ಕ್ಯಾಬ್‌ನಲ್ಲಿ ಸಿಗರೇಟ್ ಸೇದಿದ ಕಾರಣಕ್ಕೆ ಪ್ರಯಾಣಿಕನಿಗೆ ಕ್ಲಾಸ್! ಅರ್ಧದಲ್ಲೇ ಪ್ರಯಾಣ ಕ್ಯಾನ್ಸಲ್ ಮಾಡಿದ ಚಾಲಕ!
Viral News: ಪ್ರಯಾಣಿಕನೊಬ್ಬ ಕ್ಯಾಬ್ ನಲ್ಲಿ ಸಿಗರೇಟ್ ಹಚ್ಚಿದ್ದಾನೆ ಎಂಬ ಕಾರಣಕ್ಕೆ ಚಾಲಕ ಆಕ್ರೋಶ ಗೊಂಡಿದ್ದು ತನ್ನ ಕಾರಿನಲ್ಲಿ ಧೂಮಪಾನ ಮಾಡಲು ಅವಕಾಶ ಇಲ್ಲ ಎಂದು ಕಿಡಿಕಾರಿದ್ದಾನೆ. ಈ ಘಟನೆಯ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ..
ಕ್ಯಾಬ್‌ನಲ್ಲಿ ಸಿಗರೇಟ್ ಸೇದಿದ ಕಾರಣಕ್ಕೆ ಪ್ರಯಾಣಿಕನಿಗೆ ಕ್ಲಾಸ್ -
ನವದೆಹಲಿ,ಜು.9: ಹಣಕೊಟ್ಟು ಕ್ಯಾಬ್ ಬುಕ್ ಮಾಡಿದ ಪ್ರಯಾಣಿಕನೊಬ್ಬನಿಗೆ ಚಾಲಕನೊಬ್ಬ ಅರ್ಧದಾರಿಯಲ್ಲೇ ಪಾಠ ಕಲಿಸಿದ ಘಟನೆಯೊಂದು ನಡಿದಿದೆ. ಸಾಮಾನ್ಯವಾಗಿ ಕೆಲವರು ಕ್ಯಾಬ್ ಬುಕ್ ಮಾಡಿದ ತಕ್ಷಣ ತಮ್ಮದೆ ವಾಹನ ಎಂಬಂತೆ ವರ್ತನೆ ತೋರುತ್ತಾರೆ. ಅದೇ ರೀತಿ ಪ್ರಯಾಣಿಕ ನೊಬ್ಬ ಕ್ಯಾಬ್ ನಲ್ಲಿ ಸಿಗರೇಟ್ ಹಚ್ಚಿದ್ದಾನೆ ಎಂಬ ಕಾರಣಕ್ಕೆ ಚಾಲಕ ಆಕ್ರೋಶಗೊಂಡಿದ್ದು ತನ್ನ ಕಾರಿನಲ್ಲಿ ಧೂಮಪಾನ ಮಾಡಲು ಅವಕಾಶ ಇಲ್ಲ ಎಂದು ಕಿಡಿಕಾರಿದ್ದಾನೆ. ಈ ಘಟನೆಯ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗುತ್ತಿದೆ.
ಚಾಲಕನ ಅನುಮತಿಯನ್ನು ಕೇಳದೆಯೇ ಪ್ರಯಾಣಿಕನೊಬ್ಬ ವಾಹನದೊಳಗೆ ಸಿಗರೇಟ್ ಹಚ್ಚಿದ್ದಾನೆಂದು ಅರ್ಧದಲ್ಲಿ ಪ್ರಯಾಣ ರದ್ದುಗೊಳಿಸಿದ್ದಾನೆ. ವೈರಲ್ ಆದ ವಿಡಿಯೊದಲ್ಲಿ ಚಾಲಕ ಕ್ಯಾಬ್ ಚಾಲನೆ ಮಾಡುತ್ತಿರುವುದನ್ನು ಸೆರೆಹಿಡಿಯಲಾಗಿದೆ. ಅದರಲ್ಲಿದ್ದ ಇಬ್ಬರು ಪ್ರಯಾಣಿಕರಲ್ಲಿ ಒಬ್ಬರು ಫೋನ್ ನಲ್ಲಿ ಮಾತನಾಡುತ್ತಾ ಸಿಗರೇಟ್ ತೆಗೆದು ವಾಹನದೊಳಗೆ ಹಚ್ಚುತ್ತಿದ್ದಾನೆ. ಕಾರಿನ ಎಸಿ ಆನ್ ಆಗಿದ್ದು ಗ್ಲಾಸ್‌ಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿರುತ್ತದೆ.
