ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಭಾರತ ಕೊಳೆಗೇರಿ, ಕಸದ ರಾಶಿಗಳಿರುವ ದೇಶವಲ್ಲ; ಇಂಡಿಯಾ ಸುಂದರವಾಗಿದೆ ಎಂದ ವಿದೇಶಿ ವ್ಲಾಗರ್

ವಿದೇಶಿ ವ್ಲಾಗರ್ ಒಬ್ಬರು ಭಾರತದ ಬಗ್ಗೆ ಮಾಡಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ವಿದೇಶಿಯರು ಅಂದುಕೊಳ್ಳುವುದಕ್ಕಿಂತ ಸುಂದರವಾಗಿದೆ ಭಾರತ ಎಂದು ವಿದೇಶಿ ವ್ಲಾಗರ್ ಹೇಳಿದ್ದು, ಹಲವರು ಕಮೆಂಟ್‌ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.

ಭಾರತ ಸುಂದರವಾಗಿದೆ ಎಂದ ವಿದೇಶಿ ವ್ಲಾಗರ್

Priyanka P Priyanka P Aug 23, 2025 3:35 PM

ದೆಹಲಿ: ವಿದೇಶಿ ವ್ಲಾಗರ್ ಒಬ್ಬರು ಭಾರತದ ಬಗ್ಗೆ ಮಾಡಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ (Viral Video) ಆಗಿದೆ. ಬಡತನ, ಜನದಟ್ಟಣೆ ಅಥವಾ ಕಸದ ರಾಶಿಗಳ ಮೇಲೆ ಕೇಂದ್ರೀಕರಿಸುವ ಸಾಮಾನ್ಯ ಚಿತ್ರಣಗಳಿಗಿಂತ ಭಿನ್ನವಾಗಿ ಈ ವ್ಲಾಗರ್ (Vlogger) ದೇಶದ ವಿಭಿನ್ನ ಮುಖ, ಆಧುನಿಕ ಬೀದಿಗಳು, ಬ್ರ್ಯಾಂಡೆಡ್‌ ಅಂಗಡಿಗಳು ಮತ್ತು ಸ್ವಚ್ಛವಾದ ಪರಿಸರದ ದೃಶ್ಯವನ್ನು ವಿಡಿಯೊದಲ್ಲಿ ತೋರಿಸಿದ್ದಾರೆ.

ಬಹುತೇಕ ವಿದೇಶಿ ಪ್ರವಾಸಿಗರು ಹಂಚಿಕೊಳ್ಳುವ ವಿಡಿಯೊಗಳು ಭಾರತದಲ್ಲಿನ ಸಮಸ್ಯೆಗಳನ್ನು ಎತ್ತಿ ತೋರಿಸಿವೆ. ಉದಾಹರಣೆಗೆ ಕಸ ಹಾಕುವುದು, ಕಳಪೆ ಮೂಲಸೌಕರ್ಯ ಅಥವಾ ಅನೈರ್ಮಲ್ಯ ಪರಿಸ್ಥಿತಿಗಳು. ಈ ಚಿತ್ರಣಗಳು ನಾಗರಿಕ ಪ್ರಜ್ಞೆ ಮತ್ತು ನಗರ ನಿರ್ವಹಣೆಯ ಕುರಿತು ಚರ್ಚೆಗಳನ್ನು ಹುಟ್ಟುಹಾಕುತ್ತವೆ. ಈ ಮಧ್ಯೆ, ಇದೀಗ ವಿದೇಶಿ ವ್ಲಾಗರ್ ಮಾಡಿರುವ ವಿಡಿಯೊ ಭಾರತವು ಊಹಿಸುವುದಕ್ಕಿಂತ ಭಿನ್ನವಾಗಿದೆ ಎಂಬುದನ್ನು ತೋರಿಸಿದೆ.



<blockquote class="twitter-tweet"><p lang="en" dir="ltr">A video by an international vlogger has gone viral, offering an unfiltered take on India that challenges long-held stereotypes. The travelogue, filmed across multiple cities, showcases Indian hospitality, cultural richness, and scenic landscapes. Tourism officials welcomed the… <a href="https://t.co/KPC836FvD0">pic.twitter.com/KPC836FvD0</a></p>&mdash; The Logical Indian (@LogicalIndians) <a href="https://twitter.com/LogicalIndians/status/1958430052791545885?ref_src=twsrc%5Etfw">August 21, 2025</a></blockquote> <script async src="https://platform.twitter.com/widgets.js" charset="utf-8"></script>

