ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರೈಲಿನಲ್ಲಿ ಕ್ಯಾನ್ಸರ್ ರೋಗಿ ಸಾವು: 12 ಗಂಟೆಗಳ ಕಾಲ ಶವದ ಪಕ್ಕದಲ್ಲೇ ತೆರಳಿದ ಪ್ರಯಾಣಿಕರು!

ಮುಂಬೈನಿಂದ ಹೌರಾಕ್ಕೆ ತೆರಳುತ್ತಿದ್ದ ಗೀತಾಂಜಲಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಕ್ಯಾನ್ಸರ್ ರೋಗಿಯೊಬ್ಬರು ಮೃತಪಟ್ಟಿದ್ದು, ಅವರ ಶವದೊಂದಿಗೇ ಸಹಪ್ರಯಾಣಿಕರು ಸುಮಾರು 12 ಗಂಟೆಗಳ ಕಾಲ ಪ್ರಯಾಣ ಮಾಡಬೇಕಾಗಿ ಬಂದ ಆಘಾತಕಾರಿ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ವಿನೋದ್ ಅವರು ಮುಂಬೈನ ಪ್ರಸಿದ್ಧ ಟಾಟಾ ಮೆಮೋರಿಯಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಗಿಸಿಕೊಂಡು ತಮ್ಮ ಕುಟುಂಬಸ್ಥರೊಂದಿಗೆ ವಾಪಸ್‌ ತೆರಳುತ್ತಿದ್ದರು.

ರೈಲಿನಲ್ಲಿ 12 ಗಂಟೆಗಳ ಕಾಲ ಶವದ ಪಕ್ಕದಲ್ಲೇ ತೆರಳಿದ ಪ್ರಯಾಣಿಕರು!

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Oct 25, 2026 4:52 PM

ಮುಂಬೈ: ಹೌರಾಕ್ಕೆ ತೆರಳುತ್ತಿದ್ದ ಗೀತಾಂಜಲಿ ಎಕ್ಸ್‌ಪ್ರೆಸ್ (Gitanjali Express) ರೈಲಿನಲ್ಲಿ ಕ್ಯಾನ್ಸರ್ ರೋಗಿಯೊಬ್ಬರು ಮೃತಪಟ್ಟಿದ್ದು, ಅವರ ಶವದೊಂದಿಗೇ ಸಹಪ್ರಯಾಣಿಕರು ಸುಮಾರು 12 ಗಂಟೆಗಳ ಕಾಲ ಪ್ರಯಾಣ ಮಾಡಬೇಕಾಗಿ ಬಂದ ಆಘಾತಕಾರಿ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ರೈಲ್ವೆ ಇಲಾಖೆಯ ತೀವ್ರ ನಿರ್ಲಕ್ಷ್ಯ ಮತ್ತು (Viral News) ಬೇಜವಾಬ್ದಾರಿತನಕ್ಕೆ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಮೃತರನ್ನು ಪಶ್ಚಿಮ ಬಂಗಾಳದ ಭಾಟ್‌ಪಾರಾ ನಿವಾಸಿ ವಿನೋದ್ ಪಾಸ್ವಾನ್ (45) ಎಂದು ಗುರುತಿಸಲಾಗಿದೆ.

