ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ರಾತ್ರೋರಾತ್ರಿ ಸೋಶಿಯಲ್‌ ಮೀಡಿಯಾದಲ್ಲಿ ಫುಲ್‌ ಫೇಮಸ್‌ ಆದ ಚರ್ಚ್‌ ಫಾದರ್‌! ಅಂತಹದ್ದೇನು ಮಾಡಿದ ಈತ?

Overnight Social Media Star: ಇಂಗ್ಲೆಂಡ್‌ ಚರ್ಚ್‍ವೊಂದರ ಪಾದ್ರಿಯು ಹಂಚಿಕೊಂಡ ಟಿಕ್‍ಟಾಕ್ ವಿಡಿಯೊ ವೈರಲ್ ಆದ ನಂತರ ರಾತ್ರೋರಾತ್ರಿ ಭಾರಿ ಜನಪ್ರಿಯತೆ ಪಡೆದಿದ್ದಾರೆ. ಫಾದರ್ ಜೋರ್ಡಾನ್ ಅವರನ್ನು ಹಾಟ್ ಪಾದ್ರಿ ಎಂದು ಕರೆಯಲಾಗುತ್ತಿದ್ದು, ಚರ್ಚ್‍ಗೆ ಭೇಟಿ ನೀಡುವವರ ಸಂಖ್ಯೆಯೂ ಹೆಚ್ಚಿದೆಯಂತೆ!

ರಾತ್ರೋರಾತ್ರಿ ಸೋಶಿಯಲ್‌ ಮೀಡಿಯಾ ಸ್ಟಾರ್‌ ಆದ ಚರ್ಚ್ ಫಾದರ್‌!

Priyanka P Priyanka P Aug 24, 2025 7:14 PM

ಲಂಡನ್: ಇಂಗ್ಲೆಂಡ್‌ ಚರ್ಚ್‍ವೊಂದರ ಪಾದ್ರಿಯು ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದ್ದಾರೆ. ಇತ್ತೀಚೆಗೆ ರೋಮ್‌ಫೋರ್ಡ್‌ನ ಸೇಂಟ್ ಎಡ್ವರ್ಡ್ ದಿ ಕನ್ಫೆಸರ್ ಚರ್ಚ್‌ನಲ್ಲಿ ನೇಮಕಗೊಂಡ ಫಾದರ್ ಜೋರ್ಡಾನ್ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಗಮನ ಸೆಳೆದಿದ್ದಾರೆ. ಫಾದರ್ ಜೋರ್ಡಾನ್ (Father Jordan) ಅವರ ವಿಡಿಯೊಗಳು ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದರಿಂದ ಅವರನ್ನು ಹಾಟ್ ಪಾದ್ರಿ (Hot Priest) ಅಂತಲೂ ಜನ ಕರೆಯುತ್ತಿದ್ದಾರೆ. ಪಾದ್ರಿಯ ಧರ್ಮೋಪದೇಶಗಳನ್ನು ಮೀರಿ, ಅವರ ಸೌಂದರ್ಯ ಮತ್ತು ವ್ಯಕ್ತಿತ್ವವು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು, ವಿಶೇಷವಾಗಿ ಯುವಜನರ ಗಮನ ಸೆಳೆದಿದೆ.

