ಅಮೆರಿಕದಲ್ಲಿ ಬಿಹಾರಿಯ ಚಹಾ, ಅವಲಕ್ಕಿ ಬಲೇ ದುಬಾರಿ; ನಮ್ಮ ತಿಂಗಳ ಸಂಬಳಕ್ಕೆ ಇದು ಸಮ ಎಂದು ನೆಟ್ಟಿಗರು
Viral Video: ವಿದೇಶಿ ನೆಲದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ವಿಶೇಷ ರೀತಿಯಲ್ಲಿ ವ್ಯಾಪಾರ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ವಿಶ್ವದ ಅತ್ಯಂತ ದುಬಾರಿ ನಗರಗಳಲ್ಲಿ ಒಂದಾದ ಅಮೆರಿಕದ ಲಾಸ್ ಏಂಜಲೀಸ್‌ನ ಬೀದಿಗಳಲ್ಲಿ, ಬಿಹಾರದ ವ್ಯಕ್ತಿಯೊಬ್ಬರು ನಡೆಸುತ್ತಿರುವ ಚಹಾ ಮತ್ತು ಅವಲಕ್ಕಿ ಅಂಗಡಿಯು ನೆಟ್ಟಿಗರ ಗಮನ ಸೆಳೆದಿದೆ. ಸದ್ಯ ಇದರ ಬೆಲೆ ಕೇಳಿಯೇ ಜನರು ದಂಗಾಗಿದ್ದಾರೆ.
ಒಂದು ಕಪ್ ಚಹಾ ಬೆಲೆ ಕೇಳಿ ಬೆಚ್ಚಿಬಿದ್ದ ಭಾರತೀಯರು -
ವಾಷಿಂಗ್ಟನ್, ಡಿ.11: ವಿವಿಧ ದೇಶದಲ್ಲಿ ವಿವಿಧ ರೀತಿಯ ಸಂಸ್ಕೃತಿ, ಆಚಾರ -ವಿಚಾರ, ಆಹಾರ ಪದ್ಧತಿಗಳಿದ್ದು, ಹೆಚ್ಚಿನವರು ಇದನ್ನು ಅನುಭವಿಸಲೆಂದೇ ಪ್ರಯಾಣ ಮಾಡುವವರು ಇದ್ದಾರೆ. ಅಂತೆಯೇ ಇದೀಗ ವಿದೇಶಿ ನೆಲದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ವಿಶೇಷ ವ್ಯಾಪಾರ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ವಿಶ್ವದ ಅತ್ಯಂತ ದುಬಾರಿ ನಗರಗಳಲ್ಲಿ ಒಂದಾದ ಬೆಂಗಳೂರಿನ ಲಾಸ್ ಏಂಜಲೀಸ್‌ನ ಬೀದಿಗಳಲ್ಲಿ, ಬಿಹಾರದ ವ್ಯಕ್ತಿಯೊಬ್ಬರು ನಡೆಸುತ್ತಿರುವ ಚಹಾ ಮತ್ತು ಅವಲಕ್ಕಿ ಅಂಗಡಿಯು ನೆಟ್ಟಿಗರ ಗಮನ ಸೆಳೆದಿದೆ. ಸದ್ಯ ಇದರ ಬೆಲೆ ಕೇಳಿಯೇ ಜನರು ದಂಗಾಗಿದ್ದು ಈ ವಿಡಿಯೊ ಭಾರಿ ವೈರಲ್ (Viral Video) ಆಗುತ್ತಿದೆ.
