Viral News: ಹಾಸಿಗೆಯಲ್ಲಿ ಮಲಗಿ ಒಂದೇ ದಿನದಲ್ಲಿ 35 ಲಕ್ಷ ರೂ. ಸಂಪಾದಿಸಿದ ಚೀನಾದ ಮಹಿಳೆ!
ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಸುದ್ಧಿಯಾಗುವ ಚೀನಾದ ಗು ಕ್ಸಿಕ್ಸಿ ಹಾಸಿಗೆಯಲ್ಲಿ ಮಲಗುವ ಮೂಲಕ ಕೇವಲ ಒಂದು ದಿನದಲ್ಲಿ 3.03 ಲಕ್ಷ ಯುವಾನ್ (ಸುಮಾರು 35 ಲಕ್ಷ ರೂ.) ಗಳಿಸಿದ್ದಾಳೆ. ಈ ವಿಚಾರ ಸದ್ಯ ಎಂದು ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

china viral news

ಬೀಜಿಂಗ್: ಚೀನಾದ ಪ್ರಭಾವಶಾಲಿ ಮಹಿಳೆ ಗು ಕ್ಸಿಕ್ಸಿ ಹಾಸಿಗೆಯಲ್ಲಿ ಮಲಗುವ ಮೂಲಕ ಕೇವಲ ಒಂದು ದಿನದಲ್ಲಿ 3.03 ಲಕ್ಷ ಯುವಾನ್ (ಸುಮಾರು 35 ಲಕ್ಷ ರೂ.) ಗಳಿಸಿದ್ದಾಳೆ ಎಂಬ ವಿಚಾರ ಸದ್ಯ ಭಾರೀ ಸದ್ದು ಮಾಡುತ್ತಿದೆ. ಆಕೆ ಈ ವಿಚಾರವನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡ ನಂತರ ಸಿಕ್ಕಾಪಟ್ಟೆ ವೈರಲ್ (Viral News) ಆಗಿದೆ. ಫೆ. 8 ಮತ್ತು 16ರ ನಡುವೆ ಕ್ಸಿಕ್ಸಿ ತನ್ನ ಡೌಯಿನ್ ಶಾಪ್ ಮೂಲಕ ಒಂದೇ ಪ್ಲಾಟ್‍ಫಾರ್ಮ್‍ನಲ್ಲಿ ಸುಮಾರು 27.9 ಲಕ್ಷ ಯುವಾನ್ (ಸುಮಾರು 3 ಕೋಟಿ ರೂ.) ಕಮಿಷನ್ ಸೇರಿದಂತೆ ಒಟ್ಟು 1.039 ಕೋಟಿ ಯುವಾನ್ (ಸುಮಾರು 12 ಕೋಟಿ ರೂ.) ಗಳಿಸಿದ್ದಾಳೆ. ಮತ್ತೊಂದು ಪ್ಲಾಟ್‌ಫಾರ್ಮ್‌ನಲ್ಲಿ ಆಕೆಯ ಒಂದು ವಾರದ ಸಂಪಾದನೆ 89.4 ಲಕ್ಷ ಯುವಾನ್ ತಲುಪಿದೆ. ಇತ್ತೀಚಿನ ಲೈವ್ ಸ್ಟ್ರೀಮ್‍ನಲ್ಲಿ, ಕ್ಸಿಕ್ಸಿ ಈ ಹಣವನ್ನು ಕಷ್ಟಪಟ್ಟು ಸಂಪಾದಿಸಿದ್ದಾಗಿ ತಿಳಿಸಿದ್ದಾಳೆ. ಹೆಚ್ಚು ಜನರು ಅವಳನ್ನು ಟೀಕಿಸಿದಷ್ಟೂ ಹೆಚ್ಚು ಹಣವನ್ನು ಸಿಗುತ್ತದೆ ಎಂದು ಹೇಳಿದ್ದಾಳೆ.
