ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಅಡುಗೆ ಮಾಡುತ್ತಲೇ ಬಾಲಿವುಡ್‌ ಹಾಡಿಗೆ ವಿದೇಶಿ ಪತಿಯೊಂದಿಗೆ ಸಖತ್‌ ಸ್ಟೆಪ್ಸ್‌ ಹಾಕಿದ ಪತ್ನಿ; ವಿಡಿಯೊ ಇಲ್ಲಿದೆ ನೋಡಿ...

ರೆಟ್ರೊ ಬಾಲಿವುಡ್ ಕ್ಲಾಸಿಕ್ 'ಅಖಾ ಇಂಡಿಯಾ ಜನತಾ ಹೈ' ಹಾಡಿಗೆ ಮಹಿಳೆಯೊಬ್ಬಳು ತನ್ನ ವಿದೇಶಿ ಪತಿಯೊಂದಿಗೆ ಸಖತ್‌ ಆಗಿ ಹೆಜ್ಜೆ ಹಾಕಿದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಇಲ್ಲಿ ಮಹಿಳೆ ಅಡುಗೆ ಮಾಡುವುದನ್ನು ಬಿಟ್ಟು ಪತಿಯೊಂದಿಗೆ ಕುಣಿದಿದ್ದಾಳೆ. ದಂಪತಿಯ ಕೆಮಿಸ್ಟ್ರಿ ಕಂಡು ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

ವಿದೇಶಿ ಪತಿಯೊಂದಿಗೆ ಸೇರಿ ಈ ಮಹಿಳೆ ಕಿಚನ್‌ನಲ್ಲಿ ಮಾಡಿದ್ದೇನು ನೋಡಿ!

Profile pavithra Jun 9, 2025 9:06 PM

ಮುಂಬೈ: ಕುಮಾರ್ ಸಾನು ಅವರ ರೆಟ್ರೊ ಬಾಲಿವುಡ್ ಕ್ಲಾಸಿಕ್ 'ಅಖಾ ಇಂಡಿಯಾ ಜನತಾ ಹೈ' ಹಾಡಿಗೆ ಮಹಿಳೆಯೊಬ್ಬಳು ತನ್ನ ವಿದೇಶಿ ಪತಿಯೊಂದಿಗೆ ನೃತ್ಯ(Dance) ಮಾಡುತ್ತಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಪೋಸ್ಟ್ ಮಾಡಿದ ಈ ವಿಡಿಯೊ ಈಗಾಗಲೇ, ಎರಡು ಲಕ್ಷಕ್ಕೂ ಹೆಚ್ಚು ವ್ಯೂವ್ಸ್‌ ಮತ್ತು ಸಾವಿರಾರು ಲೈಕ್‌ಗಳನ್ನು ಗಳಿಸಿದೆ. ಮತ್ತು ದಂಪತಿಯ ಕೆಮಿಸ್ಟ್ರಿ ಕಂಡು ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

ವೈರಲ್ ಆದ ವಿಡಿಯೊದಲ್ಲಿ ಅಡುಗೆಮನೆಯಲ್ಲಿ ಮಹಿಳೆಯೊಬ್ಬಳು ಒಲೆಯ ಮೇಲೆ ಪ್ರೆಶರ್ ಕುಕ್ಕರ್ ಇಟ್ಟು ಅಡುಗೆಗೆ ತಯಾರಿ ಮಾಡುವಾಗ ಆಕೆಯ ಪತಿ ಬಂದು ಆಕೆಯ ಬಳಿ ಡ್ಯಾನ್ಸ್‌ ಮಾಡುವಂತೆ ಕೇಳಿದ್ದಾನೆ. ತಕ್ಷಣ ಆಕೆ ಅಡುಗೆ ಮಾಡುವುದನ್ನು ಬಿಟ್ಟು ಪತಿಯೊಂದಿಗೆ ಸಖತ್‌ ಆಗಿ ಹೆಜ್ಜೆ ಹಾಕಿದ್ದಾಳೆ.

ವಿಡಿಯೊ ಇಲ್ಲಿದೆ ನೋಡಿ...

ಅಲ್ಲದೆ, ಜನಪ್ರಿಯ ಟ್ರ್ಯಾಕ್‌ನ "ಫಸ್ಟ್ ಟೈಮ್ ದೇಖಾ ತುಮ್ಹೇ ಹಮ್ ಖೋ ಗಯಾ" ಎಂಬ ಐಕಾನಿಕ್ ಲೈನ್ಸ್‌ಗೆ ಗಂಡ-ಹೆಂಡತಿ ಇಬ್ಬರೂ ಸಖತ್‌ ಆಗಿ ಲಿಪ್ ಸಿಂಕ್ ಮಾಡಿದ್ದು ನೆಟ್ಟಿಗರ ಹೃದಯಗಳನ್ನು ಗೆದ್ದಿದೆ. ನಂತರ ದಂಪತಿ ಒಟ್ಟಿಗೆ ಸೇರಿ, ಹೆಜ್ಜೆ ಹಾಕಿದ್ದಾರೆ.ಈ ಮಹಿಳೆ ಸೋಶಿಯಲ್ ಮೀಡಿಯಾ ಪೇಜ್‍ 60.2 ಫಾಲೋವರ್ಸ್ ಅನ್ನು ಹೊಂದಿದ್ದು, ಈಕೆ ಆಗಾಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನೃತ್ಯ ರೀಲ್‌ಗಳನ್ನು ಪೋಸ್ಟ್ ಮಾಡುತ್ತಿರುತ್ತಾಳೆ.

ಈ ಸುದ್ದಿಯನ್ನೂ ಓದಿ:Viral Video: ಕೋಳ ಹಾಕಿ ನೆಲಕ್ಕೆ ಬೀಳಿಸಿ ಚಿತ್ರಹಿಂಸೆ; ಅಮೆರಿಕ ವಿಮಾನ ನಿಲ್ದಾಣದಲ್ಲಿ ಭಾರತೀಯ ವಿದ್ಯಾರ್ಥಿಯ ಗೋಳು

ಈ ಹಿಂದೆ ಆಸ್ಟ್ರೇಲಿಯಾದ ಮಹಿಳೆಯೊಬ್ಬಳು ತನ್ನ ಭಾರತೀಯ ಪತಿ ಜೊತೆ ಸೇರಿಕೊಂಡು ಹರಿಯಾಣವಿ ಹಾಡಿಗೆ ನೃತ್ಯ ಮಾಡಿದ್ದಳು. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಡಿಯೊ 1.4 ಮಿಲಿಯನ್ ವ್ಯೂವ್ಸ್‌ ಮತ್ತು 90,000 ಲೈಕ್‌ಗಳು ಮತ್ತು ಹಲವಾರು ಕಾಮೆಂಟ್‌ಗಳು ಸಹ ಪಡೆದಿದೆ.ನೆಟ್ಟಿಗರು ಇವರ ನೃತ್ಯ ನೋಡಿ ಸಖತ್‌ ಥ್ರಿಲ್‌ ಆಗಿದ್ದರು.