Mumbai Flood: ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ವ್ಯಕ್ತಿ; ದೀರ್ಘ ಪ್ರಯತ್ನದ ನಂತರ ರಕ್ಷಣೆ, ಇಲ್ಲಿದೆ ವೈರಲ್ ವಿಡಿಯೊ
Viral Video: ಮಹಾನಗರಿ ಮುಂಬೈನಲ್ಲಿ ಬಾರಿ ಮಳೆಯಾಗುತ್ತಿದ್ದು, ಪ್ರವಾಹ ಉಂಟಾಗಿದೆ. ಈ ನಡುವೆ ವ್ಯಕ್ತಿಯೊಬ್ಬ ನದಿಯಲ್ಲಿ ಈಜಲು ಹೋಗಿ ಕೊಚ್ಚಿ ಹೋಗಿದ್ದಾನೆ. ದೀರ್ಘ ಪ್ರಯತ್ನದ ನಂತರ ಸ್ಥಳೀಯರು ಆತನನ್ನು ರಕ್ಷಿಸಿದ್ದಾರೆ. ಪ್ರಾಣ ರಕ್ಷಣೆಗಾಗಿ ಆತ ನದಿಯ ತಡೆಗೋಡೆಯನ್ನು ಹಿಡಿದಿದ್ದ ವಿಡಿಯೊ ವೈರಲ್ ಆಗಿದೆ.


ಮುಂಬೈ: ಭಾರತದ ವಾಣಿಜ್ಯ ನಗರಿ ಮುಂಬೈನಲ್ಲಿ (Mumbai) ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯ ನಡುವೆ, ಈಜಲು ಹೋದಾಗ ಯುವಕನೊಬ್ಬ ಪ್ರವಾಹದಿಂದ (Mumbai Flood) ತುಂಬಿದ ಮಿಥಿ ನದಿಯಲ್ಲಿ ಕೊಚ್ಚಿ ಹೋಗಿದ್ದಾನೆ. ಅದೃಷ್ಟವಶಾತ್, ಪೊವಾಯಿಯ ಫುಲೇನಗರ ಪ್ರದೇಶದ ಬಳಿ ದೀರ್ಘ ಪ್ರಯತ್ನದ ನಂತರ ಅವನನ್ನು ರಕ್ಷಿಸಲಾಯಿತು. 30 ವರ್ಷದ ವ್ಯಕ್ತಿಯನ್ನು ಅಮನ್ ಇಮ್ತಿಯಾಜ್ ಸಯ್ಯದ್ ಎಂದು ಗುರುತಿಸಲಾಗಿದೆ.
ಸಯ್ಯದ್ ಆಗಸ್ಟ್ 19ರಂದು ಬೆಳಗ್ಗೆ 11:30ರ ಸುಮಾರಿಗೆ ಮಿಥಿ ನದಿಯಲ್ಲಿ ಕೊಚ್ಚಿ ಹೋಗಿದ್ದಾನೆ. ಮೊದಲಿಗೆ ಭಾರಿ ನದಿಯ ಹರಿವಿನ ನಡುವೆ ಗೋಡೆಯನ್ನು ಹಿಡಿದಿದ್ದ. ಆದರೆ ಹಿಡಿತವನ್ನು ಕಳೆದುಕೊಂಡು ಕೊಚ್ಚಿ ಹೋಗಿದ್ದಾನೆ. ಈ ಘಟನೆಯನ್ನು ಅಲ್ಲಿ ನೆರೆದಿದ್ದವರು ವಿಡಿಯೊದಲ್ಲಿ ಸೆರೆ ಹಿಡಿದಿದ್ದಾರೆ. ಅಮನ್ ಇಮ್ತಿಯಾಜ್ ಸಯ್ಯದ್ ಪೊವಾಯಿಯ ಫಿಲ್ಟರ್‌ಪಾಡಾ ಪ್ರದೇಶದಲ್ಲಿ ವಾಸಿಸುತ್ತಿದ್ದು, ವೃತ್ತಿಯಲ್ಲಿ ಶಿಕ್ಷಕ. ಆತ ತನ್ನ ಸ್ನೇಹಿತರೊಂದಿಗೆ ಈಜಲು ಮಿಥಿ ನದಿಗೆ ಹೋಗಿದ್ದಾನೆ. ಈ ವೇಳೆ ಇದ್ದಕ್ಕಿದ್ದಂತೆ ನದಿಯ ಹರಿವು ಹೆಚ್ಚಾಗಿದ್ದು, ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾನೆ. ಕೂಡಲೇ ಸ್ಥಳೀಯರು ಸಹಾಯ ಮಾಡಲು ಧಾವಿಸಿದರು. ಅವರು ಹಗ್ಗವನ್ನು ಕೆಳಕ್ಕೆ ಇಳಿಸಿದರು. ಆದರೆ ಹಗ್ಗವನ್ನು ಹಿಡಿಯಲು ಸಯ್ಯದ್‍ಗೆ ಸಾಧ್ಯವಾಗಲಿಲ್ಲ.
