ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Daisy Shah: ಕನ್ನಡ ಚಿತ್ರಗಳ ಹಾಡಿನಲ್ಲಿ ನಾಯಕಿಯ ಹೊಕ್ಕುಳಿನಲ್ಲಿ ಸಲಾಡ್‌ ಮಾಡಲಾಗುತ್ತದೆ; ಬಾಲಿವುಡ್‌ ನಟಿಯ ಶಾಕಿಂಗ್‌ ಹೇಳಿಕೆ

ಕನ್ನಡದ ʼಬಾಡಿಗಾರ್ಡ್‌ʼ, ʼಭದ್ರʼ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿರುವ ಬಾಲಿವುಡ್‌ ನಟಿ ಡೈಸಿ ಶಾ ಇದೀಗ ಸ್ಯಾಂಡಲ್‌ವುಡ್‌ ಸಿನಿಮಾಗಳ ಬಗ್ಗೆ ನೀಡಿದ ಹೇಳಿಕೆ ಸಂಚಲನ ಸೃಷ್ಟಿಸಿದೆ. ಕನ್ನಡ ಸಿನಿಮಾಗಳ ಹಾಡಿನಲ್ಲಿ ನಾಯಕಿಯ ಹೊಕ್ಕುಳನ್ನು ಝೂಮ್‌ ಮಾಡಿ ತೋರಿಸಲಾಗುತ್ತಿತ್ತು ಎಂದು ಹೇಳಿದ್ದಾರೆ.

ಕನ್ನಡ ಚಿತ್ರಗಳ ಹಾಡಿನ ಬಗ್ಗೆ ಬಾಲಿವುಡ್‌ ನಟಿಯ ಶಾಕಿಂಗ್‌ ಹೇಳಿಕೆ

ಡೈಸಿ ಶಾ

Ramesh B Ramesh B Aug 24, 2025 9:50 PM

ಮುಂಬೈ: ದಕ್ಷಿಣ ಭಾರತದ ಚಿತ್ರಗಳಲ್ಲಿ ನಾಯಕಿಯ ಹೊಕ್ಕುಳ ಪ್ರದರ್ಶನಕ್ಕೆ ಒತ್ತು ನೀಡಲಾಗುತ್ತದೆ-ಇದು ಹಿಂದಿನಿಂದಲೂ ಕೇಳಿ ಬರುತ್ತಿರುವ ಗಂಭೀರ ಆರೋಪ. ಇದೀಗ ಮತ್ತೊಮ್ಮೆ ಈ ಚರ್ಚೆ ಮುನ್ನೆಲೆಗೆ ಬಂದಿದೆ. ಕನ್ನಡದ ʼಬಾಡಿಗಾರ್ಡ್‌ʼ, ʼಭದ್ರʼ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿರುವ ಬಾಲಿವುಡ್‌ ನಟಿ ಡೈಸಿ ಶಾ (Daisy Shah) ಸಂದರ್ಶನವೊಂದರಲ್ಲಿ ಈ ಬಗ್ಗೆ ನೀಡಿರುವ ಹೇಳಿಕೆ ಸದ್ಯ ಸಂಚಲನ ಸೃಷ್ಟಿಸಿದೆ. ಕನ್ನಡ ಸಿನಿಮಾಗಳ ಹಾಡಿನಲ್ಲಿ ನಾಯಕಿಯ ಹೊಕ್ಕುಳನ್ನು ಝೂಮ್‌ ಮಾಡಿ ತೋರಿಸಲಾಗುತ್ತಿತ್ತು ಎಂದು ಹೇಳಿದ್ದಾರೆ. ಸದ್ಯ ಈ ಬಗ್ಗೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ಕನ್ನಡ ಚಿತ್ರರಂಗದಲ್ಲಿ ನಟಿಯರ ಹೊಕ್ಕುಳ ಪ್ರದರ್ಶನಕ್ಕೆ ನೀಡುವ ಪ್ರಾಧಾನ್ಯತೆಯನ್ನು ಟೀಕಿಸಿದ್ದಾರೆ. ಜತೆಗೆ ಹಲವು ವಿಚಾರಗಳ ಬಗ್ಗೆ ಮಾತಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: Mala Sinha: ಐಟಿ ರೇಡ್‌ ವೇಳೆ ಹೇಳಿದ ಒಂದೇ ಸುಳ್ಳಿನಿಂದ ಈ ನಟಿಯ ಜೀವನವೇ ಹಾಳಾಯ್ತು; ಅಷ್ಟಕ್ಕೂ ಆಗಿದ್ದೇನು?

ಡೈಸಿ ಶಾ ಹೇಳಿದ್ದೇನು?