ಮತ್ತೆ ಈ ಬಗ್ಗೆ ವಿವರಿಸಿದ ಗು ಕ್ಸಿಕ್ಸಿ, ನಾನು ಕದಿಯಲಿಲ್ಲ, ಲೂಟಿ ಮಾಡಿಲ್ಲ. ನಾನು ಗಳಿಸುವ ಎಲ್ಲ ಹಣವು ಕಷ್ಟಪಟ್ಟು ಸಂಪಾದಿಸಿದ್ದು ಎಂದು ಹೇಳಿದ್ದಾಳೆ. ಜಿಯಾಂಗ್ಸು ಪ್ರಾಂತ್ಯದ ನಾಂಟಾಂಗ್‍ನಲ್ಲಿ 1998ರಲ್ಲಿ ಜನಿಸಿದ ಗು ಕ್ಸಿಕ್ಸಿ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಸುದ್ದಿಯಲ್ಲಿರುತ್ತಾಳೆ. ಈಕೆಯ ಖಾತೆಯನ್ನು ಹಲವಾರು ಸಂದರ್ಭಗಳಲ್ಲಿ ಬ್ಲಾಕ್ ಮಾಡಲಾಗಿತ್ತು.
ಈ ಸುದ್ದಿಯನ್ನೂ ಓದಿ:Viral News: ಹೆಣ್ಣಿಲ್ಲದೇ ಕೇವಲ ಗಂಡಿನ ಮೂಲಕ ಸಂತಾನೋತ್ಪತ್ತಿ: ಚೀನಾ ವಿಜ್ಞಾನಿಗಳಿಂದ ಸಂಶೋಧನೆ!
ವಿಜ್ಞಾನ ಲೋಕವು ನಮ್ಮನ್ನು ಆಗಾಗ್ಗೆ ಅಚ್ಚರಿಗೆ ದೂಡುತ್ತದೆ. ಕೆಲವು ವಿಜ್ಞಾನಿಗಳ ಸಂಶೋಧನೆಗಳಂತೂ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಇರುತ್ತವೆ. ಸಂತಾನೋತ್ಪತ್ತಿಗೆ ಹೆಣ್ಣು ಅಗತ್ಯ ಮತ್ತು ಅನಿವಾರ್ಯ ಎಂಬುದು ಎಲ್ಲರಿಗೂ ಗೊತ್ತಿದೆ. ಹೆಣ್ಣು ಸೃಷ್ಟಿಕರ್ತೆ. ಅರ್ಥಾತ್ ಜನ್ಮ ನೀಡುವವಳು. ಹೆಣ್ತನ ಎಂಬುದೇ ಬಹುದೊಡ್ಡ ಶಕ್ತಿ. ಆದರೆ ಚೀನಾ ವಿಜ್ಞಾನಿಗಳ ಹೊಸ ಸಂಶೋಧನೆಯು ಹಲವರನ್ನು ಬೆಚ್ಚಿ ಬೀಳಿಸಿದೆ. ಹೆಣ್ಣಿಲ್ಲದೆ ಕೇವಲ ಗಂಡಿನ ಮೂಲಕ ಸಂತಾನೋತ್ಪತ್ತಿ ನಡೆಸಬಹುದು ಎಂದು ಅವರ ಸಂಶೋಧನೆಯ ವರದಿ ತಿಳಿಸಿದೆ. ವಿಜ್ಞಾನ ಲೋಕದಲ್ಲಿ ಇದೊಂದು ವಿಸ್ಮಯದ ಸಂಶೋಧನೆಯಾಗಿದ್ದು, ನೆಟ್ಟಿಗರು ಬೆರಗಾಗಿದ್ದಾರೆ.
ಚೀನಾದ ಈ ಸಂಶೋಧನೆಯಲ್ಲಿ ಹೆಣ್ಣಿನ ಅವಶ್ಯಕತೆ ಇಲ್ಲದೆ ಗಂಡಿನ ಸಹಾಯದಿಂದ ಸಂತಾನೋತ್ಪತ್ತಿ ಮಾಡಬಹುದು. ತಂತ್ರಜ್ಞಾನದ ಮೂಲಕ ಹೆಣ್ಣಿನ ಡಿಎನ್ಎ ಸಹಾಯವಿಲ್ಲದೆ ಕೇವಲ ಎರಡು ಗಂಡು ಇಲಿಗಳ ಡಿಎನ್ಎ ಇಟ್ಟುಕೊಂಡು ಮರಿಯನ್ನು ಸೃಷ್ಟಿಸಲಾಗಿದೆ. ಎರಡು ಗಂಡು ಇಲಿಗಳ ಸಹಾಯದಿಂದ ಸೃಷ್ಟಿಸಿದ ಇಲಿಯು ಪ್ರೌಢಾವಸ್ಥೆಯವರೆಗೂ ಬದುಕುಳಿಯುತ್ತವೆ ಎಂದು ಮೂಲಗಳು ತಿಳಿಸಿವೆ.