ವೃದ್ಧೆಗೆ 50 ಸಾವಿರ ರುಪಾಯಿಯ ಡಿಯೋರ್ ಸನ್ ಗ್ಲಾಸ್ ಗಿಫ್ಟ್ ನೀಡಿದ ಸಿಎಂ ವಿಜಯ್; ವಿಡಿಯೊ ವೈರಲ್
Viral Video: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಮೆಟ್ಟೂರುಗೆ ಭೇಟಿ ನೀಡಿ ಕಾವೇರಿ ಡೆಲ್ಟಾ ಭಾಗದ 'ಸಂಬಾ' ಭತ್ತ ಬೇಸಾಯ ಪ್ರದೇಶಕ್ಕೆ ಜಲಾಶಯದಿಂದ ನೀರು ಹರಿಸಿದರು. ಈ ಸಂದರ್ಭದಲ್ಲಿ ಹೆಚ್ಚಿನ ಜನಸಂದಣಿ ಸೇರಿದ್ದರೂ ವೃದ್ಧೆಯೊಬ್ಬರನ್ನು ಗಮನಿಸಿ ತಮ್ಮ ಬೆಲೆಬಾಳುವ 'ಕ್ರಿಶ್ಚಿಯನ್ ಡಿಯೋರ್' ಕೂಲಿಂಗ್ ಗ್ಲಾಸ್ ಉಡುಗೊರೆಯಾಗಿ ನೀಡಿದರು. ಅಲ್ಲದೆ ಅವರೊಂದಿಗೆ ಸ್ವಲ್ಪ ದೂರ ಹೆಜ್ಜೆ ಹಾಕಿದರು.
ವೃದ್ಧೆಗೆ ದುಬಾರಿ ಚಶ್ಮಾ ಉಡುಗೊರೆ ನೀಡಿದ ಸಿಎಂ ವಿಜಯ್ -
ಚೆನ್ನೈ, ಸೆ. 1: ನಟ ದಳಪತಿ ಸಿ. ಜೋಸೆಫ್ ವಿಜಯ್ (CM Vijay) ಅವರಿಗೆ ಅದೆಂಥಾ ಜನಪ್ರಿಯತೆ, ಫ್ಯಾನ್ ಫಾಲೋವಿಂಗ್ ಇದೆ ಅನ್ನೋದು ಎಲ್ಲರಿಗೂ ತಿಳಿದೆ ಇದೆ. ಅದರಲ್ಲೂ ಮೊದಲ ಪ್ರಯತ್ನದಲ್ಲೇ ವಿಜಯ್ (CM Vijay) ತಮಿಳುನಾಡಿನ ಜನರ ಮನಸ್ಸು ಗೆದ್ದು ಸಿಎಂ ಪಟ್ಟಕ್ಕೇರಿದ್ದಾರೆ. ಕೇವಲ ಸಿನಿಮಾ, ರಾಜಕೀಯ ಅಲ್ಲದೇ ಅವರ ಪ್ರೀತಿಯ ನಡೆ, ಸರಳ ವ್ಯಕ್ತಿತ್ವ ಜನರನ್ನು ಸೆಳೆಯುತ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಸೇಲಂ ಜಿಲ್ಲೆಯ ಮೆಟ್ಟೂರಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ವಿಜಯ್ ವೃದ್ಧೆಯೊಬ್ಬರಿಗೆ ತಮ್ಮ ದುಬಾರಿ ಮೊತ್ತದ ಕೂಲಿಂಗ್ ಗ್ಲಾಸ್ ಉಡುಗೊರೆಯಾಗಿ ನೀಡಿ ಹೃದಯ ಗೆದ್ದಿದ್ದಾರೆ. ಇವರ ಈ ಸರಳ ನಡೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ವಿಜಯ್ ಮೆಟ್ಟೂರಿಗೆ ಭೇಟಿ ನೀಡಿ, ಕಾವೇರಿ ಡೆಲ್ಟಾ ಭಾಗದ 'ಸಂಬಾ' ಭತ್ತದ ಬೇಸಾಯ ಪ್ರದೇಶಕ್ಕೆ ಜಲಾಶಯದಿಂದ ನೀರು ಹರಿಸಿದರು. ಈ ಸಂದರ್ಭದಲ್ಲಿ ಹೆಚ್ಚಿನ ಜನಸಂದಣಿ ಸೇರಿದ್ದರೂ ವೃದ್ಧೆಯನ್ನು ಗಮನಿಸಿ ತಮ್ಮ ಬೆಲೆಬಾಳುವ 'ಕ್ರಿಶ್ಚಿಯನ್ ಡಿಯೋರ್' ಚಶ್ಮಾ ನೀಡಿ, ಅವರೊಂದಿಗೆ ಹೆಜ್ಜೆ ಹಾಕಿದರು. ಸದ್ಯ ಈ ವಿಡಿಯೊ ವೈರಲ್ ಆಗಿದೆ.
