ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಕಂಡ ಕಂಡವರ ಮೇಲೆ ಬೆಲ್ಟ್‌ನಿಂದ ಹಲ್ಲೆ ನಡೆಸಿ ಮಹಿಳಾ ಬೌನ್ಸರ್‌ಗಳ ಅಟ್ಟಹಾಸ!

Female Bouncers Thrashing Men: ಮಹಿಳಾ ಬೌನ್ಸರ್‌ಗಳು ಜಾತ್ರೆಯಲ್ಲಿ ಜನರೊಂದಿಗೆ ಅನುಚಿತವಾಗಿ ವರ್ತಿಸಿ, ಬೆಲ್ಟ್‌ನಿಂದ ಹಲ್ಲೆ ಮಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಮಹಿಳಾ ಬೌನ್ಸರ್‌ಗಳ ವರ್ತನೆಗೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಪುರುಷರ ಮೇಲೆ ಬೆಲ್ಟ್‌ನಿಂದ ಹಲ್ಲೆ ನಡೆಸಿದ ಮಹಿಳಾ ಬೌನ್ಸರ್‌ಗಳು

-

Priyanka P Priyanka P Oct 25, 2025 1:04 PM

ಛತ್ತರ್‌ಪುರ: ಮಹಿಳಾ ಬೌನ್ಸರ್‌ಗಳು ಜಾತ್ರೆಯಲ್ಲಿ ಜನರೊಂದಿಗೆ ಅನುಚಿತವಾಗಿ ವರ್ತಿಸಿ, ಬೆಲ್ಟ್‌ನಿಂದ ಹಲ್ಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಛತ್ತರ್‌ಪುರ (Chhatarpur) ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral Video) ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಮಹಿಳಾ ಬೌನ್ಸರ್‌ಗಳ (Female Bouncers) ವರ್ತನೆಗೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಇಬ್ಬರು ಮಹಿಳಾ ಬೌನ್ಸರ್‌ಗಳು ಕೋಪಗೊಂಡು, ಜನರನ್ನು ಬೆಲ್ಟ್‌ನಿಂದ ಹೊಡೆಯುವುದನ್ನು ವಿಡಿಯೊದಲ್ಲಿ ಕಾಣಬಹುದು. ಇದು ಅವರ ನಡುವೆ ಜಗಳಕ್ಕೆ ಕಾರಣವಾಯಿತು. ಮತ್ತೊಂದು ವಿಡಿಯೊದಲ್ಲಿ, ಇಬ್ಬರು ಮಹಿಳಾ ಬೌನ್ಸರ್‌ಗಳು, ಒಬ್ಬ ವ್ಯಕ್ತಿಯನ್ನು ಅವನ ಟಿ-ಶರ್ಟ್ ಹಿಡಿದು ಹೊರಗೆ ಎಳೆಯುತ್ತಿರುವುದು ಕಂಡುಬಂದಿದೆ. ಪೊಲೀಸ್ ಮಧ್ಯಪ್ರವೇಶಿಸಿ ಎಲ್ಲರನ್ನೂ ಬೇರ್ಪಡಿಸುವವರೆಗೂ ಗಲಾಟೆ ಮುಂದುವರೆಯಿತು. ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು.

ಈ ಜಗಳ ಯಾಕಾಗಿ ನಡೆದಿದೆ ಎಂಬ ಬಗ್ಗೆ ಕಾರಣ ತಿಳಿದುಬಂದಿಲ್ಲ. ಮಹಿಳಾ ಬೌನ್ಸರ್‌ಗಳು ತಮ್ಮ ಕೆಲಸ ಮತ್ತು ಲಿಂಗವನ್ನು ದುರುಪಯೋಗಪಡಿಸಿಕೊಂಡು ಪುರುಷರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮಾಹಿತಿಯ ಪ್ರಕಾರ, ಛತ್ತರ್‌ಪುರದಲ್ಲಿ ಆಯೋಜಿಸಲಾದ ಜಲ ವಿಹಾರ್ ಮೇಳದಲ್ಲಿ ಈ ಘಟನೆ ನಡೆದಿದೆ.

