಾನ್ ದತ್ತ 26ನೇ ವಯಸ್ಸಿನಲ್ಲಿ ತಮ್ಮ ಕನಸಿನ ಬಿಎಂಡಬ್ಲ್ಯು ಖರೀದಿಸಿದ ಭಾವನಾತ್ಮಕ ವಿಡಿಯೊವನ್ನು ಶೇರ್ ಮಾಡಿದ್ದಾರೆ. ಈ ಖುಷಿಯ ಕ್ಷಣಕ್ಕೆ ಕೇವಲ ಯುವಕ ಮಾತ್ರವಲ್ಲದೆ ಆತನ ಪೋಷಕರು ಕೂಡ ಹೆಮ್ಮೆ ಪಟ್ಟಿದ್ದಾರೆ.
ವೈರಲ್ ವಿಡಿಯೊ ಇಲ್ಲಿದೆ:
From manifesting a BMW at 26 to making it a reality this is still unbelievable for me.
— Ishan Dutta (@ishandutta0098) May 20, 2026
This video is a log of how happy your parents can be when you do well in life.
Special thanks to my friends from X @animeshsingh38 @wavedant_ @adityaoberai @reddy2go @apoorva_ag_ @viveknigam_… pic.twitter.com/5hhW47sZvu
ಇಶಾನ್ ದತ್ತ ಅವರ ಈ ಕನಸು ಹಲವು ವರ್ಷಗಳ ಹಿಂದೆಯೇ ಶುರುವಾಗಿತ್ತು. 2022ರಲ್ಲಿ ಅವರು ಬೆಂಗಳೂರಿನ ಬೀದಿಯೊಂದರಲ್ಲಿ ಅದೇ BMW ಮಾದರಿಯನ್ನು ಗುರುತಿಸಿ ಅದರ ಛಾಯಾಚಿತ್ರವನ್ನು ಕ್ಲಿಕ್ಕಿಸಿಕೊಂಡಿದ್ದರು. ನಂತರ ಮೂರು ವರ್ಷಗಳ ಹಿಂದೆ ಆ ಫೋಟೊವನ್ನು ತಂಗಿಗೆ ಕಳುಹಿಸಿ ಈ ಕಾರ್ ಮುಂದೆ ನನ್ನದಾಗಲಿದೆ ಎಂದು ಹೇಳಿಕೊಂಡಿದ್ದರು. ಇದೀಗ ತಮ್ಮ ಪೋಷಕರಿಗೆ ಕಾರನ್ನು ಉಡುಗೊರೆಯಾಗಿ ನೀಡುವ ಮೂಲಕ ಅಚ್ಚರಿ ಕೊಟ್ಟಿದ್ದಾರೆ. ಕಾರ್ ನೋಡುತ್ತಿದ್ದಂತೆ ಅವರ ತಂದೆ, ಸಂತೋಷದಿಂದ "ನನ್ನ ಮಗ ಕಾರು ಖರೀದಿಸಿದ್ದಾನೆ. ನನಗೆ ಸಂತೋಷವಾಗಿದೆ, ಈಗ ನಾವು ಡ್ರೈವ್‌ಗೆ ಹೋಗುತ್ತೇವೆ" ಎಂದು ಹೇಳಿದ್ದಾರೆ.
ಗಡಿ ದಾಟಿ ಭಾರತದೊಳಗೆ ಸುಲಭವಾಗಿ ಕಾಲಿಡಬಹುದು ಎಂದ ಪಾಕಿಸ್ತಾನ ಪತ್ರಕರ್ತೆಗೆ ತರಾಟೆ
ಕ್ಲಿಪ್‌ನಲ್ಲಿ ಅವರ ತಾಯಿಯೂ ಭಾವುಕರಾಗಿ ಕಾಣಿಸಿಕೊಂಡಿದ್ದು, ತಮ್ಮ ಮಗ ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಷ್ಟು ದುಬಾರಿ ಕಾರನ್ನು ಖರೀದಿಸುತ್ತಾನೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ ಎಂದು ಹೇಳುತ್ತಾರೆ. ಈ ಕ್ಷಣವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡ ದತ್ತ, “26ನೇ ವಯಸ್ಸಿನಲ್ಲಿ BMW ಕಾರು...ಇದನ್ನು ನನಸಾಗಿಸುವವರೆಗೆ, ಇದು ಇನ್ನೂ ಕನಸಿನಂತೆ ಭಾಸವಾಗುತ್ತಿದೆ. ನನ್ನ ಹೆತ್ತವರು ಇದನ್ನು ಆಚರಿಸಿರುವುದು ನಿಜಕ್ಕೂ ಖುಷಿ ಕೊಡುತ್ತದೆ. ಈ ವರ್ಷಗಳಲ್ಲಿ ನನ್ನನ್ನು ಬೆಂಬಲಿಸಿದ್ದಕ್ಕಾಗಿ, ನಿಜವಾಗಿಯೂ ಕೃತಜ್ಞರಾಗಿರುತ್ತೇನೆʼʼ ಎಂದಿದ್ದಾರೆ. ನೆಟ್ಟಿಗರು ಕೂಡ ಇಶಾನ್ ಅವರ ಪರಿಶ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.