ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನೀನಾ-ನಾನಾ? ರಾಂಗ್ ರೂಟ್‌ನಲ್ಲಿ ಬಂದ ಸರ್ಕಾರಿ ಬಸ್‌ ಚಾಲಕನಿಗೆ ದಾರಿ ಬಿಡದೆ ವಾಪಸ್‌ ಕಳುಹಿಸಿದ ಬೈಕ್ ಸವಾರ

Viral Video: ರಸ್ತೆಯಲ್ಲಿ ಪ್ರಯಾಣಿಸುವಾಗ ದೊಡ್ಡ ವಾಹನಗಳು ಬಂದು ನಿಂತರೆ ಸಾಕು. ನಾವೇ ದಾರಿ ಬಿಟ್ಟು ಕೊಡುತ್ತೇವೆ. ಆದರೆ ತೆಲಂಗಾಣ ರಾಜಧಾನಿ ಹೈದರಾಬಾದ್‌ನ ಬೈಕ್‌ ಸವಾರ ರಾಂಗ್ ರೂಟ್‌ನಲ್ಲಿ ಬಂದ ಸರ್ಕಾರಿ ಬಸ್‌ಗೆ ದಾರಿ ಬಿಟ್ಟು ಕೊಡದೆ ನಿಯಮ ಉಲ್ಲಂಘಿಸಿರುವ ಬಗ್ಗೆ ಪ್ರಶ್ನಿಸಿದ್ದಾನೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನಿಯಮ ಉಲ್ಲಂಘಿಸಿದ ಬಸ್ ಚಾಲಕನನ್ನು ತಡೆದ ಬೈಕ್ ಸವಾರ

ಹೈದರಾಬಾದ್‌ನಲ್ಲಿ ಬಸ್ ಚಾಲಕನನ್ನು ತಡೆದ ಬೈಕ್ ಸವಾರ -

Profile
Pushpa Kumari Jun 17, 2026 4:48 PM

ಹೈದರಾಬಾದ್, ಜೂ. 17: ಇಂದು ರಸ್ತೆಗಳಲ್ಲಿ ಬರೀ ದುಬಾರಿ ಕಾರ್, ಜೀಪುಗಳದ್ದೇ ಹವಾ. ಅದರಲ್ಲೂ ರಸ್ತೆಯಲ್ಲಿ ಪ್ರಯಾಣಿಸುವಾಗ ದೊಡ್ಡ ವಾಹನಗಳು ಬಂದು ನಿಂತರೆ ಸಾಕು ದ್ವಿಚಕ್ರ ವಾಹನ ಸವಾರರು ದಾರಿ ಬಿಟ್ಟು ಕೊಡುತ್ತಾರೆ. ಆದರೆ ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ಅಪರೂಪದ ದೃಶ್ಯವೊಂದು ಕಂಡು ಬಂದಿದೆ. ಬೈಕ್ ಸವಾರನೊಬ್ಬ ರಾಂಗ್ ರೂಟ್‌ನಲ್ಲಿ ಬಂದ ಸರ್ಕಾರಿ ಬಸ್‌ಗೆ ಸೈಡ್‌ ಬಿಟ್ಟು ಕೊಡದೆ ನಿಯಮ ಉಲ್ಲಂಘಿಸಿರುವ ಬಗ್ಗೆ ಪ್ರಶ್ನೆ ಮಾಡಿದ್ದಾನೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಆತನ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಹೈದರಾಬಾದ್‌ನ ವೇವ್‌ರಾಕ್ ಮತ್ತು ಬಾಚುಪಲ್ಲಿ ನಡುವಿನ ರಸ್ತೆಯಲ್ಲಿ ಈ ಘಟನೆ ನಡೆದಿದೆ. ವಿಡಿಯೊದಲ್ಲಿ ಬಸ್ ರಸ್ತೆಯ ರಾಂಗ್‌ ಸೈಡ್‌ನಲ್ಲಿದ್ದರೂ ಚಾಲಕ ಮುಂದಕ್ಕೆ ಚಲಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಅದಾಗ್ಯೂ ಬೈಕ್ ಸವಾರ ದಾರಿ ಬಿಡಲು ನಿರಾಕರಿಸಿ ಅಲ್ಲೇ ನಿಂತು, ಬಸ್‌ ಚಲಿಸದಂತೆ ತಡೆದಿದ್ದಾನೆ.

ವಿಡಿಯೊ ನೋಡಿ:

ಆರಂಭದಲ್ಲಿ ಬಸ್‌ ಚಾಲಕ ಹಿಂದೆ ಸರಿಯಲು ಒಪ್ಪದ ಕಾರಣ ಸ್ವಲ್ಪ ಸಮಯದವರೆಗೆ ಉದ್ವಿಗ್ನ ವಾತಾವರಣ ಕಂಡುಬಂತು. ಕೊನೆಗೂ ಬಸ್ ಚಾಲಕ ತನ್ನ ತಪ್ಪನ್ನು ಅರಿತುಕೊಂಡು ವಾಹನವನ್ನು ರಿವರ್ಸ್ ತೆಗೆದುಕೊಂಡು ಸರಿಯಾದ ರೂಟ್‌ನಲ್ಲಿ ಹೊರಟಿದ್ದಾನೆ. ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಇದಾಗಿದ್ದು, ನಿಯಮಗಳನ್ನು ಗಾಳಿಗೆ ತೂರಿ, ರಸ್ತೆಯ ರಾಂಗ್‌ ಸೈಡ್‌ನಲ್ಲಿ ವೇಗವಾಗಿ ಬರುತ್ತಿತ್ತು.

ಮದುವೆಗೆ ನಿರಾಕರಿಸಿದ್ದ ಪ್ರೇಯಸಿ: ವಿದ್ಯುತ್ ಟವರ್ ಏರಿದ ಪಾಗಲ್ ಪ್ರೇಮಿ

ಆದರೆ ಯುವಕ ಸರ್ಕಾರಿ ಬಸ್ ಅನ್ನು ಎದುರಿಸಿ ಅದನ್ನು ಹಾದುಹೋಗಲು ಬಿಡಲು ನಿರಾಕರಿಸಿ ಬುದ್ಧಿ ಕಲಿಸಿದ್ದಾನೆ. ಬೈಕ್ ಸವಾರ ಮಾತ್ರ ಇಂಚೂ ಕದಲದೆ ರಸ್ತೆಯ ಮಧ್ಯದಲ್ಲೇ ನಿಂತಿದ್ದಾನೆ. ಬೈಕ್ ಸವಾರ ರಸ್ತೆ ಬಿಟ್ಟು ಹೋಗುವುದಿಲ್ಲ ಎಂದು ತಿಳಿದ ಬಸ್ ಚಾಲಕ ಅನಿವಾರ್ಯವಾಗಿ ಬಸ್‌ ಅನ್ನು ರಿವರ್ಸ್ ತೆಗೆದಿದ್ದಾನೆ‌.

ಸದ್ಯ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಬ್ಬರು, ʼʼಸರಿಯಾಗಿ ಮಾಡಿದ್ದೀರಿ. ಇಂತಹವರು ನಮಗೆ ಬೇಕುʼʼ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ʼʼಇಂತಹ ಬಸ್ ಚಾಲಕರ ವಿರುದ್ಧ ಧ್ವನಿ ಎತ್ತಲು ಎಲ್ಲರೂ ಧೈರ್ಯ ತೋರಬೇಕುʼʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ.