ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

BBK 13: ʻಬಿಗ್ ಬಾಸ್ʼ ಮನೆಗೆ ಮತ್ತೆ ಕಾಲಿಟ್ಟ ‘ಪಟಾಕಿ’ ರಕ್ಷಿತಾ ಶೆಟ್ಟಿ; ಇವ್ರು ಅತಿಥಿಯೋ? ವೈಲ್ಡ್ ಕಾರ್ಡ್ ಸ್ಪರ್ಧಿಯೋ?

Rakshita Shetty: ಬಿಗ್‌ ಬಾಸ್‌ ಕನ್ನಡ ಸೀಸನ್ 12ರಲ್ಲಿ ಅದ್ಭುತ ಕಮ್‌ಬ್ಯಾಕ್ ಮಾಡಿ ರನ್ನರ್ ಅಪ್ ಆಗಿದ್ದ ಚಿನಕುರಳಿ ಸ್ಪರ್ಧಿ ರಕ್ಷಿತಾ ಶೆಟ್ಟಿ, ಈಗ ಬಿಗ್‌ ಬಾಸ್‌ 13ರ ಮನೆಗೆ ಕಾಲಿಟ್ಟು ಸಂಚಲನ ಸೃಷ್ಟಿಸಿದ್ದಾರೆ. ಈಗ ಮತ್ತೆ ಪ್ರತ್ಯಕ್ಷವಾಗಿ ಎಲ್ಲರನ್ನೂ ಬೆಚ್ಚಿಬೀಳಿಸಿದ್ದಾರೆ.

ʻಬಿಗ್ ಬಾಸ್ʼ ಮನೆಗೆ ಮತ್ತೆ ಕಾಲಿಟ್ಟು ಸದ್ದು ಮಾಡಿದ ರಕ್ಷಿತಾ ಶೆಟ್ಟಿ!

-

Avinash GR
Avinash GR Oct 28, 2026 12:36 PM

‘ಬಿಗ್ ಬಾಸ್’ ರಿಯಾಲಿಟಿ ಶೋನಲ್ಲಿ ದಿನದಿಂದ ದಿನಕ್ಕೆ ಆಟದ ರಂಗು ಕಳೆಗಟ್ಟುತ್ತಿದ್ದು, ಅನಿರೀಕ್ಷಿತ ತಿರುವುಗಳು ವೀಕ್ಷಕರ ಕುತೂಹಲವನ್ನು ಹೆಚ್ಚಿಸುತ್ತಿವೆ. ಇದೀಗ ಮನೆಯೊಳಗೆ ನಡೆದಿರುವ ಒಂದು ಅನಿರೀಕ್ಷಿತ ಎಂಟ್ರಿ ಎಲ್ಲರ ಲೆಕ್ಕಾಚಾರಗಳನ್ನು ಉಲ್ಟಾಪಲ್ಟಾ ಮಾಡಿದೆ. ಕಳೆದ ಸೀಸನ್ 12ರಲ್ಲಿ ತಮ್ಮ ನೇರ ನಡೆ, ಚುರುಕಾದ ಆಟ ಹಾಗೂ ಭರ್ಜರಿ ಮನರಂಜನೆಯಿಂದ ಕರುನಾಡಿನ ಮನೆ-ಮನ ಗೆದ್ದು ರನ್ನರ್ ಅಪ್ ಪಟ್ಟ ಅಲಂಕರಿಸಿದ್ದ ಚಿನಕುರಳಿಯಂತಹ ರಕ್ಷಿತಾ ಶೆಟ್ಟಿ, ದಿಢೀರನೇ ಬಿಗ್‌ ಬಾಸ್‌ ಕನ್ನಡ ಸೀಸನ್ 13ರಲ್ಲಿ ಪ್ರತ್ಯಕ್ಷವಾಗಿ, ಹೊಸ ಸಂಚಲನ ಮೂಡಿಸಿದ್ದಾರೆ.

ಸೀಸನ್‌ 12ರಲ್ಲಿ ಹವಾ ಎಬ್ಬಿಸಿದ್ದ ರಕ್ಷಿತಾ

ಕಳೆದ ಸೀಸನ್‌ನಲ್ಲಿ ಮೊದಲ ದಿನವೇ ಎಲ್ಲರಿಂದ ನಾಮಿನೇಟ್ ಆಗಿ, ಎಲಿಮಿನೇಟ್‌ ಆಗಿದ್ದರು. ಆನಂತರ ಒಂದು ವಾರದ ನಂತರ ಮರಳಿದ ಅವರು, ಅದ್ಭುತ ಕಮ್‌ಬ್ಯಾಕ್ ಮಾಡಿ ಫಿನಾಲೆವರೆಗೂ ಸೆಣಸಾಡಿದ್ದರು. ಗಿಲ್ಲಿ ನಟ ವಿನ್ನರ್‌ ಆದರೆ, ರಕ್ಷಿತಾ ರನ್ನರ್‌ ಅಪ್‌ ಆಗಿದ್ದರು.