ವಿಡಿಯೊ ವೀಕ್ಷಿಸಿ:
पवई फिल्टरपाडा - फुलेनगर परिसरातून युवक पुराच्या पाण्यात वाहून गेल्याची घटना घडली आहे
— Anand N. Ingle (@anand_ingle89) August 19, 2025
पावसामुळे वाहून जाणाऱ्या व्यक्तीला वाचवण्यात यश आले आहे. #MumbaiRains #powai @MumbaiWeatherm1 @MumbaiRainApp @mumbaiwea pic.twitter.com/kQCRdiB7eP
ಘಟನೆಯ ಬಗ್ಗೆ ಮುಂಬೈಯ ವಲಯ 10ರ ಉಪ ಪೊಲೀಸ್ ಆಯುಕ್ತ ದತ್ತ ನಲವಾಡೆ ಮಾತನಾಡಿ, “ಭಾರಿ ಪ್ರವಾಹದಿಂದಾಗಿ ಅವನಿಗೆ ಈಜಲು ಸಾಧ್ಯವಾಗಲಿಲ್ಲ. ಸಹಾಯಕ್ಕಾಗಿ ಅವನು ಕಿರುಚುತ್ತಿದ್ದಂತೆ, ಸ್ಥಳೀಯ ನಿವಾಸಿಗಳು ತಕ್ಷಣವೇ ಅವನನ್ನು ರಕ್ಷಿಸಲು ಧಾವಿಸಿದರು. ಅವನು ನದಿಯ ತಡೆಗೋಡೆಯನ್ನು ಹಿಡಿದಿದ್ದಾಗ, ಜನರು ಹಗ್ಗವನ್ನು ನದಿಗೆ ಇಳಿಸಿ ಅವನನ್ನು ರಕ್ಷಿಸಿದರು” ಎಂದು ಹೇಳಿದರು.
ವರದಿಗಳ ಪ್ರಕಾರ, ಮಧ್ಯಾಹ್ನ ಪೊವೈ ಸರೋವರದಲ್ಲಿ ಜನರ ಗುಂಪೊಂದು ಈಜುತ್ತಿರುವುದು ಕಂಡುಬಂದಿದೆ. ಈ ವೇಳೆ ಪೊಲೀಸರು ಸ್ಥಳಕ್ಕಾಗಮಿಸಿದಾಗ ಓಡಿ ಹೋಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊವೊಂದರಲ್ಲಿ, ಸ್ಪೈಡರ್ ಮ್ಯಾನ್ ವೇಷಭೂಷಣ ಧರಿಸಿದ ವ್ಯಕ್ತಿಯೊಬ್ಬ ರಸ್ತೆಯ ಮಧ್ಯದಲ್ಲಿ ತುಂಬಿದ್ದ ಪ್ರವಾಹದ ನೀರನ್ನು ಹೊರ ಹಾಕುತ್ತಿರುವುದನ್ನು ತೋರಿಸಲಾಗಿದೆ.