Viral Video: ಯುವತಿ ಜತೆ ಬಾತ್‌ರೂಂನಲ್ಲಿ ಲವ್ವಿ- ಡವ್ವಿ; ಅರೆಬೆತ್ತಲೆ ಸ್ಥಿತಿಯಲ್ಲಿ ಸಿಕ್ಕಿಬಿದ್ದ ಪಾದ್ರಿ
Shirtless Church priest: ಬ್ರೆಜಿಲಿಯನ್ ಪಾದ್ರಿಯೊಬ್ಬ ಯುವತಿಯನ್ನು ಬಾತ್‌ರೂಂನಲ್ಲಿ ಬಚ್ಚಿಟ್ಟು ಸಿಕ್ಕಿ ಬಿದ್ದಿದ್ದಾನೆ. ಜನರ ಗುಂಪೊಂದು ಆತನ ನಿವಾಸಕ್ಕೆ ಅಚಾನಕ್ ದಾಳಿ ಮಾಡಿದಾಗ ಪಾದ್ರಿಯು ಶರ್ಟ್ ಧರಿಸದೆ ಇರುವ ಸ್ಥಿತಿಯಲ್ಲಿ ಕಂಡುಬಂದಿದ್ದಾನೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ.

-

ಬ್ರೆಜಿಲಿಯಾ: ಶರ್ಟ್ ಧರಿಸದ ಬ್ರೆಜಿಲಿಯನ್ ಪಾದ್ರಿಯೊಬ್ಬ (Church priest) ಯುವತಿಯೊಬ್ಬಳನ್ನು ಸ್ನಾನಗೃಹದ ಅಡಿಯಲ್ಲಿ ಬಚ್ಚಿಟ್ಟು ಸಿಕ್ಕಿಬಿದ್ದಿದ್ದಾನೆ. ಬ್ರೆಜಿಲ್‌ನಲ್ಲಿ ಈ ಘಟನೆ ನಡೆದಿದೆ. ಪುರುಷರ ಗುಂಪೊಂದು ಅಪರೆಸಿಡಾದ ಅವರ್ ಲೇಡಿ ಚರ್ಚ್‌ಗೆ ನುಗ್ಗಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಆ ಗುಂಪಿನಲ್ಲಿದ್ದ ಒಬ್ಬಾತನ ಭಾವಿ ಪತ್ನಿಯಾಗಿದ್ದ ಆಕೆಯು ಪಾದ್ರಿ ಮನೆಯಲ್ಲಿ ಬಚ್ಚಿಟ್ಟುಕೊಂಡು ಸಿಕ್ಕಿಬಿದ್ದಿದ್ದಾಳೆ. ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.
ಈ ಘಟನೆ ಅಕ್ಟೋಬರ್ 13ರಂದು ಬೊಲಿವಿಯನ್‌ನಿಂದ ಸುಮಾರು 300 ಮೈಲು ದೂರದ ಮ್ಯಾಟೊ ಗ್ರೊಸೊ ರಾಜ್ಯದ ನೋವಾ ಮರಿಂಗಾ ಪಟ್ಟಣದಲ್ಲಿ ನಡೆದಿದೆ. ರೆವರೆಂಡ್ ಲೂಸಿಯಾನೊ ಬ್ರಾಗಾ ಸಿಂಪ್ಲಿಸಿಯೊ ಎಂಬ ಪಾದ್ರಿಯ ನಿವಾಸಕ್ಕೆ ಏಕಾಏಕಿ ವರನ ನೇತೃತ್ವದ ಗುಂಪೊಂದು ನುಗ್ಗಿದೆ. ಸಿಂಪ್ಲಿಸಿಯೊ ನಿವಾಸದಲ್ಲಿ ಸಿಕ್ಕಿಬಿದ್ದ ಯುವತಿಯ ನಿಶ್ಚಿತಾರ್ಥವನ್ನು ಪಟ್ಟಣದಿಂದ ಹೊರಗೆ ಆಯೋಜಿಸಲಾಗಿತ್ತು. ಮುಂಜಾನೆ ಚರ್ಚ್ ಪಕ್ಕದಲ್ಲಿರುವ ತನ್ನ ಮನೆಗೆ ಪಾದ್ರಿಯು ಆ ವಧುವನ್ನು ಕರೆದೊಯ್ದಿದ್ದಾನೆ. ವಿಚಾರ ತಿಳಿದ ವರನ ನೇತೃತ್ವದ ಜನರ ಗುಂಪೊಂದು ಕೋಪಗೊಂಡು ಪಾದ್ರಿಯ ಮನೆಗೆ ನುಗ್ಗಿದೆ. ಈ ವೇಳೆ ಪಾದ್ರಿ ಶರ್ಟ್ ಧರಿಸಿರಲಿಲ್ಲ, ಜಿಮ್ ಶಾರ್ಟ್ಸ್ ಮಾತ್ರ ಧರಿಸಿದ್ದ.