BBK 13: ಅಗ್ನಿಪರೀಕ್ಷೆಯಲ್ಲಿ ಗೆದ್ದು ದೊಡ್ಮನೆಯೊಳಗೆ ಎಂಟ್ರಿ ಕೊಡೋದು ಯಾರು? 'ಬಿಗ್‌ ಬಾಸ್‌ ಕನ್ನಡ‌' ಟೀಮ್‌ನಿಂದ ಬಿಗ್‌ ಅಪ್ಡೇಟ್‌!

ಅಂಥ ಪ್ರಬಲ ಆಟಗಾರ್ತಿ ಇದೀಗ ಮತ್ತೆ ಬಿಗ್ ಬಾಸ್ ಮನೆಯ ಮುಖ್ಯ ದ್ವಾರದಿಂದ ಒಳಬರುತ್ತಿದ್ದಂತೆ ಸ್ಪರ್ಧಿಗಳಲ್ಲಿ ಆಶ್ಚರ್ಯ ಮತ್ತು ಆತಂಕ ಎರಡೂ ಒಟ್ಟೊಟ್ಟಿಗೇ ಮನೆಮಾಡಿದೆ. ಪ್ರಶಾಂತ್ ಹಾಗೂ ಸೌಂದರ್ಯ ಸೇರಿದಂತೆ ಸಹ-ಸ್ಪರ್ಧಿಗಳು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಆದರೂ ರಕ್ಷಿತಾ ಆಗಮನದ ಹಿಂದಿನ ಅಸಲಿ ಉದ್ದೇಶವೇನು ಎಂಬ ಕುತೂಹಲ ಎಲ್ಲರ ಎದೆಯಲ್ಲಿ ನಡುಕ ಹುಟ್ಟಿಸಿದೆ.

ರಕ್ಷಿತಾ ವೈಲ್ಡ್‌ ಕಾರ್ಡ್‌ ಸ್ಪರ್ಧಿಯೇ?

ಪ್ರಸ್ತುತ ಮನೆಯಲ್ಲಿ ನಡೆಯುತ್ತಿರುವ ಮದುವೆ ಟಾಸ್ಕ್‌ಗೆ ರಕ್ಷಿತಾ ಶೆಟ್ಟಿ ಕೇವಲ ಅತಿಥಿಯಾಗಿ ಆಗಮಿಸಿದ್ದಾರೆಯೇ ಅಥವಾ ಉಳಿದ ಸ್ಪರ್ಧಿಗಳಿಗೆ ನಡುಕ ಹುಟ್ಟಿಸಲು ವೈಲ್ಡ್ ಕಾರ್ಡ್ ರೂಪದಲ್ಲಿ ಶಾಶ್ವತ ಎಂಟ್ರಿ ಕೊಟ್ಟಿದ್ದಾರೆಯೇ ಎನ್ನುವ ಗುಟ್ಟನ್ನು ಬಿಗ್ ಬಾಸ್ ಇನ್ನೂ ಬಿಟ್ಟುಕೊಟ್ಟಿಲ್ಲ.

ಸೌಂದರ್ಯ ಮದುವೆ ಟಾಸ್ಕ್‌ಗಾಗಿ ಪ್ರಶಾಂತ್‌ ಅವರನ್ನು ಪ್ರಶಾಂತಿ ಮಾಡಲಾಗಿದ್ದು, ಅವರ ಮಗಳು ಎಂಬಂತೆ ರಕ್ಷಿತಾ ಅವರನ್ನು ಪರಿಚಯ ಮಾಡಿಕೊಡಲಾಗಿದೆ. ಒಂದು ವೇಳೆ ರಕ್ಷಿತಾ ಪೂರ್ಣ ಪ್ರಮಾಣದ ಸ್ಪರ್ಧಿಯಾಗಿ ಉಳಿದುಕೊಂಡರೆ, ಮನೆಯ ಲೆಕ್ಕಾಚಾರಗಳು ಸಂಪೂರ್ಣವಾಗಿ ಉಲ್ಟಾಪಲ್ಟಾ ಆಗೋದರಲ್ಲಿ ಅನುಮಾನವೇ ಇಲ್ಲ.