ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

500ಕ್ಕೂ ಹೆಚ್ಚು ಕಂಪನಿಗಳಿಗೆ ಅರ್ಜಿ ಹಾಕಿದರೂ ಸಿಗದ ಕೆಲಸ; ರ‍್ಯಾಪಿಡೋ ರೈಡರ್ ಆದ ಕಂಪ್ಯೂಟರ್ ಸೈನ್ಸ್ ಪದವೀಧರ

Viral News: ಕಂಪ್ಯೂಟರ್ ಸೈನ್ಸ್‌ನಲ್ಲಿ ಪ್ರಥಮ ದರ್ಜೆಯಲ್ಲಿ ಪದವಿ ಪಡೆದ ಯುವಕನೊಬ್ಬ ಯಾವುದೇ ಕೆಲಸ ಸಿಕ್ಕದೆ ರ‍್ಯಾಪಿಡೋ ರೈಡರ್ ಆಗಿ ಕೆಲಸ ಮಾಡುತ್ತಿದ್ದಾನೆ. ದೈನಂದಿನ ಖರ್ಚುಗಳನ್ನು ನಿರ್ವಹಿ ಸಲು ಈ ಕೆಲಸ ಮಾಡಬೇಕಾಗಿ ಬಂತು, ಇಷ್ಟು ಶಿಕ್ಷಣ ಪಡೆದರೂ ತನಗೆ ಕೆಲಸ ಸಿಕ್ಕಿಲ್ಲ ಎಂದು ಆತ ಬೇಸರ ಹೊರ ಹಾಕಿದ್ದಾನೆ.

ಉದ್ಯೋಗ ಸಿಗದೆ ರ‍್ಯಾಪಿಡೋ ರೈಡರ್ ಆದ ಕಂಪ್ಯೂಟರ್ ಸೈನ್ಸ್ ಪದವೀಧರ!

ಉದ್ಯೋಗ ಸಿಗದೆ ರ‍್ಯಾಪಿಡೋ ರೈಡರ್ ಆದ ಕಂಪ್ಯೂಟರ್ ಸೈನ್ಸ್ ಪದವೀಧರ -

Profile
Pushpa Kumari Jul 5, 2026 3:29 PM

ನವದೆಹಲಿ,ಜು.5: ಇಂದು ಶಿಕ್ಷಣ ಪಡೆದ ಅನೇಕ ಯುವಕ- ಯುವತಿಯರು ಉದ್ಯೋಗ ಇಲ್ಲದೆ ಮನೆಯಲ್ಲಿ ಕೂರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವೊಮ್ಮೆ ಕೆಲಸ ಸಿಕ್ಕರೂ ತಮ್ಮ ಓದಿಗೆ ಪೂರಕವಾಗಿಲ್ಲ, ಕಡಿಮೆ ಸಂಬಳ ಹೀಗೆ ನಾನಾ ಕಾರಣಕ್ಕೆ ನಿರಾಕರಣೆ ಮಾಡಬಹುದು.ಇದೀಗ ಕಂಪ್ಯೂಟರ್ ಸೈನ್ಸ್‌ನಲ್ಲಿ ಪ್ರಥಮ ದರ್ಜೆಯಲ್ಲಿ ಪದವಿ ಪಡೆದ ಯುವಕನೊಬ್ಬ ಯಾವುದೇ ಕೆಲಸ ಸಿಕ್ಕದೆ ರ‍್ಯಾಪಿಡೋ ರೈಡರ್ ಆಗಿ ಕೆಲಸ ಮಾಡುತ್ತಿದ್ದಾನೆ. ದೈನಂದಿನ ಖರ್ಚುಗಳನ್ನು ನಿರ್ವಹಿಸಲು ಈ ಕೆಲಸ ಮಾಡ ಬೇಕಾಗಿ ಬಂತು, ಇಷ್ಟು ಶಿಕ್ಷಣ ಪಡೆದರೂ ತನಗೆ ಕೆಲಸ ಸಿಕ್ಕಿಲ್ಲ ಎಂದು ಆತ ಬೇಸರ ಹೊರ (Viral News) ಹಾಕಿದ್ದಾನೆ.

​ಕಂಪ್ಯೂಟರ್ ಸೈನ್ಸ್‌ನಲ್ಲಿ ಪ್ರಥಮ ದರ್ಜೆಯಲ್ಲಿ ಪದವಿ ಪಡೆದ ಯುವಕನು ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡಬೇಕಾದ ಬದಲು ರೈಡರ್ ಆಗಿ ಕೆಲಸ ಮಾಡುತ್ತಿದ್ದಾನೆ. ಸದ್ಯ ನಿರುದ್ಯೋಗ ಸಮಸ್ಯೆ ಅನ್ನೋದು ಶಿಕ್ಷಣ ಪಡೆದ ಯುವಕ- ಯುವತಿಯರನ್ನು ಯಾವ ಮಟ್ಟಕ್ಕೆ ಕರೆದೊಯ್ದಿದೆ ಅನ್ನೋದಕ್ಕೆ ಈ ಘಟನೆ ಸಾಕ್ಷಿ. ಅನೇಕರು ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಮಕ್ಕಳ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.



