Viral Video: ಐಸ್‌ಕ್ರೀಂ, ರೋಟಿ ಬಳಿಕ ಸಲಾಡ್‍ನಲ್ಲಿ ಸತ್ತ ಹುಳ ಪತ್ತೆ; ಐಎಎಸ್ ಅಧಿಕಾರಿ ಫುಲ್ ಗರಂ
ಐಎಎಸ್ ಅಧಿಕಾರಿ ದಂಪತಿ ಶೆಫ್ ಸುವೀರ್ ಸರನ್ ಒಡೆತನದ ದಿ ಹೌಸ್ ಆಫ್ ಸೆಲೆಸ್ಟ್‌ನಲ್ಲಿ ತರಕಾರಿ ಸಲಾಡ್ ಅನ್ನು ಆರ್ಡರ್ ಮಾಡಿದ್ದಾರೆ. ಆದರೆ ಆರ್ಡರ್ ಮಾಡಿದ ಸಲಾಡ್‍ನಲ್ಲಿ ಸತ್ತಹುಳು ಪತ್ತೆಯಾಗಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


ಚಂಡೀಗಢ: ಇತ್ತೀಚೆಗೆ ವ್ಯಕ್ತಿಯೊಬ್ಬ ಡಾಬಾದಲ್ಲಿ ಆರ್ಡರ್ ಮಾಡಿದ ತಂದೂರಿ ರೋಟಿಯಲ್ಲಿ ಸತ್ತ ಹಲ್ಲಿಮರಿಯೊಂದು ಸಿಕ್ಕಿದ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಗುರುಗ್ರಾಮದ ಜನಪ್ರಿಯ ರೆಸ್ಟೋರೆಂಟ್‌ನಲ್ಲಿ ಇಂಥದ್ದೇ ಒಂದು ಘಟನೆ ನಡೆದಿದೆ. ಐಎಎಸ್ ಅಧಿಕಾರಿ ದಂಪತಿ ಶೆಫ್ ಸುವೀರ್ ಸರನ್ (Suvir Saran) ಒಡೆತನದ ದಿ ಹೌಸ್ ಆಫ್ ಸೆಲೆಸ್ಟ್‌ನಲ್ಲಿ ತರಕಾರಿ ಸಲಾಡ್ ಅನ್ನು ಆರ್ಡರ್ ಮಾಡಿದ್ದಾರೆ. ಆದರೆ ಅದರಲ್ಲಿ ಸತ್ತ ಹುಳ (caterpillar) ಕಂಡುಬಂದಿದೆ. ಅದನ್ನು ಅವರು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದು ಈಗ ವೈರಲ್(Viral Video) ಆಗಿದೆ.
ವೈರಲ್ ಆದ ವಿಡಿಯೊದಲ್ಲಿ ರೆಸ್ಟೋರೆಂಟ್‍ನ ಸಿಬ್ಬಂದಿ ಸಲಾಡ್‌ನಿಂದ ಹುಳವನ್ನು ಹೊರತೆಗೆಯುವುದು ಸೆರೆಯಾಗಿದೆ. ಈ ರೀತಿಯ ಆಹಾರ ನೀಡಿದ್ದಕ್ಕಾಗಿ ದಂಪತಿ ಆಡಳಿತ ಮಂಡಳಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವರದಿಗಳ ಪ್ರಕಾರ, ಆಹಾರ ಅಧಿಕಾರಿಗಳು ಈಗಾಗಲೇ ರೆಸ್ಟೋರೆಂಟ್ ಅನ್ನು ಪರಿಶೀಲಿಸಿದ್ದಾರೆ. ಅವರು ಆಹಾರದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಸರ್ಕಾರ ಅನುಮೋದಿತ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ವಿಡಿಯೊ ನೋಡಿ...
ಈ ಸುದ್ದಿಯನ್ನೂ ಓದಿ:Viral Video: ಅಡುಗೆ ಮಾಡುತ್ತಲೇ ಬಾಲಿವುಡ್ ಹಾಡಿಗೆ ವಿದೇಶಿ ಪತಿಯೊಂದಿಗೆ ಸಖತ್ ಸ್ಟೆಪ್ಸ್ ಹಾಕಿದ ಪತ್ನಿ; ವಿಡಿಯೊ ಇಲ್ಲಿದೆ ನೋಡಿ...
ದಿ ಹೌಸ್ ಆಫ್ ಸೆಲೆಸ್ಟ್‌ನ ವ್ಯವಸ್ಥಾಪಕರು, ಅಧಿಕಾರಿಗಳು ರೆಸ್ಟೋರೆಂಟ್‌ಗೆ ಭೇಟಿ ನೀಡಿ ಅಡುಗೆಮನೆಯಿಂದ ಆಹಾರದ ಮಾದರಿಗಳನ್ನು ತೆಗೆದುಕೊಂಡಿರುವುದನ್ನು ದೃಢಪಡಿಸಿದ್ದಾರೆ. ಆದರೆ ಇದು ಕೇವಲ ನಿಯಮಿತ ಪರಿಶೀಲನೆಯಾಗಿದ್ದು, ಘಟನೆಗೆ ಇದು ಸಂಬಂಧಿಸಿಲ್ಲ ಎಂದು ಅವರು ಹೇಳಿದ್ದಾರೆ. ರೆಸ್ಟೋರೆಂಟ್ ಮಾಲೀಕ ಸುವೀರ್ ಸರನ್ ಈ ಪ್ರಕರಣದ ಬಗ್ಗೆ ಏನು ಕೂಡ ಮಾತನಾಡಲಿಲ್ಲ.