ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೇವಸ್ಥಾನದಿಂದ ನ‍ಳ್ಳಿ ಕದ್ದ ಡೆಲಿವರಿ ಬಾಯ್: ವಿಲಕ್ಷಣ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Viral Video: ಆಹಾರ ವಿತರಣಾ ಸಂಸ್ಥೆ ಝೊಮೆಟೊ ಸಮವಸ್ತ್ರ ಧರಿಸಿದ ಡೆಲಿವರಿ ಬಾಯ್ ಒಬ್ಬ ದೇವಸ್ಥಾನದ ನಳ್ಳಿಯನ್ನು ಕದ್ದಿದ್ದಾನೆ. ಇದರ ದೃಶ್ಯವು ಸಿಟಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ನೆಟ್ಟಿಗರು ಆಘಾತ ವ್ಯಕ್ತಪಡಿಸಿದ್ದಾರೆ. ಆತ ತಡರಾತ್ರಿ ಬೈಕ್‌ನಲ್ಲಿ ದೇವಸ್ಥಾನದ ಬಳಿ ಬಂದು ಕಳವು ಮಾಡಿದ್ದಾನೆ. ಸದ್ಯ ಇದರ ಕ್ಲಿಪ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ದೇವಾಲಯದ ನ‍ಳ್ಳಿ ಕದ್ದ ಡೆಲಿವರಿ ಬಾಯ್: ವಿಡಿಯೊ ವೈರಲ್

ದೇವಸ್ಥಾನದ ನಳ್ಳಿ ದೋಚಿದ ಡೆಲಿವರಿ ಬಾಯ್ -

Profile
Pushpa Kumari May 12, 2026 7:28 PM

ಲಖನೌ, ಮೇ 12: ಉತ್ತರ ಪ್ರದೇಶದ ಹಾಪುರ್‌ದಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. ಆಹಾರ ವಿತರಣಾ ಸಂಸ್ಥೆ ಝೊಮೆಟೊ ಸಮವಸ್ತ್ರ ಧರಿಸಿದ್ದ ಡೆಲಿವರಿ ಬಾಯ್ ದೇವಸ್ಥಾನದ ನಳ್ಳಿಯನ್ನು ಕಳವು ಮಾಡಿದ್ದಾನೆ. ಇದರ ದೃಶ್ಯವು ಸಿಟಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ನೆಟ್ಟಿಗರು ಅಚ್ಚರಿ, ಆಘಾತ ವ್ಯಕ್ತಪಡಿಸಿದ್ದಾರೆ. ಆತ ತಡರಾತ್ರಿ ಬೈಕ್‌ನಲ್ಲಿ ದೇವಸ್ಥಾನದ ಬಳಿ ಬಂದು ಕಳವು ಮಾಡಿದ್ದಾನೆ. ಸದ್ಯ ಇದರ ಕ್ಲಿಪ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದೆ.

ಸವಾರನು ದೇವಾಲಯದ ಆವರಣದ ಹೊರಗೆ ಅಳವಡಿಸಲಾದ ನಳ್ಳಿಯ ಬಳಿ ಬೈಕ್‌ ನಿಲ್ಲಿಸುವುದನ್ನು ಕಾಣಬಹುದು. ನಂತರ ಅವನು ಕೆಲವೇ ಸೆಕೆಂಡುಗಳಲ್ಲಿ ನಳ್ಳಿಯನ್ನು ಬಿಚ್ಚಿ ಡೆಲಿವರಿ ಬಾಕ್ಸ್‌ನಲ್ಲಿ ಇಟ್ಟುಕೊಂಡು ಪರಾರಿಯಾಗಿದ್ದಾನೆ. ವಿಡಿಯೊ ನೋಡಿದ ಅನೇಕರು, ಚಿನ್ನ ದರೋಡೆ ಮಾಡುವುದನ್ನು ನೋಡಿದ್ದೇವೆ. ಹಣ, ಬೆಲೆಬಾಳುವ ವಸ್ತುಗಳನ್ನು ದೋಚುವುದನ್ನು ನೋಡಿದ್ದೇವೆ. ಆದರೆ ನಳ್ಳಿಯೂ ಕಳ್ಳತನ ಮಾಡುವವರಿದ್ದಾರೆ ಎನ್ನುವುದು ಈಗ ತಿಳಿಯಿತು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಅಚ್ಚರಿ ಎಂದರೆ ಕಳ್ಳ ಮತ್ತೆ 1:20ರ ಸುಮಾರಿಗೆ ಮತ್ತೆ ಅದೇ ಜಾಗಕ್ಕೆ ಆಗಮಿಸಿದ್ದು ಮತ್ತೊಂದು ನಳ್ಳಿಯನ್ನು ತೆಗೆಯಲು ಪ್ರಯತ್ನಿಸಿದ್ದಾನೆ.

ವಿಡಿಯೊ ನೋಡಿ:



ಆದಾಗ್ಯೂ, ಅವನು ಎರಡನೇ ಪ್ರಯತ್ನದಲ್ಲಿ ವಿಫಲನಾಗಿದ್ದಾನೆ. ವಿಡಿಯೊ ಆನ್‌ಲೈನ್‌ನಲ್ಲಿ ಪ್ರಸಾರವಾಗುತ್ತಿದ್ದಂತೆ, ಸೋಷಿಯಲ್ ಮೀಡಿಯಾ ಬಳಕೆದಾರರು ಮಿಶ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಒಬ್ಬರು "ಕಡಿಮೆ ವೇತನದ ಕಾರ್ಮಿಕರಿಗೆ ಆರ್ಥಿಕತೆ ಮತ್ತು ಪರಿಸ್ಥಿತಿಗಳು ಎಷ್ಟು ಕಳಪೆಯಾಗಿವೆ. ಒಂದು ನಳ್ಳಿಯನ್ನು ಕಳ್ಳತನ ಮಾಡುವ ಸ್ಥಿತಿಗೆ ಬಂದಿದೆ" ಎಂದು ಬರೆದಿದ್ದಾರೆ.

ಅತ್ತೆಯನ್ನು ನೋಡಿಕೊಳ್ಳಲು ಕೆಲಸ ಬಿಡಲು ನಿರಾಕರಿಸಿದ ಪತ್ನಿಗೆ ವಿಚ್ಛೇದನ ನೀಡಿದ ಪತಿ!

ಮತ್ತೊಬ್ಬರು, ʼʼಬಡತನ ಇದ್ದರು ಸಾರ್ವಜನಿಕ ಆಸ್ತಿ ಕಳ್ಳತನ ಮಾಡುವುದು ಶಿಕ್ಷಾರ್ಹ ಅಪರಾಧʼʼ ಎಂದಿದ್ದಾರೆ. ಮತ್ತೊಬ್ಬರು, ʼʼಅಭಿನಂದನೆಗಳು ಝೊಮೆಟೊ. ನೀವು ತುಂಬಾ ಶ್ರಮಶೀಲ ಮತ್ತು ಉತ್ತಮ ತರಬೇತಿ ಪಡೆದ ಕೆಲಸಗಾರರನ್ನು ಹೊಂದಿದ್ದೀರಿʼʼ ಎಂದು ವ್ಯಂಗ್ಯವಾಡಿದ್ದಾರೆ. ಒಟ್ಟಿನಲ್ಲಿ ಈ ಪ್ರಕರಣ ಭಾರಿ ಚರ್ಚೆ ಹುಟ್ಟುಹಾಕಿದೆ.