ಟ್ರಾಫಿಕ್‌ನಲ್ಲಿ ಮುರಿದು ಬಿದ್ದ ಪುಟ್ಟ ಬಾಲಕನ ‘ಲವ್ ಸ್ಟೋರಿ’: ಕ್ಯೂಟ್ ಎಕ್ಸ್‌ಪ್ರೆಶನ್ ಇಲ್ಲಿದೆ ನೋಡಿ
Viral Video: ವಾಹನ ದಟ್ಟಣೆಯ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಕ್ಯೂಟ್ ಆಗಿರುವ ವಿಡಿಯೊವೊಂದು ಗಮನ ಸೆಳೆಯುತ್ತಿದೆ. ಪುಟ್ಟ ಬಾಲಕನೊಬ್ಬ ತನ್ನ ಕ್ಯೂಟ್ ಎಕ್ಸ್‌ಪ್ರೆಶನ್‌ಗಳ ಮೂಲಕ ಗಮನ ಸೆಳೆದಿದ್ದು ಪುಟ್ಟ ಬಾಲಕನ ಪ್ರೀತಿಗೆ ನ್ಯಾಯ ಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ. ಜತೆಗೆ ಇದು ಎಐ ರಚಿತ ವಿಡಿಯೊ ಎನ್ನುವ ವಾದವೂ ಕೇಳಿ ಬಂದಿದೆ.
ಟ್ರಾಫಿಕ್‌ನಲ್ಲಿ ಪುಟ್ಟ ಬಾಲಕ- ಬಾಲಕಿಯ ಕ್ಯೂಟ್ ಲವ್ -
ನವದೆಹಲಿ, ಜೂ. 4: ಸಾಮಾನ್ಯವಾಗಿ ಟ್ರಾಫಿಕ್ ಎಂದಾಗ ಪ್ರಯಾಣಿಕರಿಗೆ ಕಿರಿಕಿರಿ, ಯಾರಪ್ಪ ವೈಟ್ ಮಾಡೋದು? ಎಂದು ತಾಳ್ಮೆ ಕಳೆದುಕೊಳ್ಳುವವರೇ ಅಧಿಕ. ಆದರೆ ವಾಹನ ದಟ್ಟಣೆಯ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಕ್ಯೂಟ್ ಆಗಿರುವ ವಿಡಿಯೊವೊಂದು (Viral News) ಗಮನ ಸೆಳೆಯುತ್ತಿದೆ. ಪುಟ್ಟ ಬಾಲಕನೊಬ್ಬ ತನ್ನ ಕ್ಯೂಟ್ ಎಕ್ಸ್‌ಪ್ರೆಶನ್ ಮೂಲಕ ಗಮನ ಸೆಳೆದಿದ್ದು,ಆತನ ಪ್ರೀತಿಗೆ ನ್ಯಾಯ ಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.
ಮುದ್ದಾದ ಹುಡುಗಿ ಜತೆ ಪುಟ್ಟ ಹುಡುಗನ ಪ್ರೀತಿಯ ಕ್ಷಣವೊಂದು ಎಲ್ಲರ ಹೃದಯ ಗೆದ್ದಿದೆ. ಟ್ರಾಫಿಕ್‌ನಲ್ಲಿ ವಾಹನ ನಿಂತಿರುವುದನ್ನುತೋರಿಸುವ ಮೂಲಕ ವಿಡಿಯೊ ಆರಂಭವಾಗಿದೆ. ಸುಮಾರು 5-6 ವರ್ಷ ವಯಸ್ಸಿನ ಮುದ್ದಾದ ಪುಟ್ಟ ಹುಡುಗ ತನ್ನ ತಂದೆಯ ಜತೆ ಸ್ಕೂಟರ್‌ನಲ್ಲಿ ಕುಳಿತಿದ್ದ. ಅವನ ಪಕ್ಕದ ಇನ್ನೊಂದು ವಾಹನದಲ್ಲಿ ಗುಲಾಬಿ ಬಣ್ಣದ ಉಡುಪಿನಲ್ಲಿ ಮುಗ್ಧವಾಗಿ ನಗುತ್ತಿರುವ ಮುದ್ದಾದ ಪುಟ್ಟ ಹುಡುಗಿಯೊಬ್ಬಳು ಕೂತಿದ್ದಳು.
ವಿಡಿಯೊ ನೋಡಿ:
We want justice for that little boy 🙌🏻😂🙏 #tvk #TVKVijay pic.twitter.com/JAlxMCt6tb
— Subha (@Vasisubha1) June 3, 2026
ಈ ಸಂದರ್ಭದಲ್ಲಿ ಆ ಬಾಲಕ ಆ ಹುಡುಗಿಯನ್ನು ನೋಡುತ್ತಾನೆ. ಅವನ ಮುಖವು ಖುಷಿಯಿಂದ ಅರಳುತ್ತದೆ. ಆತನ ಚಾಚಿದ ಸಣ್ಣ ಕೈಗಳಿಂದ ಆಕೆಯ ಕಡೆಗೆ ಕೈ ಚಾಚಿ ಮಾತನಾಡಿಸಲು ಪ್ರಯತ್ನಿಸುತ್ತಾನೆ. ಆಗಲೇ ಹಿಂದಿನ ಕಾರಿನವರು ಜೋರಾಗಿ ಹಾರ್ನ್ ಮಾಡುತ್ತಾರೆ. ಬಾಲಕ ಬೆಚ್ಚಿಬಿದ್ದು ಕೈ ಹಿಂದೆಕ್ಕೆ ತೆಗೆದಿದ್ದಾನೆ. ಬಳಿಕ ಹಾರ್ನ್ ಮಅಡಿದ ಚಾಲಕನತ್ತ ಕೋಪದಿಂದ ನೋಡಿದ್ದಾನೆ.
ಮೊಸಳೆಯ ಬಾಲ ಹಿಡಿಯಲು ಯತ್ನಿಸಿದ ಯುವಕ: ಅಪಾಯಕಾರಿ ವಿಡಿಯೊ ವೈರಲ್
ಟ್ರಾಫಿಕ್‌ನಲ್ಲಿದ್ದ ಜನರೆಲ್ಲರೂ ಈ ಕ್ಯೂಟ್ ಕೋಪವನ್ನು ನೋಡಿ ನಗಲಾರಂಭಿಸಿದ್ದಾರೆ. ಈ ವೀಡಿಯೊಕ್ಕೆ "ಆ ಚಿಕ್ಕ ಹುಡುಗನಿಗೆ ನ್ಯಾಯ ಬೇಕು" ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ಬಾಲಕನ ಮುದ್ದಾದ ಕೋಪಕ್ಕೆ ಜನರು ಫಿದಾ ಆಗಿದ್ದರೂ, ಈ ವಿಡಿಯೊ ನಿಜವಲ್ಲ ಎಐ ರಚಿತ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಏನೇ ಇರಲಿ ಬಹಳ ಮುದ್ದಾದ ದೃಶ್ಯ ಎಂದು ಪ್ರತಿಕ್ರಿಯೆ ನೀಡಿದ್ದಾರೆ.