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ವಿನೋದ್ ಅವರು ಮುಂಬೈನ ಪ್ರಸಿದ್ಧ ಟಾಟಾ ಮೆಮೋರಿಯಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಗಿಸಿಕೊಂಡು ತಮ್ಮ ಕುಟುಂಬಸ್ಥರೊಂದಿಗೆ ವಾಪಸ್‌ ತೆರಳುತ್ತಿದ್ದರು. ಆದರೆ, ದುರದೃಷ್ಟವಶಾತ್ ಶನಿವಾರ ಮುಂಜಾನೆ 8 ಗಂಟೆಯ ಸುಮಾರಿಗೆ ರೈಲಿನ ಎಂ-2 (M-2) ಕೋಚ್‌ನಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ವಿನೋದ್ ಪಾಸ್ವಾನ್ ಅವರು ಮೃತಪಡುತ್ತಿದ್ದಂತೆಯೇ ಅವರ ಕುಟುಂಬಸ್ಥರು ಹಾಗೂ ಸಹಪ್ರಯಾಣಿಕರು ತಕ್ಷಣವೇ ರೈಲಿನಲ್ಲಿದ್ದ ಟಿಟಿಇ (TTE) ಹಾಗೂ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ಆದರೆ, "ಮುಂದಿನ ನಿಲ್ದಾಣದಲ್ಲಿ ವೈದ್ಯರು ಬಂದು ತಪಾಸಣೆ ನಡೆಸಿ ಸಾವನ್ನು ದೃಢೀಕರಿಸುವವರೆಗೆ ಶವವನ್ನು ಮುಟ್ಟಲು ಸಾಧ್ಯವಿಲ್ಲ" ಎಂದು ಅಧಿಕಾರಿಗಳು ಹಾರಿಕೆ ಉತ್ತರ ನೀಡಿದ್ದಾರೆ ಎನ್ನಲಾಗಿದೆ. ರೈಲು ಹಲವು ಪ್ರಮುಖ ನಿಲ್ದಾಣಗಳನ್ನು ಹಾದುಹೋದರೂ ಅಧಿಕಾರಿಗಳು ಮೃತದೇಹವನ್ನು ಕೆಳಗಿಳಿಸಲು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಕೋಚ್‌ನಲ್ಲಿದ್ದ ಪ್ರಯಾಣಿಕರು ಶವದ ನಡುವೆಯೇ ಪ್ರಯಾಣಿಸಿದ್ದಾರೆ.

ಡಿಸೆಂಬರ್ ನಂತರ ಸಾವು-ನೋವು ಇನ್ನೂ ಜಾಸ್ತಿ ಆಗುತ್ತೆ: ಕೋಡಿಮಠ ಶ್ರೀ ಶಾಕಿಂಗ್ ಭವಿಷ್ಯ

ಅಧಿಕಾರಿಗಳಿಂದ ಯಾವುದೇ ಸ್ಪಂದನೆ ಸಿಗದಿದ್ದಾಗ ಬೇಸತ್ತ ಪ್ರಯಾಣಿಕರೊಬ್ಬರು ಸಂಜೆ 7 ಗಂಟೆಯ ಸುಮಾರಿಗೆ ಎಕ್ಸ್‌ನಲ್ಲಿ ರೈಲ್ವೆ ಸಚಿವರು ಮತ್ತು 'ರೈಲ್ ಮದದ್' ಸಹಾಯವಾಣಿಯನ್ನು ಟ್ಯಾಗ್ ಮಾಡಿ ಕೋಚ್‌ನ ಪರಿಸ್ಥಿತಿಯನ್ನು ವಿವರಿಸಿ ದೂರು ದಾಖಲಿಸಿದರು. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ರೈಲ್ವೆ ಆಡಳಿತ ಮಂಡಳಿ ತಕ್ಷಣವೇ ಕಾರ್ಯಪ್ರವೃತ್ತವಾಯಿತು. ರಾತ್ರಿ 8:26 ರ ಸುಮಾರಿಗೆ ರೈಲು ಜಾರ್ಖಂಡ್‌ನ ಜಂಶೆಡ್‌ಪುರದ ಟಾಟಾನಗರ ರೈಲ್ವೆ ನಿಲ್ದಾಣವನ್ನು ತಲುಪಿದಾಗ, ಜಿಆರ್‌ಪಿ (GRP) ಮತ್ತು ರೈಲ್ವೆ ವೈದ್ಯಕೀಯ ತಂಡವು ಮೃತದೇಹವನ್ನು ಕೋಚ್‌ನಿಂದ ಕೆಳಗಿಳಿಸಿ ಮುಂದಿನ ಪ್ರಕ್ರಿಯೆಗಳಿಗೆ ಒಳಪಡಿಸಿತು.