ಅಂಗಡಿಯಾತನ ಎದೆಗೆ ತಲೆಯಿಟ್ಟು ಅಪ್ಪಿಕೊಂಡ ಲಂಗೂರ್ ಕೋತಿ: ಒಡಿಶಾದಲ್ಲಿ ಸೆರೆಯಾಯ್ತು ಅಪರೂಪದ ದೃಶ್ಯ
Viral Video: ರಿಪೇರಿ ಅಂಗಡಿಯೊಂದರಲ್ಲಿ ನಡೆದ ಅಪರೂಪದ ಹಾಗೂ ಹೃದಯಸ್ಪರ್ಶಿ ಘಟನೆಯ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಲಂಗೂರ್ ಕೋತಿಯೊಂದು ಶಾಂತವಾಗಿ ಅಂಗಡಿಯೊಳಗೆ ಬಂದು ಅಲ್ಲಿದ್ದ ವ್ಯಕ್ತಿಯ ಎದೆಗೆ ಹಲವು ಸೆಕೆಂಡುಗಳ ಕಾಲ ಪ್ರೀತಿಯಿಂದ ಒರಗಿ ಅಪ್ಪಿಕೊಂಡಿರುವ ವಿಡಿಯೊವೊಂದು ವೈರಲ್ ಆಗಿದೆ.
ಒಡಿಶಾದಲ್ಲಿ ಅಂಗಡಿಯಾತನ ಎದೆಗೆ ತಲೆಯಿಟ್ಟು ಅಪ್ಪಿಕೊಂಡ ಲಂಗೂರ್ ಕೋತಿ -
ಭುವನೇಶ್ವರ, ಅ. 25: ಪ್ರಾಣಿಗಳಿಗೆ ಮನುಷ್ಯನ ಭಾವನೆಗಳು ಅರ್ಥವಾಗುತ್ತವೆ ಎನ್ನುವುದನ್ನು ನೀವು ಕೇಳಿರಬಹುದು. ಇದೀಗ ರಿಪೇರಿ ಅಂಗಡಿಯೊಂದರಲ್ಲಿ ನಡೆದ ಅಪರೂಪದ ಹಾಗೂ ಹೃದಯಸ್ಪರ್ಶಿ ಘಟನೆಯ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗುತ್ತಿದೆ. ಲಂಗೂರ್ ಕೋತಿಯೊಂದು ಶಾಂತವಾಗಿ ಅಂಗಡಿಯೊಳಗೆ ಬಂದು ಅಲ್ಲಿದ್ದ ವ್ಯಕ್ತಿಯ ಎದೆಗೆ ಹಲವು ಸೆಕೆಂಡುಗಳ ಕಾಲ ಪ್ರೀತಿಯಿಂದ ಒರಗಿ ಅಪ್ಪಿಕೊಂಡಿರುವ ವಿಡಿಯೊವೊಂದು ವೈರಲ್ ಆಗಿದೆ.
ಅಂಗಡಿಯಾತ ಯಾವುದೇ ರೀತಿ ಗಾಬರಿ ಮಾಡಿಕೊಳ್ಳದೆ ಕೋತಿಯನ್ನು ತಳ್ಳದೆ ಅತ್ಯಂತ ಶಾಂತವಾಗಿ ಕುಳಿತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಸ್ವಲ್ಪ ಸಮಯದ ನಂತರ ಕೋತಿ ಶಾಂತವಾಗಿ ಅಲ್ಲಿಂದ ಹೊರಟು ಹೋಗಿದೆ. ವೈರಲ್ ವಿಡಿಯೊದಲ್ಲಿ ಲಂಗೂರ್ ಕೋತಿ ಕೆಲವು ಸೆಕೆಂಡುಗಳ ಕಾಲ ಅವನ ಹತ್ತಿರದಲ್ಲಿಯೇ ಇರುವಾಗ ಅಂಗಡಿಯಾತ ಶಾಂತವಾಗಿ ಇರುವುದನ್ನು ಕಾಣಬಹುದು. ಆತ ಲಂಗೂರ್ ಅನ್ನು ದೂರ ತಳ್ಳಲು ಪ್ರಯತ್ನಿಸುವುದಿಲ್ಲ ಎನ್ನುವುದು ವಿಶೇಷ.
ವಿಡಿಯೊ ನೋಡಿ:
We all need a hug sometimes.. 😊 https://t.co/9MS9gdOWCx
— Buitengebieden (@buitengebieden) October 24, 2026
ಈ ವಿಡಿಯೊ ನೋಡಿದ ನೆಟ್ಟಿಗರು ನಾನಾ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬರು, ʼʼನಾನಾಗಿದ್ದರೆ ಆ ಮುದ್ದಾದ ಪ್ರಾಣಿಯನ್ನು ಪ್ರೀತಿಯಿಂದ ಅಪ್ಪಿಕೊಳ್ಳುತ್ತಿದ್ದೆʼʼ ಎಂದು ತಮ್ಮ ಭಾವನೆ ಹಂಚಿಕೊಂಡಿದ್ದಾರೆ.
ರೈಲು ಹಳಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ದೇಹವನ್ನೇ ರಕ್ಷಾ ಕವಚವಾಗಿಸಿದ ತಾಯಿ!
ಅಂಗಡಿಯೊಳಗೆ ಶಾಂತವಾಗಿ ಬಂದಿದ್ದ ಕೋತಿ ಅಂಗಡಿಯಾತನ ಬಳಿ ತೆರಳಿ ಆತನ ಎದೆಗೆ ತನ್ನ ತಲೆಯಿಟ್ಟು ಕೆಲವು ಸೆಕೆಂಡುಗಳ ಕಾಲ ಒರಗಿ ಕೂತಿದೆ. ಇದೇ ಸಂದರ್ಭದಲ್ಲಿ ಅಂಗಡಿಯಲ್ಲಿದ್ದ ಹಳದಿ ಶರ್ಟ್ ಧರಿಸಿದ ಮತ್ತೊಬ್ಬ ವ್ಯಕ್ತಿ ಕೋತಿಯನ್ನು ಕಂಡು ಭಯದಿಂದ ತಕ್ಷಣವೇ ದೂರ ಸರಿದಿದ್ದಾನೆ. ಕೋತಿ ಹತ್ತಿರ ಬಂದಾಗ ಗಾಬರಿಯಾಗದೆ ಶಾಂತವಾಗಿದ್ದ ಅಂಗಡಿಯಾತನ ನಡೆಯನ್ನು ಪ್ರಾಣಿಪ್ರಿಯರು ಶ್ಲಾಘಿಸಿದ್ದಾರೆ.