ವಿಡಿಯೊ ನೋಡಿ:
CM Joseph Vijay casually gifted Christian Dior glass to pattima which is around 50K. ❤️ https://t.co/6hcQVJcm71 pic.twitter.com/xHIVrcW3r5
— Dr. Kiran J Patel (@kiranpatel1977) September 1, 2026
ಮೆಟ್ಟೂರು ಡ್ಯಾಂ ಬಳಿಗೆ ವಿಜಯ್ ತೆರಳುವ ವೇಳೆ ರಸ್ತೆಯ ಸುತ್ತಲೂ ಸಾರ್ವಜನಿಕರು ನೆರೆದಿದ್ದರು. ಮಾರ್ಗದುದ್ದಕ್ಕೂ ಜನರಿಗೆ ಅವರು ಕೈ ಬೀಸಿ ಮಂದಹಾಸ ಬೀರಿಕೊಂಡೇ ಸಾಗಿದರು. ಈ ನಡುವೆ ದಾರಿಯಲ್ಲಿ ಸಿಕ್ಕ ವೃದ್ಧೆಯೊಬ್ಬರಿಗೆ ತಾವು ಧರಿಸಿದ್ದ ಕ್ರಿಶ್ಚಿಯನ್ ಡಿಯೋರ್ ಬ್ರ್ಯಾಂಡ್‌ನ ಸನ್ ಗ್ಲಾಸ್ ಗಿಫ್ಟ್ ನೀಡಿದರು. ವೃದ್ಧೆ ಆ ಕೂಲಿಂಗ್ ಗ್ಲಾಸ್ ಧರಿಸಿ, ಸಿಎಂ ಕೈ ಹಿಡಿದುಕೊಂಡು ಸಾಗಿದ ದೃಶ್ಯ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದಂತಿತ್ತು.
ದಳಪತಿ ಶಿಸ್ತಿಗೆ ಈ ಖ್ಯಾತ ನಿರ್ಮಾಪಕಿ ಫಿದಾ! 'ಬಿಗಿಲ್' ದಿನಗಳು ಹೇಗಿದ್ದವು?
ಕೆಲವು ದೂರದವರೆಗೆ ವೃದ್ಧೆ ಕನ್ನಡಕವನ್ನು ಧರಿಸಿ ಮುಖ್ಯಮಂತ್ರಿಯ ಪಕ್ಕದಲ್ಲಿ ನಡೆಯುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಜಯ್ ಸರಳತೆ, ಸಾರ್ವಜನಿಕರೊಂದಿಗೆ ಬೆರೆಯುವ ಕ್ಷಣಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನೆಟ್ಟಿಗರೊಬ್ಬರು ಇದನ್ನು ʼʼಹೃದಯಸ್ಪರ್ಶಿ ದೃಶ್ಯʼʼ ಎಂದು ಕರೆದಿದ್ದಾರೆ. ಮತ್ತೊಬ್ಬರು, ʼʼಸರಳ, ಸಜ್ಜನಿಕೆಯ ವ್ಯಕ್ತಿʼʼ ಎಂದು ಕೊಂಡಾಡಿದ್ದಾರೆ.
2026-27ನೇ ಸಾಲಿನ 'ಸಂಬಾ' ಭತ್ತದ ಬೆಳೆ ಹಾಗೂ ಕುಡಿಯುವ ನೀರಿನ ಅಗತ್ಯಕ್ಕಾಗಿ ಮೆಟ್ಟೂರು ಅಣೆಕಟ್ಟು ತೆರೆದು ನೀರು ಹರಿಸಲಾಗಿದೆ. ಜಲಾಶಯದ ನೀರು ನಿರಂತರವಾಗಿ ಪರಿಶೀಲಿಸಿ ಹಂತ-ಹಂತವಾಗಿ ನೀರು ಬಿಡಲಾಗುವುದು ಎಂದು ಸರ್ಕಾರ ತಿಳಿಸಿದೆ.