ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

20 ವರ್ಷಗಳವರೆಗೆ ವ್ಯಕ್ತಿಯ ಹೊಟ್ಟೆಯಲ್ಲಿದ್ದ ಥರ್ಮಾ ಮೀಟರ್!

Viral News: ಚೀನಾದಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದ್ದು, 20 ವರ್ಷಗಳ ಕಾಲ ಹೊಟ್ಟೆಯಲ್ಲಿದ್ದ ಥರ್ಮಾ ಮೀಟರ್ ಪತ್ತೆಯಾಗಿದ್ದು ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿ ಹೊರಕ್ಕೆ ತೆಗೆದಿದ್ದಾರೆ. ಬಾಲ್ಯದಲ್ಲಿ ಅಚಾನಕ್ಕಾಗಿ ನುಂಗಿದ್ದ ಥರ್ಮಾ ಮೀಟರ್ ಹೊಟ್ಟೆಯಲ್ಲಿಯೇ ಇದ್ದಿದ್ದು ಕಂಡು ವೈದ್ಯರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮಗುವಾಗಿದ್ದಾಗ ನುಂಗಿದ್ದ ಥರ್ಮಾ ಮೀಟರ್ 20 ವರ್ಷಗಳ ಬಳಿಕ ಹೊರತೆಗೆದ ವೈದ್ಯರು

20 ವರ್ಷಗಳವರೆಗೆ ಹೊಟ್ಟೆಯಲ್ಲಿದ್ದ ಥರ್ಮಾ ಮೀಟರ್ -

Profile
Pushpa Kumari Apr 16, 2026 9:13 PM

ಬೀಜಿಂಗ್‌, ಏ. 16: ಇತ್ತೀಚೆಗೆ ಹಲವು ವಿಶೇಷ ವೈದ್ಯಕೀಯ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಪೈಕಿ ಚೀನಾದ ಈ ಘಟನೆ ಅಚ್ಚರಿಗೆ ಕಾರಣವಾಗಿದೆ. ಬರೋಬ್ಬರಿ 20 ವರ್ಷಗಳ ಕಾಲ ವ್ಯಕ್ತಿಯ ಹೊಟ್ಟೆಯಲ್ಲಿದ್ದ ಥರ್ಮಾ ಮೀಟರ್ ಪತ್ತೆಯಾಗಿದ್ದು, ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿ ಹೊರಕ್ಕೆ ತೆಗೆದಿದ್ದಾರೆ. ಬಾಲ್ಯದಲ್ಲಿ ಅಚಾನಕ್ಕಾಗಿ ನುಂಗಿದ್ದ ಥರ್ಮಾ ಮೀಟರ್ ಹೊಟ್ಟೆಯಲ್ಲಿಯೇ ಇದ್ದಿದ್ದು ಈಗ ಹೊರತೆಗೆಯಲಾಗಿದೆ. ಸದ್ಯ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಚೀನಾದ ವಾಂಗ್ ಎಂಬ ವ್ಯಕ್ತಿ ತಪಾಸಣೆ ನಡೆಸಲು ವೆನ್‌ಝೌ ವೈದ್ಯಕೀಯ ವಿಶ್ವವಿದ್ಯಾಲಯದ ದಿ ಫಸ್ಟ್ ಅಫಿಲಿಯೇಟ್ ಆಸ್ಪತ್ರೆಯ ಲಾಂಗ್‌ಗ್ಯಾಂಗ್ ಶಾಖೆಗೆ ಭೇಟಿ ನೀಡಿದ್ದಾರೆ. ಅವರ ಹೊಟ್ಟೆಯನ್ನು ಸ್ಕ್ಯಾನ್ ಮಾಡಿದಾಗ ವೈದ್ಯರೇ ಶಾಕ್‌ಗೆ ಒಳಗಾಗಿದ್ದಾರೆ. ಇವರ ಹೊಟ್ಟೆಯಲ್ಲಿ ಗಾಜಿನ ಆಕಾರದಂತೆ ಇರುವ ವಸ್ತು ಪತ್ತೆಯಾಗಿದೆ.