ವಿಡಿಯೋ ನೋಡಿ:
A man lights a cigarette while sitting in a cab.
— Lakshay Mehta (@lakshaymehta08) July 8, 2026
CAB DRIVER: Sir, did you ask me before lighting a cigarette? Smoking is not allowed in my car.
MAN: Why should I ask you? It’s not your car, it’s a taxi. You can’t just say smoking isn’t allowed 😳
DRIVER: I am cancelling the… pic.twitter.com/INaDEp8zBS
ಕ್ಯಾಬ್ ಒಳಗೆ ಹೊಗೆಯಾಡುತ್ತಿರುವುದನ್ನು ಚಾಲಕ ಗಮನಿಸಿದ ತಕ್ಷಣ,ಕೋಪಗೊಂಡು ಸಿಗರೇಟ್ ಹಚ್ಚುವ ಮೊದಲು ಅನುಮತಿ ಕೇಳಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾನೆ. ದೆಹಲಿಯಲ್ಲಿ ಈ ಘಟನೆಯೂ ನಡೆದಿದ್ದು ಚಾಲಕನು ಪ್ರಯಾಣಿಕನ ವರ್ತನೆ ವಿರುದ್ದ ಅರ್ಧದಾರಿಯಲ್ಲೇ ಜಗಳವಾಡಿದ್ದಾನೆ.
Viral Video: ಅಳಿಲಿನ ಅಂತ್ಯಕ್ರಿಯೆ ವೇಳೆ ಕಣ್ಣೀರಿಟ್ಟ ಪುಟಾಣಿಗಳು; 'ಇಂತಹ ಮಕ್ಕಳನ್ನು ಬೆಳೆಸಬೇಕು' ಎಂದ ನಟಿ ರಮ್ಯಾ
ಚಾಲಕನ ಪ್ರಶ್ನೆಗೆ ಪ್ರಯಾಣಿಕ ನಾನು ಸಿಗರೇಟ್ ಸೇದಲು ನಿನ್ನ ಅನುಮತಿ ಯಾಕೆ ಕೇಳಬೇಕು? ಇದು ನಿನ್ನ ಸ್ವಂತ ಕಾರಲ್ಲ, ಇದು ಟ್ಯಾಕ್ಸಿ ಎಂದು ಉತ್ತರಿಸುತ್ತಾನೆ. ಇದಕ್ಕೆ ಟ್ಯಾಕ್ಸಿ ಆಗಿದ್ದರೂ ಇದು ನನ್ನದು, ನೀವು ಖರೀದಿಸಿಲ್ಲ ಸರ್ ಎಂದಿದ್ದಾನೆ. ಬಳಿಕ ಇಬ್ಬರ ನಡುವೆ ತೀವ್ರ ವಾದಗಳಾಗಿದ್ದು "ನನಗೆ ನಿಮ್ಮ ದುಡ್ಡು ಬೇಡ, ನಾನು ಟ್ಯಾಕ್ಸಿ ಡ್ರೈವರ್ ಅಷ್ಟೇ, ನಿಮ್ಮ ಮನೆಯ ನೌಕರನಲ್ಲ" ಎಂದು ಚಾಲಕ ಪ್ರಯಾಣಿಕರನ್ನು ಕಾರಿನಿಂದ ಕೆಳಗಿಳಿಸಿ ಪ್ರಯಾಣವೇ ಕ್ಯಾನ್ಸಲ್ ಮಾಡುತ್ತಾನೆ.
ಈ ವೀಡಿಯೊ ಜನರಿಂದ ವ್ಯಾಪಕವಾದ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ, ಅನೇಕ ಬಳಕೆದಾರರು ಚಾಲಕನ ನಡೆಯನ್ನು ಶ್ಲಾಘಿಸಿದ್ದಾರೆ. ಬಳಕೆದಾರರೊಬ್ಬರು "ಎಸಿ ಕಾರಿನೊಳಗೆ ಸಿಗರೇಟ್ ಸೇದುವುದು ಬೇರೆಯವರ ಆರೋಗ್ಯಕ್ಕೂ ಹಾನಿಕರ, ಚಾಲಕನ ನಿರ್ಧಾರ ಸರಿಯಾಗಿದೆ" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಚಾಲಕ ಇಷ್ಟು ಕೋಪಗೊಳ್ಳುವ ಅಗತ್ಯವಿರಲಿಲ್ಲ,ಸೌಜನ್ಯ ದಿಂದ ಕೇಳಬಹುದಿತ್ತು ಅಂದಿದ್ದಾರೆ..