ಸಿನಿಮಾ ರಂಗದಲ್ಲಿ ಹೊಕ್ಕುಳ ಆಕರ್ಷಣೆ ಇನ್ನೂ ಅಸ್ತಿತ್ವದಲ್ಲಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ. ʼʼನಾನು ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದ ದಿನಗಳವು. ಬಿಡುವಿನ ವೇಳೆ ಟಿವಿಯಲ್ಲಿ ಪ್ರಸಾರವಾಗುವ ಕನ್ನಡ ಹಾಡುಗಳನ್ನು ನೋಡುತ್ತಿದ್ದೆ. ಕನ್ನಡದಲ್ಲಿ ಒಬ್ಬ ನಟ ಇದ್ದಾರೆ. ಅವರ ಎಲ್ಲ ಹಾಡುಗಳಲ್ಲಿ ನಾಯಕಿಯ ಹೊಕ್ಕುಳವನ್ನು ಝೂಮ್‌ ಮಾಡಿ ತೋರಿಸಲಾಗುತ್ತದೆ. ಜತೆಗೆ ಹೊಕ್ಕುಳದ ಮೇಲೆ ಫ್ರುಟ್‌ ಸಲಾಡ್‌ ಮತ್ತು ತರಕಾರಿ ಸಲಾಡ್‌ ಮಾಡಲಾಗುತ್ತದೆ. ಕೆಲವೊಮ್ಮೆ ಹೊಕ್ಕುಳಿನ ಮೇಲೆ ಐಸ್ ಅಥವಾ ನೀರನ್ನೂ ಸುರಿಯಲಾಗುತ್ತಿತ್ತುʼʼ ಎಂದಿದ್ದಾರೆ.

ಸದ್ಯ ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ಆರಂಭವಾಗಿದೆ. ಸಿನಿಮಾಗಳಲ್ಲಿ ನಾಯಕಿಯರನ್ನು ಗ್ಲಾಮರಸ್‌ ಆಗಿ ತೋರಿಸುವುದಕ್ಕೆ, ಅಷ್ಟಕ್ಕೆ ಸೀಮಿತಗೊಳಿಸುವುದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸುತ್ತಲೇ ಇದ್ದಾರೆ. ಈ ಚರ್ಚೆ ಇದೀಗ ಮತ್ತೊಮ್ಮೆ ಮುನ್ನಲೆಗೆ ಬಂದಿದ್ದಾರೆ.

ಯಾರು ಈ ಡೈಸಿ ಶಾ?

ಬಾಲಿವುಡ್‌ನ ಜನಪ್ರಿಯ ಕೊರಿಯೋಗ್ರಾಫರ್‌ ಗಣೇಶ್‌ ಆಚಾರ್ಯ ಅವರ ಅಸಿಸ್ಟಂಟ್‌ ಆಗಿ ಡೈಸಿ ಶಾ ತಮ್ಮ ವೃತ್ತಿ ಜೀವನ ಆರಂಭಿಸಿದರು. ಈ ವೇಳೆ ಅವರು ಬಾಲಿವುಡ್‌ನ ಹಲವು ಚಿತ್ರಗಳ ಹಾಡಿನಲ್ಲಿ ಸಹನರ್ತಕಿಯಾಗಿಯೂ ಕಾಣಿಸಿಕೊಂಡರು. ಹಿಂದಿ, ತಮಿಳು, ಮಲಯಾಳಂ ಸಿನಿಮಾಗಳ ವಿಶೇಷ ಪಾತ್ರದಲ್ಲಿ ನಟಿಸಿದರು. 2011ರಲ್ಲಿ ತೆರೆಕಂಡ ಕನ್ನಡದ ʼಭದ್ರʼ, ʼಬಾಡಿಗಾರ್ಡ್‌ʼ ಸಿನಿಮಾಗಳಲ್ಲಿ ಅಭಿನಯಿಸಿ ನಾಯಕಿಯಾಗಿ ಪರಿಚಿತಗೊಂಡರು. ನಂತರ 2014ರಲ್ಲಿ ರಿಲೀಸ್‌ ಆದ ಬಾಲಿವುಡ್‌ನ ʼಜೈ ಹೋʼ ಸಿನಿಮಾದಲ್ಲಿ ಸಲ್ಮಾನ್‌ ಖಾನ್‌ಗೆ ನಾಯಕಿಯಾಗಿ ಮಿಂಚಿದರು.

ಅದಾದ ಬಳಿಕ ʼಹೇಟ್‌ ಸ್ಟೋರಿ 3ʼ, ʼರೇಸ್‌ 3ʼ ಮತ್ತಿತರ ಜಪ್ರಿಯ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಗುಜರಾತಿ, ಮರಾಠಿ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ವೆಬ್‌ ಸೀರೀಸ್‌ನಲ್ಲಿಯೂ ಬಣ್ಣ ಹಚ್ಚಿದ್ದಾರೆ. ಜತೆಗೆ ʼಫಿಯರ್‌ ಫಾಕ್ಟರ್‌: ಖತ್ರೋನ್‌ ಕಿ ಖಿಲಾಡಿ 13ʼ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ಅವರು ಕೊನೆಯದಾಗಿ 2023ರಲ್ಲಿ ರಿಲೀಸ್‌ ಆದ ʼಮಿಸ್ಟ್ರಿ ಆಫ್‌ ದಿ ಟ್ಯಾಟೂʼ ಹಿಂದಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಅವರು ಯಾವುದೇ ಚಿತ್ರದಲ್ಲಿ ನಟಿಸುತ್ತಿಲ್ಲ. ಶೀಘ್ರದಲ್ಲೇ ಕಂಬ್ಯಾಕ್‌ ಮಾಡುವ ನಿರೀಕ್ಷೆ ಇದೆ.