ಆನ್‌ಲೈನ್ ಮೀಟಿಂಗ್‌ನಲ್ಲಿ ಮ್ಯಾನೇಜರ್‌ಗೆ ಬೈದ ಉದ್ಯೋಗಿ: ಮೈಕ್ ಆಫ್ ಮಾಡದೇ ಪೇಚಿಗೆ ಒಳಗಾದ ವ್ಯಕ್ತಿ!
Viral Video: ಇಲ್ಲೊಬ್ಬ ಲೈವ್ ಮೀಟಿಂಗ್ ನಲ್ಲೇ ಮ್ಯಾನೇಜರ್ ಗೆ ಬೈದ ಘಟನೆ ಕಂಡು ಬಂದಿದೆ. ಆನ್ ಲೈನ್ ಮೀಟಿಂಗ್ ಸಂದರ್ಭದಲ್ಲಿ ಕ್ಯಾಮರಾ ಮತ್ತು ಮೈಕ್ ಆನ್ ಇರುವುದು ತಿಳಿಯದೇ ಎಲ್ಲರ ಎದುರೇ ಉದ್ಯೋಗಿ ಮ್ಯಾನೇಜರ್ ಗೆ ಬೈದು ಪೇಚೆಗೆ ಸಿಲುಕಿದ್ದಾರೆ. ಸದ್ಯ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ..
ಲೈವ್ ಮೀಟಿಂಗ್‌ನಲ್ಲಿ ಮ್ಯಾನೇಜರ್ ಗೆ ಬೈದ ಉದ್ಯೋಗಿ -
ನವದೆಹಲಿ,ಎ.10: ಇತ್ತೀಚೆಗೆ ಆಫೀಸ್ ಮೀಟಿಂಗ್ ಅಂದಾಗ ಸಾಮಾನ್ಯವಾಗಿ ಆನ್‌ಲೈನ್ ಮೂಲಕವೇ ನಡೆಯುತ್ತದೆ. ಇಲ್ಲೊಬ್ಬ ಲೈವ್ ಮೀಟಿಂಗ್ ನಲ್ಲೇ ಮ್ಯಾನೇಜರ್ ಗೆ ಬೈದ ಘಟನೆ ಕಂಡು ಬಂದಿದೆ. ಆನ್ ಲೈನ್ ಮೀಟಿಂಗ್ ಸಂದರ್ಭದಲ್ಲಿ ಕ್ಯಾಮರಾ ಮತ್ತು ಮೈಕ್ ಆನ್ ಇರುವುದು ತಿಳಿಯದೇ ಎಲ್ಲರ ಎದುರೇ ಉದ್ಯೋಗಿ ಮ್ಯಾನೇಜರ್ ಗೆ ಬೈದು ಪೇಚೆಗೆ ಸಿಲುಕಿದ್ದಾರೆ. ಸದ್ಯ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದೆ.
ಉದ್ಯೋಗಿಯೊಬ್ಬ ಆಫೀಸ್ ಮೀಟಿಂಗ್‌ಗಾಗಿ ಲ್ಯಾಪ್ ಟಾಪ್ ಆನ್ ಮಾಡುತ್ತಿದ್ದ. ಈ ಸಂದರ್ಭ ದಲ್ಲಿ ಮನೆಯ ಸದಸ್ಯರೊಬ್ಬರು ಬಂದು ಮತ್ತೆ ಯಾಕೆ ಲ್ಯಾಪ್ ಟಾಪ್ ಓಪನ್ ಮಾಡಿದ್ದೀಯಾ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಆತ ಅಲ್ಲೇ ಮ್ಯಾನೇಜರ್‌ಗೆ ಬೈದಿದ್ದಾರೆ. 7 ಗಂಟೆಗೆ ಮೀಟಿಂಗ್ ಇಟ್ಟಿದ್ದಾರೆ ಈತನನ್ನು ಮ್ಯಾನೇಜರ್ ಮಾಡಿದ್ದು ಯಾರು? ಎಂದು ಹಿಂದಿಯಲ್ಲಿ ಬೈದಿದ್ದಾನೆ.
ವಿಡಿಯೋ ನೋಡಿ:
🚨 WIFE : You again joined the meeting ?
— News Algebra (@NewsAlgebraIND) April 9, 2026
MAN : I can’t help. Manager scheduled the meeting at 7 o’clock. I don’t know who made him manager.
ANOTHER EMPLOYEE : Your camera and mic are both on 😂☠️ pic.twitter.com/zHgcHQLFmk
ಆದರೆ ತನ್ನ ಕ್ಯಾಮರಾ ಮತ್ತು ಮೈಕ್ ಆನ್ ಇರುವುದು ಆತನಿಗೆ ಮತ್ತೆ ಅರಿವಾಗಿದೆ.. ಕೂಡಲೇ ಮತ್ತೊಬ್ಬ ಸಹೋದ್ಯೋಗಿ ಮೈಕ್ ಮತ್ತು ಕ್ಯಾಮೆರಾ ಆನ್ ಇದೆ ಎಂದು ತಿಳಿಸಿದ್ದಾರೆ. ಕೂಡಲೇ ಭಯ ಪಟ್ಟ ಉದ್ಯೋಗಿ ಕ್ಷಮೆಯಾಚಿಸಿದ್ದಾನೆ.
Viral Video: ಕೇವಲ 2 ಸೆಕೆಂಡ್‌ನಲ್ಲಿ 700 ಕಿ.ಮೀ ವೇಗದ ರೈಲು ಪ್ರಯಾಣ: ವಿಶ್ವ ದಾಖಲೆ ನಿರ್ಮಿಸಿದ ಚೀನಾ!
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾದ ಈ ಕ್ಲಿಪ್ ತ್ವರಿತವಾಗಿ ಗಮನ ಸೆಳೆದಿದೆ. ಕಡಿಮೆ ಅವಧಿಯಲ್ಲಿಯೇ ಸುಮಾರು ಆರು ಲಕ್ಷ ವೀಕ್ಷಣೆಗಳನ್ನು ಗಳಿಸಿದೆ. ಬಳಕೆದಾರರೊಬ್ಬರು ಪಕ್ಕಾ ಈತ ಕೆಲಸದಿಂದ ವಜಾ ಎಂದು ಬರೆದಿದ್ದಾರೆ ಇನ್ನು ಕೆಲವರು ಇದು ಸ್ಕ್ರಿಪ್ಟೆಡ್ ವಿಡಿಯೋ ಇರಬಹುದು ಎಂದು ಪ್ರತಿಕ್ರಿಯೆ ನೀಡಿದ್ದಾರೆ..