ಸ್ಕ್ಯಾನರ್‌ ವೇಳೆ ಅವರ ಡ್ಯುವೋಡೆನಮ್‌ನಲ್ಲಿ ಸಿಲುಕಿರುವ ವಸ್ತು ಕಂಡುಬಂದಿದ್ದು, ಬಳಿಕ ಅದು ಪಾದರಸದ ಥರ್ಮಾ ಮೀಟರ್ ಎಂದು ಗೊತ್ತಾಗಿದೆ. ಥರ್ಮಾ ಮೀಟರ್‌ನ ತುದಿ ನೇರವಾಗಿ ಕರುಳಿನ ಗೋಡೆಯ ವಿರುದ್ಧ ಒತ್ತಿ ನಿಂತಿರುವುದನ್ನು ವೈದ್ಯರು ಗಮನಿಸಿದರು. 12 ವರ್ಷ ವಯಸ್ಸು ಆಗಿದ್ದಾಗ ಆಕಸ್ಮಿಕವಾಗಿ ಇದನ್ನು ನುಂಗಿದ್ದಾಗಿ ವಾಂಗ್ ನೆನಪಿಸಿಕೊಂಡಿದ್ದಾರೆ. ಪೋಷಕರು ಬೈಯುತ್ತಾರೆ ಅನ್ನುವ ಕಾರಣಕ್ಕೆ ಈ ವಿಚಾರ ಹೇಳಿರಲಿಲ್ಲವಂತೆ. ಬಳಿಕ ಇದರಿಂದ ಯಾವುದೇ ಸಮಸ್ಯೆ ಇಲ್ಲದೆ ಇರುವ ಕಾರಣ ಅದನ್ನು ಮರೆತಿದ್ದರಂತೆ.

ಪಾಕಿಸ್ತಾನಿ ಮದುವೆಯಲ್ಲಿ ಧುರಂಧರ್ ಸಿನಿಮಾದ ಹವಾ; ಟೈಟಲ್‌ ಸಾಂಗ್‌ಗೆ ಭರ್ಜರಿ ಸೆಪ್ಟ್ ಹಾಕಿದ ಯುವಕರು

ಇತ್ತೀಚೆಗೆ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಾಗ ಆ ವಸ್ತು ಪತ್ತೆಯಾಗಿದೆ. ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಅದನ್ನು ತೆಗೆದುಹಾಕಲು ನಿರ್ಧರಿಸಿದರು. ಥರ್ಮಾ ಮೀಟರ್ ವರ್ಷಗಳ ಕಾಲ ಅವರ ದೇಹದೊಳಗೆ ಇದ್ದು ಅದು ಪಿತ್ತರಸ ನಾಳಗಳಿಗೆ ಬಹಳ ಹತ್ತಿರದಲ್ಲಿತ್ತು. ಅಂದರೆ ಆಪರೇಷನ್‌ ಸಮಯದಲ್ಲಿ ಕರುಳಿನ ಗೋಡೆಗೆ ಹಾನಿಯಾಗುವ ಅಪಾಯವಿತ್ತು.

ವೈದ್ಯರ ತಂಡ ಸುಮಾರು 20 ನಿಮಿಷಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ, ಥರ್ಮಾ ಮೀಟರ್ ಯಶಸ್ವಿಯಾಗಿ ಹೊರತೆಗೆದಿದೆ. ಈ ಸುದ್ದಿ ಆನ್‌ಲೈನ್‌ನಲ್ಲಿಹಲವು ಪ್ರತಿಕ್ರಿಯೆಗಳನ್ನು ಹುಟ್ಟು ಹಾಕಿದೆ. ನೆಟ್ಟಿಗರೊಬ್ಬರು, ʼʼಇವರು ಅದೃಷ್ಟಶಾಲಿ.‌‌‌ ಅದೃಷ್ಟವಶಾತ್ ಯಾವುದೇ ಸಮಸ್ಯೆ ಆಗಿಲ್ಲʼʼ ಎಂದಿದ್ದಾರೆ. ಮತ್ತೊಬ್ಬರು, ʼʼನಿಜಕ್ಕೂ ಭಯಾನಕವಾಗಿದೆ. ಪುಣ್ಯಕ್ಕೆ ಥರ್ಮಾ ಮೀಟರ್ ಮುರಿಯಲಿಲ್ಲʼʼ ಎಂದು ಹೇಳಿದ್ದಾರೆ.