ಆ್ಯಪಲ್ ಮತ್ತು ನೈಕ್‍ನಂತಹ ಜಾಗತಿಕ ಮಳಿಗೆಗಳಿರುವ ಬೀದಿಗಳಲ್ಲಿ ವ್ಲಾಗರ್ ನಡೆದುಕೊಂಡು ಹೋಗುತ್ತಿರುವುದು ವಿಡಿಯೊದಲ್ಲಿ ಕಂಡುಬಂದಿದೆ. ಆ ಪ್ರದೇಶವನ್ನು ಹೊಗಳುತ್ತಾ ಅವರು, ಇದು ತುಂಬಾ ಚೆನ್ನಾಗಿದೆ, ಕಸವಿಲ್ಲ, ಜನದಟ್ಟಣೆ ಕೂಡ ಇಲ್ಲ ಎಂದು ವಿಡಿಯೊದಲ್ಲಿ ಹೇಳಿದ್ದಾರೆ. ಈ ವಿಡಿಯೊವನ್ನು ಎಕ್ಸ್ ಹಾಗೂ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ರೆಡ್ಡಿಟ್ ಮರುಪೋಸ್ಟ್‌ನಲ್ಲಿ ‘ಜಗತ್ತಿಗೆ ಅವರಂತಹ ಪ್ರವಾಸಿಗರು ಬೇಕು’ ಎಂಬ ಶೀರ್ಷಿಕೆ ನೀಡಲಾಗಿದೆ.

ಆದರೆ ಈ ವಿಡಿಯೊಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಒಬ್ಬ ಬಳಕೆದಾರರು ಈ ವಿಡಿಯೊವನ್ನು ಗುರುಗ್ರಾಮದ ಸೈಬರ್‌ಸಿಟಿಯಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಇದು ಐಷಾರಾಮಿ ಮಾಲ್‌ಗಳು ಮತ್ತು ಕಾರ್ಪೊರೇಟ್ ಕೇಂದ್ರಗಳಿಗೆ ಹೆಸರುವಾಸಿಯಾಗಿದೆ. ಮತ್ತೊಬ್ಬರು ವಿಷಯವು ದಾರಿತಪ್ಪಿಸುವಂತಿದೆ ಎಂದು ಹೇಳಿದ್ದಾರೆ. ವಾಸ್ತವವನ್ನು ನಿರ್ಲಕ್ಷಿಸಿ ಒಂದು ಸಣ್ಣ ಸ್ಥಳವನ್ನು ಆರಿಸಿಕೊಳ್ಳಲಾಗಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಇತರರು ಈ ಸಕಾರಾತ್ಮಕತೆಯನ್ನು ಮೆಚ್ಚಿಕೊಂಡಿದ್ದಾರೆ. ಭಾರತ ನಿಜವಾಗಿಯೂ ಇದಕ್ಕಿಂತ ಉತ್ತಮವಾಗುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದ್ದಾರೆ.

ಈ ಚರ್ಚೆಯು ಒಂದು ಪ್ರಮುಖ ಸತ್ಯವನ್ನು ಎತ್ತಿ ತೋರಿಸುತ್ತದೆ. ಒಂದೆಡೆ, ದೇಶವು ಜನದಟ್ಟಣೆ, ಮಾಲಿನ್ಯ ಮತ್ತು ತ್ಯಾಜ್ಯ ನಿರ್ವಹಣೆಯ ಸಮಸ್ಯೆಗಳೊಂದಿಗೆ ಹೋರಾಡುತ್ತಿದೆ. ಮತ್ತೊಂದೆಡೆ, ಬೆಂಗಳೂರು, ಗುರುಗ್ರಾಮ, ಹೈದರಾಬಾದ್ ಮತ್ತು ಮುಂಬೈನಂತಹ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರ ಪ್ರದೇಶಗಳನ್ನು ಹೊಂದಿದೆ. ಅಲ್ಲಿ ಗಗನಚುಂಬಿ ಕಟ್ಟಡಗಳು, ಬಹುರಾಷ್ಟ್ರೀಯ ಕಂಪನಿಗಳು ಮತ್ತು ಮಾಲ್‌ಗಳು ಭಾರತದ ಜಾಗತಿಕ ಮಹತ್ವಾಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತವೆ.

ಈ ವಿಡಿಯೊದಲ್ಲಿ ವಾಸ್ತವದ ಒಂದು ಭಾಗವನ್ನು ಮಾತ್ರ ತೋರಿಸಿದರೂ, ಭಾರತವು ಕೇವಲ ಕೊಳೆಗೇರಿಗಳ ದೇಶವಲ್ಲ. ಅಭಿವೃದ್ಧಿ, ನಾವೀನ್ಯತೆ ಮತ್ತು ಆಧುನಿಕ ಮೂಲಸೌಕರ್ಯಗಳ ದೇಶ ಎಂದು ಅನೇಕ ಭಾರತೀಯರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral Video: ಮೊಣಕಾಲುದ್ದ ನೀರಿದ್ದರೂ ಎಣ್ಣೆ ಪಾರ್ಟಿ; ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕಿವಿನ್ ಪೀಟರ್ಸನ್ ಪ್ರತಿಕ್ರಿಯೆ ಹೀಗಿತ್ತು