ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕೇದಾರನಾಥ ದೇವಾಲಯದ ಟೆಂಟ್‌ ಒಳಗೇ ಮದ್ಯಪಾನ! ವೈರಲ್‌ ಆಯ್ತು ಕಿಡಿಗೇಡಿಗಳ ಕೃತ್ಯ

Viral Video: ಕೇದಾರನಾಥ ದೇವಾಲಯದ ಸಮೀಪ ಇರುವ ಟೆಂಟ್ ಒಳಗೆ ಹಲವಾರು ಯಾತ್ರಿಕರು ಜೊತೆ ಸೇರಿ ಮದ್ಯಪಾನ ಮಾಡುತ್ತಿರುವ ದೃಶ್ಯವೊಂದು ಕಂಡು ಬಂದಿದೆ. ಪವಿತ್ರ ಚಾರ್ ಧಾಮ್ ಯಾತ್ರೆಯ ಸಮಯದಲ್ಲಿ ಯಾತ್ರಿಕರ ವರ್ತನೆಯ ಬಗ್ಗೆ ಭಕ್ತರು ಮತ್ತು ನೆಟಿಜನ್‌ಗಳಲ್ಲಿ ಆಕ್ರೋಶವನ್ನು ಉಂಟು ಮಾಡಿದೆ.

ಕೇದರನಾಥ ದೇವಾಲಯದ ಬಳಿ ಎಣ್ಣೆ ಪಾರ್ಟಿ: ವಿಡಿಯೊ ನೋಡಿ ಭಕ್ತರ ಆಕ್ರೋಶ

ಪವಿತ್ರ ದೇವಾಲಯದ ಟೆಂಟ್‌ ಒಳಗೇ ಮದ್ಯಪಾನ -

Profile
Pushpa Kumari May 21, 2026 6:24 PM

ನವದೆಹಲಿ, ಮೇ 21: ಇತ್ತೀಚೆಗಷ್ಟೇ ಬಾದಾಮಿ ಗುಹಾಂತರ ದೇವಾಲಯದ ಒಳಗೆ ಮುಸ್ಲಿಂ ಯುವತಿಯೊಬ್ಬಳು ಚಪ್ಪಲಿ ಧರಿಸಿದ್ದು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿತ್ತು. ಪವಿತ್ರ ಹಾಗೂ ಐತಿಹಾಸಿಕತೆಯನ್ನು ಸಾರುವ ದೇವಾಲಯಕ್ಕೆ ಚಪ್ಪಲಿ ಧರಿಸಿ ಹೋಗುವುದು ಧಾರ್ಮಿಕ ನಂಬಿಕೆಗೆ ದಕ್ಕೆ ಎಸಗಿದಂತೆ ಎಂದು ಹಲವಾರು ಕಿಡಿಕಾರಿದ್ದರು‌. ಈ ನಡುವೆ ಕೇದಾರನಾಥ ದೇವಾಲಯದ ಸಮೀಪ ಇರುವ ಟೆಂಟ್ ಒಳಗೆ ಹಲವಾರು ಯಾತ್ರಿಕರು ಜೊತೆ ಸೇರಿ ಮಧ್ಯಾಪನ ಮಾಡುತ್ತಿರುವ ದೃಶ್ಯವೊಂದು (Viral News) ಕಂಡು ಬಂದಿದೆ. ಪವಿತ್ರ ಚಾರ್ ಧಾಮ್ ಯಾತ್ರೆಯ ಸಮಯದಲ್ಲಿ ಯಾತ್ರಿಕರ ವರ್ತನೆಯ ಬಗ್ಗೆ ಭಕ್ತರು ಮತ್ತು ನೆಟಿಜನ್‌ಗಳಲ್ಲಿ ಆಕ್ರೋಶವನ್ನು ಉಂಟು ಮಾಡಿದೆ.