ಅಮೆರಿಕದ ಐಷಾರಾಮಿ ನಗರವಾದ ಲಾಸ್ ಏಂಜಲೀಸ್‌ನಲ್ಲಿ ಬಿಹಾರ ಮೂಲದ ವ್ಯಕ್ತಿಯೊಬ್ಬರು ಚಹಾ ಮತ್ತು ಅವಲಕ್ಕಿ ತಿಂಡಿಯ ಸ್ಟಾಲ್ ತೆರೆದಿದ್ದು ಸಿಕ್ಕ ಪಟ್ಟೆ ಖ್ಯಾತಿ ಪಡೆದಿದೆ. ಸಾಮಾನ್ಯವಾಗಿ ಭಾರತದಲ್ಲಿ 20ರಿಂದ 50 ರುಪಾಯಿಗೆ ಸಿಗುವ ಈ ತಿಂಡಿಗಳು ಇಲ್ಲಿ ದುಬಾರಿ ಬೆಲೆಗೆ ಮಾರಾಟ ಆಗುತ್ತಿದೆ. 782 ರುಪಾಯಿ ಬೆಲೆಯ ಒಂದು ಕಪ್ ಚಾಯ್ ಮತ್ತು ಸುಮಾರು 1,512 ರುಪಾಯಿಯ ಒಂದು ಪ್ಲೇಟ್ ಅವಲಕ್ಕಿಯನ್ನು ಅವರು ಮಾರಾಟ ಮಾಡುತ್ತಿದ್ದಾರೆ.
ವಿಡಿಯೊ ನೋಡಿ:
ಸದ್ಯ ಈ ಬೆಲೆಗಳನ್ನು ಕೇಳಿದ ಭಾರತೀಯರು ಶಾಕ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ತಮಾಷೆಯ ಕಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು "5 ಪ್ಲೇಟ್ ಪೋಹಾ ಮತ್ತು 5 ಕಪ್ ಚಾಯ್ ನನ್ನ ಮಾಸಿಕ ಸಂಬಳ" ಎಂದು ತಮಾಷೆ ಮಾಡಿದ್ದಾರೆ. ಇನ್ನೊಬ್ಬರು ʼʼಇಷ್ಟೊಂದು ದುಬಾರಿಯೇ?ʼʼ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, ʼʼಲಾಸ್ ಏಂಜಲೀಸ್‌ನ ಅತಿಯಾದ ಜೀವನ ವೆಚ್ಚಕ್ಕೆ ಇದು ಸರಿಯಾಗಿದೆʼʼ ಎಂದು ಬರೆದುಕೊಂಡಿದ್ದಾರೆ.
ರಾಕ್ಷಸಿಯಂತೆ ವರ್ತಿಸಿದ ಬಿಜೆಪಿ ಕಾರ್ಯಕರ್ತೆಯ ಇನ್ನೊಂದು ವಿಡಿಯೊ ಬಯಲು
ಈ ಚಿಕ್ಕ ಸ್ಟಾಲ್ ಖ್ಯಾತಿ ಪಡೆಯಲು ಅವರ ನಡತೆಯೇ ಕಾರಣ. ಅಮೆರಿಕದಂತಹ ದೇಶದಲ್ಲಿದ್ದರೂ ಅವರು ತಮ್ಮ ಬಿಹಾರಿ ಸಂಸ್ಕೃತಿಯನ್ನು ಮರೆತಿಲ್ಲ. ಗ್ರಾಹಕರೊಂದಿಗೆ ಹಿಂದಿಯಲ್ಲಿ ಮಾತನಾಡುತ್ತ ದೇಶಿ ರುಚಿಯನ್ನೇ ನೀಡುತ್ತಿದ್ದಾರೆ. ಹಾಗಾಗಿ ವಿದೇಶದಲ್ಲಿ ಇವರ ಈ ಬ್ಯುಸಿನೆಸ್ ಬಹಳಷ್ಟು ಖ್ಯಾತಿ ಪಡೆದಿದೆ. ಹಲವರು ಬಳಕೆದಾರರು ಇವರ ಕಾಯಕವನ್ನು ಶ್ಲಾಘಿಸಿದರೆ ಇನ್ನೂ ಕೆಲವರು ಇವರು ಎಲ್ಲರಿಗೂ ಸ್ಫೂರ್ತಿ ಎಂದು ಬರೆದುಕೊಂಡಿದ್ದಾರೆ.