ಈ ಪೋಸ್ಟ್ ಅನ್ನು ಬಳಕೆದಾರ ನೀರಜ್ ಎಂಬವರು ಹಂಚಿಕೊಂಡಿದ್ದಾರೆ. ಅವರು ಪ್ರಯಾಣದ ಸಂದರ್ಭದಲ್ಲಿ ರ‍್ಯಾಪಿಡೋ ರೈಡರ್ ನ ಹೆಲ್ಮೆಟ್‌ನಲ್ಲಿ ಕಾಲೇಜು ಸ್ಟಿಕ್ಕರ್ ಅನ್ನು ಗಮನಿಸಿದ್ದರು. ಕುತೂಹಲಕಾರಿಯಾಗಿ, ಅವರು ಟ್ರಾಫಿಕ್‌ನಲ್ಲಿ ಕಾಯುತ್ತಿರುವಾಗ ಸಂಭಾಷಣೆಯನ್ನು ಪ್ರಾರಂಭಿ ಸಿದರು..ಆಗ ಯುವಕ ತಾನು ಕೆಲಸಕ್ಕಾಗಿ ಕಷ್ಟ ಪಡುತ್ತಿರುವ ಬಗ್ಗೆ ವಿವರಿಸಿದ್ದಾನೆ. ಕಳೆದ ಎರಡು ತಿಂಗಳಿನಲ್ಲಿ ಸುಮಾರು 500ಕ್ಕೂ ಹೆಚ್ಚು ಕಂಪನಿಗಳಿಗೆ ಉದ್ಯೋಗಕ್ಕಾಗಿ ಅರ್ಜಿಯನ್ನು ಹಾಕಿ ದ್ದೇನೆ, ಆದರೆ ಒಂದೇ ಒಂದು ಕಂಪನಿಯಿಂದಲೂ ಆತನಿಗೆ ಸಂದರ್ಶನಕ್ಕಾಗಿ ಕರೆ ಬಂದಿಲ್ಲ. ಹೀಗೆ ಬದುಕು ಸಾಗಿಸಲು ಯಾವುದೇ ದಾರಿ ಇಲ್ಲದೆ ಈ ಕೆಲಸ ಆಯ್ದುಕೊಂಡೆ ಎಂದು ಹೇಳಿದ್ದಾನೆ.

Viral Video: ಅಳಿಲಿನ ಅಂತ್ಯಕ್ರಿಯೆ ವೇಳೆ ಕಣ್ಣೀರಿಟ್ಟ ಪುಟಾಣಿಗಳು; 'ಇಂತಹ ಮಕ್ಕಳನ್ನು ಬೆಳೆಸಬೇಕು' ಎಂದ ನಟಿ ರಮ್ಯಾ

ಆದರೆ ಅತೀ ದೊಡ್ಡ ಬೇಸರದ ವಿಚಾರ ಅಂದ್ರೆ ಆತ ರ‍್ಯಾಪಿಡೋ ಓಡಿಸುತ್ತಿರುವ ವಿಚಾರ ಆತನ ಹೆತ್ತವರಿಗೂ ತಿಳಿದಿಲ್ಲ‌. ಮನೆ ಯಲ್ಲೇ ಇದ್ದು ಸಾಫ್ಟ್‌ವೇರ್ ಕೆಲಸದ ಸಂದರ್ಶನಗಳಿಗೆ ತಯಾರಿ ನಡೆಸುತ್ತಿದ್ದೇನೆ ಅಂದುಕೊಂಡಿದ್ದಾರೆ. ತನ್ನ ಪರಿಸ್ಥಿತಿಯನ್ನು ಹೇಗೆ ವಿವರಿಸಬೇಕೆಂದು ತಿಳಿದಿಲ್ಲ. ಸದ್ಯ ರಾಪಿಡೊ ರೈಡರ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾನೆ. ಬಹುಶಃ ಉದ್ಯೋಗ ಮಾರುಕಟ್ಟೆಯು ಈಗ ಹೊಸ ಪದವೀಧರರಿಗೆ ವಿಶೇಷವಾಗಿ ಕಠಿಣವಾಗಿದೆ ಎಂದು ಹೇಳುವ ಮೂಲಕ ನೀರಜ್ ಪೋಸ್ಟ್ ಅನ್ನು ಕೊನೆಗೊಳಿಸಿದ್ದಾರೆ.

ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡ ಐಟಿ ಕಂಪನಿಗಳು ಅನುಭವವಿರುವವರಿಗೆ ಮಾತ್ರ ಆದ್ಯತೆ ನೀಡುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ. ಮತ್ತೊಬ್ಬರು ಇದು ಶಿಕ್ಷಣ ಪಡೆದವರ ಕಷ್ಟ. ಶಿಕ್ಷಣ ಪಡೆಯದೇ ಇದ್ದರೂ ಸಮಸ್ಯೆಯಿಲ್ಲ, ಆದರೆ ಕೆಲಸಕ್ಕಾಗಿ ಅಲೆಯುವ ಸ್ಥಿತಿ ಬರಬಾರದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.