ಕೇದಾರನಾಥ ದೇವಾಲಯದ ಬಳಿ ಚಿತ್ರೀಕರಿಸಲಾಗಿದೆ ಎನ್ನಲಾದ ವಿವಾದಾತ್ಮಕ ದೃಶ್ಯ ಎಲ್ಲರ ಕೆಂಗಣ್ಣಿಗೆ ಕಾರಣವಾಗಿದೆ‌. ಯಾತ್ರಿಕರಿಗಾಗಿ ನಿರ್ಮಿಸಿದ ಟೆಂಟ್ ಒಳಗೆ ಕೆಲವು ಪುರುಷರು ಕುಳಿತುಕೊಂಡು ಮಾತನಾಡುತ್ತಿರುವುದು ಕಂಡು ಬಂದಿದೆ. ಸುತ್ತಲೂ ಆಹಾರ ಪ್ಯಾಕೆಟ್‌ಗಳು, ನೀರಿನ ಬಾಟಲಿಗಳು, ಚೀಲಗಳು ಮತ್ತು ವೈಯಕ್ತಿಕ ವಸ್ತುಗಳು ಡೇರೆಯ ಸುತ್ತಲೂ ಹರಡಿಕೊಂಡಿರುವುದನ್ನು ಕಾಣಬಹುದು.

ವಿಡಿಯೋ ನೋಡಿ:



ಜನರು ಭಕ್ತಿಯ ಹೆಸರಿನಲ್ಲಿ ಪವಿತ್ರ ತೀರ್ಥಯಾತ್ರೆಯನ್ನು ಬಹಿರಂಗವಾಗಿ ಪಿಕ್ನಿಕ್ ತಾಣವನ್ನಾಗಿ ಪರಿವರ್ತಿಸುತ್ತಿದ್ದಾರೆ. ದಯವಿಟ್ಟು ನಮ್ಮ ಪವಿತ್ರ ಧಾಮಗಳನ್ನು ಹಾಳುಮಾಡುವುದನ್ನು ನಿಲ್ಲಿಸಿ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೊವನ್ನು ಶೇರ್ ಮಾಡಲಾಗಿದೆ. ದೇವರು ಭಕ್ತರು ಎಂದು ತೋರಿಸಿಕೊಂಡು ಇಂತಹ ಅನಾಚರ ಕೃತ್ಯ ಮಾಡಬಾರದು..ಇಂತಹ ಕೃತ್ಯದಿಂದ ಧಾರ್ಮಿಕ ನಂಬಿಕೆಗೆ ಹಾನಿ ಮಾಡಿದಂತೆ ಎಂದು ಹಲವಾರು ಕಿಡಿಕಾರಿದ್ದಾರೆ.

Viral Video: ರೈಲಿನಲ್ಲೇ ಮಿನಿ ಕನ್ಸರ್ಟ್: ಅಹಮದಾಬಾದ್-ಲಖನೌ ಪ್ರಯಾಣಿಕರಿಂದ ಫುಲ್ ಮಸ್ತಿ

ಇದಕ್ಕೂ ಮುನ್ನ ಪೊಲೀಸರು ಯಾತ್ರಿಕನೊಬ್ಬನ ಟೆಂಟ್‌ನಿಂದ ಮಾರಕಾಸ್ತ್ರಗಳು ಮತ್ತು ಗನ್‌ಗಳನ್ನು ವಶಪಡಿಸಿ ಕೊಂಡಿದ್ದರು. ಇದೀಗ ಕುಡಿತದ ಮತ್ತಿನಲ್ಲಿ ಯಾತ್ರಿಕರು ಮೆರೆಯುತ್ತಿದ್ದಾರೆ. ಸದ್ಯ ಆನ್‌ಲೈನ್‌ನಲ್ಲಿ ತೀರ್ಥಯಾತ್ರೆಯ ವಲಯಗಳಲ್ಲಿ ಭದ್ರತೆ ಮತ್ತು ಶಿಸ್ತಿನ ಬಗ್ಗೆ ಸಾರ್ವಜನಿಕ ಕಳವಳವನ್ನು ಹೆಚ್ಚಿಸಿವೆ.

ಕೇದಾರನಾಥ ದಂತಹ ಸ್ಥಳಗಳು ಲಕ್ಷಾಂತರ ಹಿಂದೂಗಳಿಗೆ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪ್ರಾಮುಖ್ಯತೆಯನ್ನು ಹೊಂದಿವೆ ಅವುಗಳನ್ನು ಗೌರವ ಮತ್ತು ಜವಾಬ್ದಾರಿಯಿಂದ ನಡೆಸಿಕೊಳ್ಳಬೇಕು ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಮತ್ತೊಬ್ಬರು ತೀರ್ಥಯಾತ್ರೆ ಸುತ್ತಲೂ ಕಟ್ಟುನಿಟ್ಟಾದ ತಪಾಸಣೆ ಮತ್ತು ಮೇಲ್ವಿಚಾರಣೆ ಮಾಡಬೇಕು ಎಂದು ಕಾಮೆಂಟ್ ಮಾಡಿದ್ದಾರೆ.