ವಧುವು ಪಾದ್ರಿಯ ನಿವಾಸದಲ್ಲಿದ್ದಾಳೆ ಎಂಬ ಖಚಿತ ಮಾಹಿತಿ ಮೇರೆಗೆ ಈ ಗುಂಪು ದಾಳಿ ನಡೆಸಿದೆ. ಯುವತಿಯನ್ನು ಹುಡುಕಲು ನಿವಾಸವನ್ನೆಲ್ಲಾ ಜಾಲಾಡಲಾಯಿತು. ಕೂಡಲೇ ಸ್ನಾನಗೃಹದ ಬಳಿಗೆ ಹೋದಾಗ ಅಲ್ಲಿ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಬಾಗಿಲನ್ನು ಎಷ್ಟೇ ತಟ್ಟಿದರೂ ಯಾರೂ ತೆರೆಯಲಿಲ್ಲ. ಇದರಿಂದ ಕೋಪಗೊಂಡ ವರನು ಸ್ಟೂಲ್ ಅನ್ನು ಹಿಡಿದು ಬೀಗ ಹಾಕಿದ ಬಾತ್‍ರೂಂಗೆ ನುಗ್ಗಿದ್ದಾನೆ. ನಂತರ ಮುಚ್ಚಿದ ಬಾಗಿಲನ್ನು ಒಡೆದಿದ್ದಾನೆ.
ವಿಡಿಯೊ ವೀಕ್ಷಿಸಿ:
En Brasil, un hombre entró sin avisar a la casa parroquial y encontró a su novia escondida con el padre... pic.twitter.com/Xj1xFNIA3n
— Sonny (@SonnyRespeto2) October 17, 2025
ಕಾಣೆಯಾದ 21 ವರ್ಷದ ನಿಶ್ಚಿತಾರ್ಥದ ವಧುವು ಬಾತ್‌ರೂಂ ಸಿಂಕ್ ಅಡಿಯಲ್ಲಿ ಅಡಗಿಕೊಂಡಿದ್ದಳು. ಟಾಪ್ ಮತ್ತು ಶಾರ್ಟ್ಸ್ ಮಾತ್ರ ಧರಿಸಿ ನೆಲದ ಮೇಲೆ ಬಿದ್ದು ಅಳುತ್ತಿದ್ದಳು. ಈ ವೇಳೆ ಪಾದ್ರಿಯು ವಿಚಿತ್ರ ಕಾರಣವನ್ನು ನೀಡಿದ್ದಾನೆ. ಆಕೆಗೆ ಸ್ನಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದಾಗಿ ತಿಳಿಸಿದ್ದಾನೆ. ಅಲ್ಲದೆ ತಾವಿಬ್ಬರೂ ಯಾವುದೇ ಲೈಂಗಿಕ ಸಂಬಂಧ ಹೊಂದಿಲ್ಲ ಎಂದು ಪಾದ್ರಿ ಹಾಗೂ ಯುವತಿ ತಿಳಿಸಿದ್ದಾರೆ.
ಇದನ್ನೂ ಓದಿ: Viral Video: ವರ್ಚುವಲ್ ವಿಚಾರಣೆ ವೇಳೆ ಮಹಿಳೆಗೆ 'ಚುಂಬಿಸಿದ ಪೋಲಿ ಲಾಯರ್ '- ವೈರಲಾಯ್ತುಈ ವಿಡಿಯೊ
ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೊ ವೈರಲ್ ಆಗಿದ್ದು, ಯುವತಿಯು ಸ್ನಾನಗೃಹ ಹೋಗುವ ಸಮಯಕ್ಕಿಂತ ಹೆಚ್ಚಿನ ಸಮಯ ಅಲ್ಲಿ ಕಳೆದಿದ್ದಾಳೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಡಯಾಸಿಸ್‌ನ ಅಧಿಕಾರಿಗಳು, ಪಾದ್ರಿಯ ವಿರುದ್ಧ ಆಂತರಿಕ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಪಾದ್ರಿ ಸಿಂಪ್ಲಿಸಿಯೊ 1983ರ ಕ್ಯಾನನ್ ಕಾನೂನು ಸಂಹಿತೆಯನ್ನು ಉಲ್ಲಂಘಿಸಿದ್ದಾನೆಯೇ ಎಂಬುದು ತನಿಖೆಯಿಂದ ತಿಳಿದುಬರಲಿದೆ.
ಕ್ಯಾನನ್ ನಿಯಮವು ಲ್ಯಾಟಿನ್ ಚರ್ಚ್‌ನ ಪಾದ್ರಿಗಳು ಲೈಂಗಿಕ ಸಂಬಂಧಗಳಲ್ಲಿ ತೊಡಗುವುದನ್ನು ನಿಷೇಧಿಸುತ್ತದೆ. ಇನ್ನು ಈ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಯುವತಿಯು ಪೊಲೀಸ್ ದೂರು ದಾಖಲಿಸಿದ್ದಾಳೆ.