ರಾತ್ರೋರಾತ್ರಿ ಸಾಮಾಜಿಕ ಮಾಧ್ಯಮ ತಾರೆಯಾದ ಫಾದರ್ ಬಗ್ಗೆ ಅನೇಕರು ಆಕರ್ಷಿತರಾಗಿದ್ದಾರೆ. ಫಾದರ್ ಹಂಚಿಕೊಂಡ ಟಿಕ್‍ಟಾಕ್ ವಿಡಿಯೊ ವೈರಲ್ (Viral Video) ಆದ ನಂತರ ಜೋರ್ಡನ್ ಭಾರಿ ಜನಪ್ರಿಯತೆ ಪಡೆದಿದ್ದಾರೆ. ಸಾವಿರಾರು ಟಿಕ್‌ಟಾಕ್ ಮತ್ತು ಇನ್‌ಸ್ಟಾಗ್ರಾಮ್ ಬಳಕೆದಾರರು ತಮಾಷೆಯ ಪೋಸ್ಟ್‌ಗಳು, ಎಮೋಜಿಗಳು ಮತ್ತು ಮೀಮ್‌ಗಳನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದ ಕಾಮೆಂಟ್‌ಗಳು ಹಾಸ್ಯಮಯದಿಂದ ತುಂಬಿವೆ. ಕೆಲವರು ಅವರನ್ನು ಫಾದರ್ ಎಂದು ಕರೆಯುತ್ತಾರೆ, ಇನ್ನೂ ಕೆಲವರು ಅವರನ್ನು ಅಪ್ಪ (daddy) ಎಂದು ಕರೆಯುತ್ತಾರೆ ಎಂದು ಬಳಕೆದಾರರೊಬ್ಬರು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು, ಈಗ ನಾನು ಚರ್ಚ್‌ಗೆ ಹೋಗಲು ಪ್ರಾರಂಭಿಸಬೇಕು ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ವಿಡಿಯೊ ವೀಕ್ಷಿಸಿ:

ಒಬ್ಬ ಬಳಕೆದಾರರು, ‘ನನ್ನ ದೇಹದಿಂದ ನಾಸ್ತಿಕತೆ ಹೊರಬರುತ್ತಿದೆ’ ಎಂದು ಹೇಳಿದರೆ, ಇನ್ನೊಬ್ಬರು, ರೋಮ್‌ಫೋರ್ಡ್ ಈಗ ಇಂಗ್ಲೆಂಡ್‌ನ ಅತ್ಯಂತ ಧಾರ್ಮಿಕ ಪ್ರದೇಶವಾಗಿದೆ ಎಂದು ಹೇಳಿದ್ದಾರೆ. ಅನೇಕ ಮಹಿಳೆಯರು ತಮಾಷೆಯ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ.

ವ್ಯಾಟಿಕನ್ ಯುವ ಪೀಳಿಗೆಯನ್ನು ತೊಡಗಿಸಿಕೊಳ್ಳಲು ಸಕ್ರಿಯವಾಗಿ ಮಾರ್ಗಗಳನ್ನು ಹುಡುಕುತ್ತಿರುವ ಸಮಯದಲ್ಲಿ ಫಾದರ್ ಜೋರ್ಡಾನ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯರಾಗಿದ್ದಾರೆ. ವರದಿ ಪ್ರಕಾರ, ವ್ಯಾಟಿಕನ್ ಇತ್ತೀಚೆಗೆ ಚರ್ಚ್‌ನಲ್ಲಿ ಯುವ ಸಮುದಾಯದ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಲು ಸುಮಾರು 1,000 ಯುವ ಮಿಷನರಿಗಳು ಮತ್ತು ಧಾರ್ಮಿಕ ಪ್ರಭಾವಿಗಳನ್ನು ರೋಮ್‌ಗೆ ಆಹ್ವಾನಿಸಿದೆ. ಯುವ ಪಾದ್ರಿ ಬಗ್ಗೆ ಅನೇಕರು ಹೊಗಳಿದರೆ, ಕೆಲವರು ‘ಹಾಟ್’ ಎಂಬ ಹಣೆಪಟ್ಟಿ ನೀಡಿರುವುದು ಹಲವರಿಗೆ ಬೇಸರ ತರಿಸಿದೆಯಂತೆ. ಯುವ ಜನರನ್ನು ಆಕರ್ಷಿಸುವಲ್ಲಿ ಜೋರ್ಡಾನ್ ಪಾತ್ರ ಮಹತ್ವದ್ದು ಎಂದು ವಿಶ್ಲೇಷಿಸಲಾಗುತ್ತಿದೆ.

ಈ ಸುದ್ದಿಯನ್ನೂ ಓದಿ: Viral News: ಭಾರತೀಯರು ಮೊದಲು ವಿದ್ಯುತ್‌ ಬಲ್ಬ್‌ ನೋಡಿ ಭೂತದ ಕಣ್ಣೆಂದು ಭಾವಿಸಿ ಓಡಿ ಹೋಗಿದ್ರಂತೆ!