ವಿಡಿಯೊ ವೀಕ್ಷಿಸಿ:



ಇಂತಹ ಘಟನೆ ನಡೆದಿರುವುದು ಇದೇ ಮೊದಲಲ್ಲ ಎಂದು ಹೇಳಲಾಗುತ್ತಿದೆ. ಈ ಹಿಂದೆಯೂ ಸಹ, ಅದೇ ಜಾತ್ರೆಯಲ್ಲಿ ಮಹಿಳಾ ಬೌನ್ಸರ್‌ಗಳು ಜನರನ್ನು ಥಳಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು. ಸದ್ಯ, ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಇದನ್ನೂ ಓದಿ: Viral Video: ಫ್ಯಾಷನ್ ಲೋಕಕ್ಕೆ ಲಗ್ಗೆ ಇಟ್ಟ ಪಟಾಪಟಿ ಚಡ್ಡಿ! ಬಹಳ ಟ್ರೆಂಡಿಂಗ್‌ನಲ್ಲಿದೆ ಈ ವಿಡಿಯೊ

ಪತ್ನಿಯ ಲವ್ವರ್‌ ಎಂದು ತಪ್ಪಾಗಿ ಭಾವಿಸಿ ಯುವಕನ ಮೇಲೆ ಹಲ್ಲೆ

ಹೋಟೆಲ್ ಒಂದರಲ್ಲಿ ಹೆಂಡತಿಯೊಂದಿಗೆ ಪರಪುರುಷನಿರುವುದನ್ನು ನೋಡಿದ ನಂತರ ತಪ್ಪಾಗಿ ಅರ್ಥೈಸಿಕೊಂಡ ಪತಿಯೊಬ್ಬ ಆ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿತ್ತು. ನಿನ್ನ ಹೆಂಡತಿಯ ಗೆಳೆಯ ನಾನಲ್ಲ ಎಂದು ಎಷ್ಟೇ ಬೇಡಿಕೊಂಡರೂ ಕೇಳದ ಪತಿಮಹಾಶಯ ಮನಸೋ ಇಚ್ಛೆ ಹಲ್ಲೆ ನಡೆಸಿದ್ದ.

ಪತಿಗೆ ತನ್ನ ಹೆಂಡತಿ ಹೋಟೆಲ್‌ನಲ್ಲಿ ತನ್ನ ಪ್ರಿಯಕರನನ್ನು ಭೇಟಿಯಾಗಿದ್ದಾಳೆ ಎಂಬ ಸುಳಿವು ಸಿಕ್ಕಿತ್ತು. ಪತಿಯು ಸ್ಥಳಕ್ಕೆ ತಲುಪಿದಾಗ, ತನ್ನ ಹೆಂಡತಿಯನ್ನು ಯುವಕನೊಂದಿಗೆ ನೋಡಿ ಸಾರ್ವಜನಿಕವಾಗಿ ಹೊಡೆಯಲು ಪ್ರಾರಂಭಿಸಿದನು. ತನ್ನ ವೈಯಕ್ತಿಕ ಕೆಲಸಕ್ಕಾಗಿ ಹೋಟೆಲ್‌ಗೆ ಹೋಗಿದ್ದ ಯುವಕನನ್ನು ಆಕೆಯ ಕುಟುಂಬವು ಮಹಿಳೆಯ ಜೊತೆಗಾರ ಎಂದು ತಪ್ಪಾಗಿ ಅರ್ಥೈಸಿಕೊಂಡಿದೆ. ಮಹಿಳೆಯ ಕುಟುಂಬ ಸದಸ್ಯರು ಆತನನ್ನು ಕ್ರೂರವಾಗಿ ಥಳಿಸಿದ್ದಾರೆ. ವರದಿಗಳ ಪ್ರಕಾರ, ಆತನನ್ನು ಕಬ್ಬಿಣದ ರಾಡ್‌ನಿಂದ ಕೂಡ ಥಳಿಸಲಾಯಿತು.